Advertisment

ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಮದುವೆ.. ಹುಡುಗ ಯಾರು..?

ಸದ್ಯ ಹರ್ಮನ್​​ಪ್ರೀತ್​ ಕೌರ್ ತಂಡ ವಿಶ್ವಕಪ್​ನಲ್ಲಿ ಆಡಿದ 4 ಪಂದ್ಯಗಳಲ್ಲಿ 2 ರಲ್ಲಿ ಗೆದ್ದು, 2 ಮ್ಯಾಚ್​ಗಳಲ್ಲಿ ಸೋತಿದೆ. ಸ್ಮೃತಿ ಮಂದಾನ ಹಾಗೂ ಪಲಾಶ್ ಮುಚ್ಚಲ್ ಅವರು ತಾವು ಜೋಡಿಯಾಗಿರುವ ಪೋಟೋಗಳನ್ನು ಇನ್​ಸ್ಟಾದಲ್ಲಿ ಪೋಸ್ಟ್​ ಮಾಡುತ್ತಿರುತ್ತಾರೆ.

author-image
Bhimappa
Smriti_Mandhana
Advertisment

ಇಂದು ಮಧ್ಯಾಹ್ನ ಭಾರತದ ಹಾಗೂ ಇಂಗ್ಲೆಂಡ್​ ಮಹಿಳಾ ತಂಡಗಳ ನಡುವೆ ವಿಶ್ವಕಪ್​ ಪಂದ್ಯ ನಡೆಯಲಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ವುಮೆನ್ಸ್​ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Advertisment

ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಅವರು ಮಧ್ಯಪ್ರದೇಶದ ಇಂದೋರ್ ಮೂಲದ ಮ್ಯೂಸಿಕ್​ ಡೈರೆಕ್ಟರ್​, ಸಿನಿಮಾ ನಿರ್ಮಾಪಕ ಪಲಾಶ್ ಮುಚ್ಚಲ್ ಅವರ ಜೊತೆ 7 ಹೆಜ್ಜೆ ಹಾಕಲಿದ್ದಾರೆ. ಈ ಸಂಬಂಧ ಮಾತನಾಡಿರುವ ಪಲಾಶ್ ಮುಚ್ಚಲ್ ಅವರು, ನಾವಿಬ್ಬರು ಅತಿ ಶೀಘ್ರದಲ್ಲೇ ಮದುವೆ ಆಗಲಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ. ಇದರಿಂದ ಟೀಮ್ ಇಂಡಿಯಾದ ಸ್ಮೃತಿ ಮಂದಾನ ಸದ್ಯದಲ್ಲೇ ಹಸೆಮಣೆ ಏರುವುದು ಖಚಿತವಾದಂತೆ ಆಗಿದೆ. 

ಇದನ್ನೂ ಓದಿ: ಟೀಮ್ ಇಂಡಿಯಾಗೆ ಶಾಕ್ ಮೇಲೆ ಶಾಕ್​​.. ರೋಹಿತ್ ಔಟ್, ವಿರಾಟ್​ ಕೊಹ್ಲಿ ಡಕೌಟ್

Smriti mandana
ಸ್ಮೃತಿ ಮಂದಾನ, ಟೀಂ ಇಂಡಿಯಾ ಆಟಗಾರ್ತಿ

ಇಂಗ್ಲೆಂಡ್​ ವಿರುದ್ಧದ ವಿಶ್ವಕಪ್​ ಪಂದ್ಯಕ್ಕೂ ಮೊದಲೇ ಸ್ಮೃತಿ ಮಂದಾನ ಜೊತೆಗಿನ ಮದುವೆ ಕುರಿತು ಪಲಾಶ್ ಮುಚ್ಚಲ್ ಮಾತನಾಡಿದ್ದಾರೆ. ಇನ್ನು ಇದೇ ವೇಳೆ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಉತ್ತಮ ಸಾಧನೆ ಮಾಡಿ ವರ್ಲ್ಡ್​ಕಪ್ ಎತ್ತಿ ಹಿಡಿಯಲಿ ಎಂದು ತಂಡಕ್ಕೆ ಶುಭ ಕೋರಿದ್ದಾರೆ. ಸದ್ಯ ಹರ್ಮನ್​​ಪ್ರೀತ್​ ಕೌರ್ ತಂಡ ವಿಶ್ವಕಪ್​ನಲ್ಲಿ ಆಡಿದ 4 ಪಂದ್ಯಗಳಲ್ಲಿ 2 ರಲ್ಲಿ ಗೆದ್ದು, 2 ಮ್ಯಾಚ್​ಗಳಲ್ಲಿ ಸೋತಿದೆ. 

Advertisment

Smriti_Mandhana_1

ಸ್ಮೃತಿ ಮಂದಾನ ಹಾಗೂ ಪಲಾಶ್ ಮುಚ್ಚಲ್ ಅವರು ತಾವು ಜೋಡಿಯಾಗಿರುವ ಪೋಟೋಗಳನ್ನು ಇನ್​ಸ್ಟಾದಲ್ಲಿ ಪೋಸ್ಟ್​ ಮಾಡುತ್ತಿರುತ್ತಾರೆ. ಸ್ಮೃತಿ ಮಂದಾನ ಶೀಘ್ರದಲ್ಲೇ ಇಂದೋರ್​ನ ಸೊಸೆಯಾಗಲಿದ್ದಾರೆ. ತಮ್ಮ ಜೀವನದ ಕೆಲ ಅಪ್​ಡೇಟ್ಸ್​ಗಳನ್ನು ಮಂದಾನ ಇನ್​ಸ್ಟಾ ಮೂಲಕ ಆಗಾಗ ಶೇರ್ ಮಾಡುತ್ತಿರುತ್ತಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

World Cup Women's World Cup
Advertisment
Advertisment
Advertisment