/newsfirstlive-kannada/media/media_files/2025/09/14/gill-and-abhishek-sharma-2025-09-14-08-36-36.jpg)
India vs Pakisthan match: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತಕಾರಿ ಸುದ್ದಿ ಸಿಕ್ಕಿದೆ. ಉಪನಾಯಕ ಶುಬ್ಮನ್ ಗಿಲ್ ಗಾಯಗೊಂಡಿದ್ದು, ತಂಡದ ಟೆನ್ಷನ್ ಹೆಚ್ಚಿಸಿದೆ.
2025ರ ಏಷ್ಯಾ ಕಪ್‌ಗಾಗಿ ಟೀಮ್ ಇಂಡಿಯಾದ ಉಪನಾಯಕನಾಗಿ ನೇಮಕಗೊಂಡಿರುವ ಗಿಲ್, ತರಬೇತಿಯ ಸಮಯದಲ್ಲಿ ಗಾಯಗೊಂಡಿದ್ದಾರೆ. ಗಿಲ್ ಅವರ ಕೈಗೆ ಗಾಯವಾಗಿದ್ದು, ನೋವಿನಿಂದ ಬಳಲಿದ್ದಾರೆ ಎಂದು ವರದಿಯಾಗಿದೆ.
ಇನ್ನು ಯುಎಇ ವಿರುದ್ಧದ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಗಿಲ್ ಉತ್ತಮ ಟಚ್‌ನಲ್ಲಿ ಕಾಣಿಸಿಕೊಂಡರು. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನವೇ ಗಾಯಗೊಂಡಿರೋದು ತಂಡದ ಆತಂಕವನ್ನು ಹೆಚ್ಚು ಮಾಡಿದೆ. ವರದಿಗಳ ಪ್ರಕಾರ, ನೆಟ್ಸ್ನಲ್ಲಿ ಅಭ್ಯಾಸ ಮಾಡ್ತಿದ್ದ ವೇಳೆ ಗಿಲ್ ಗಾಯಗೊಂಡಿದ್ದಾರೆ. ಕೂಡಲೇ ವೈದ್ಯರು ಅಲ್ಲಿಗೆ ಹೋಗಿ ಪರಿಶೀಲನೆ ಮಾಡಿದ್ದಾರೆ. ನಂತರ ಅವರು ನೆಟ್ಸ್ನಿಂದ ಹೊರಬಂದಿದ್ದಾರೆ.
ಗಾಯದ ನಂತರ ಗಿಲ್, ಐಸ್ ಬಾಕ್ಸ್ ಮೇಲೆ ಕುಳಿತು ಗಾಯಗೊಂಡ ಕೈಯನ್ನು ಹಿಡಿದಿರೋದು ಕಂಡುಬಂದಿದೆ. ಆ ಸಮಯದಲ್ಲಿ ನಾಯಕ ಸೂರ್ಯ ಮತ್ತು ಕೋಚ್ ಗಂಭೀರ್ ವಿಚಾರಿಸುತ್ತಿರೋದು ಕಂಡುಬಂದಿದೆ. ಇದೇ ವೇಳೆ ಅಭಿಷೇಕ್ ಶರ್ಮಾ, ಪಾನೀಯ ನೀಡಿದ್ದಾರೆ. ಮಾಹಿತಿಗಳ ಪ್ರಕಾರ, ಗಿಲ್ ಗಾಯ ಅಷ್ಟೊಂದು ಗಂಭೀರವಾಗಿಲ್ಲ. ಇವತ್ತಿನ ಪಂದ್ಯವನ್ನು ಆಡೋದು ಖಚಿತವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಪಾಕ್ಗೆ ಸೂರ್ಯ ಎಚ್ಚರಿಕೆ.. ತ್ರಿವಳಿಗಳಿಗೆ ಕಾದಿದೆ ಮಾರಿಹಬ್ಬ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ