ಹೂ ಮಾರಿ ಮಗನ ಕನಸಿಗೆ ನೀರೆರೆದ ತಾಯಿ.. ನಿಸ್ಸಂಕಾ ಕ್ರಿಕೆಟ್​ ಜರ್ನಿ ಶುರುವಾಗಿದ್ದು ದೇವಸ್ಥಾನದಲ್ಲಿ..!

ಬಲಿಷ್ಠ ಆಸ್ಟ್ರೇಲಿಯಾ ಬೌಲಿಂಗ್​ ದಾಳಿಯನ್ನ ಧೂಳಿಪಟ ಮಾಡಿದ ಪಾತುಮ್ ನಿಸ್ಸಂಕಾ ಕ್ರಿಕೆಟ್​ ಲೋಕದಲ್ಲಿ ಸೆನ್ಸೇಷನ್​ ಸೃಷ್ಟಿಸಿದ್ದಾರೆ. ಪಾತುಮ್ ನಿಸ್ಸಾಂಕ ಆಟವನ್ನ ಕ್ರಿಕೆಟ್​ ಲೋಕವೇ ಕೊಂಡಾಡ್ತಿದೆ.

author-image
Ganesh Kerekuli
Pathum Nissanka (1)
Advertisment
  • ಪಾತುಮ್ ನಿಸ್ಸಂಕಾ ಆರ್ಭಟಕ್ಕೆ ಆಸಿಸ್​ ಗರ್ವಭಂಗ
  • ಬಡತನದ ಬೇಗೆ, ಸುನಾಮಿಗೆ ಕೊಚ್ಚಿ ಹೋಗಿತ್ತು ಮನೆ
  • ಕೊಹ್ಲಿಯ ಅಭಿಮಾನಿ, ನಂ 18 ಜೆರ್ಸಿ ಈತನ ಶಕ್ತಿ

ಬಲಿಷ್ಠ ಆಸ್ಟ್ರೇಲಿಯಾ ಬೌಲಿಂಗ್​ ದಾಳಿಯನ್ನ ಧೂಳಿಪಟ ಮಾಡಿದ ಪಾತುಮ್ ನಿಸ್ಸಂಕಾ ಕ್ರಿಕೆಟ್​ ಲೋಕದಲ್ಲಿ ಸೆನ್ಸೇಷನ್​ ಸೃಷ್ಟಿಸಿದ್ದಾರೆ. ಪಾತುಮ್ ನಿಸ್ಸಾಂಕ ಆಟವನ್ನ ಕ್ರಿಕೆಟ್​ ಲೋಕವೇ ಕೊಂಡಾಡ್ತಿದೆ. ಇಂದು ವಿಶ್ವಕಪ್ ಹೀರೋ ಆಗಿರೋ ನಿಸ್ಸಾಂಕ ಜರ್ನಿ ರಣ ರೋಚಕವಾಗಿದೆ. ಈತನ ಸಕ್ಸಸ್​ ಹಿಂದೆ ಬಡತನ ಬೇಗೆಯಿದೆ. ಹೂ ಮಾರ್ತಿದ್ದ ತಾಯಿ ಇದ್ದಾಳೆ. ವಿರಾಟ್​ ಕೊಹ್ಲಿಯ ಸ್ಫೂರ್ತಿಯೂ ಇದೆ. 

ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಮತ್ತೊಮ್ಮೆ ಆಸ್ಟ್ರೇಲಿಯನ್ನರ ಗರ್ವಭಂಗವಾಗಿದೆ. ಜಿಂಬಾಬ್ವೆ ವಿರುದ್ಧ ಮಕಾಡೆ ಮಲಗಿದ್ದ ಮೈಟಿ ಆಸಿಸ್​ ಶ್ರೀಲಂಕಾ ಎದುರು ಸೋಲುಂಡು ಟೂರ್ನಿಯಿಂದಲೇ ಹೊರಬಿದ್ದಿದೆ. ಟ್ರೋಫಿ ಗೆಲ್ಲೋ ಹಾಟ್​ ಫೇವರಿಟ್​ಗಳಾಗಿ ಟೂರ್ನಿಯಲ್ಲಿ ಟ್ರೋಫಿ ಬೇಟೆಯಾಡೋಕೆ ಬಂದ ಕಾಂಗರೂಗಳು ತಾವೇ ಬೇಟೆಯಾಗಿ ಬಿಟ್ಟಿದ್ದಾರೆ. 

ಇದನ್ನೂ ಓದಿ: ದಡದಲ್ಲಿ ನಿಂತು ನೋಡುವಾಗ ಸಮುದ್ರ ಪ್ರಶಾಂತವಾಗಿ ಕಾಣುತ್ತದೆ, ಅದರ ರಭಸ ಇರೋದು ಆಳದಲ್ಲಿ -ಕೆವಿಪಿ ಹೀಗ್ಯಾಕೆ ಹೇಳಿದರು..?

Pathum Nissanka

ನಿಸ್ಸಂಕಾ ಆರ್ಭಟಕ್ಕೆ ಆಸಿಸ್​ ಗರ್ವಭಂಗ.!

ಜಿಂಬಾಬ್ವೆ ವಿರುದ್ಧ ಸೋತ ಆಸಿಸ್​ಗೆ ಶ್ರೀಲಂಕಾ ಎದುರಿನ ಪಂದ್ಯ ಡು ಆರ್​​ ಡೈ ಆಗಿತ್ತು. ಗೆಲುವಿನ ಹಠಕ್ಕೆ ಬಿದ್ದ ಆಸಿಸ್​ ಮೊದಲು ಬ್ಯಾಟಿಂಗ್​ ನಡೆಸಿ 181 ರನ್​​ಗಳ ಬಿಗ್ ಸ್ಕೋರ್​ ಕಲೆ ಹಾಕಿತ್ತು. 182 ರನ್​ಗಳ ಟಾರ್ಗೆಟ್​ ಶ್ರೀಲಂಕಾಗೆ ಸವಾಲಾಗಲೇ ಇಲ್ಲ. ಅದ್ರಲ್ಲೂ, ಲಂಕನ್ ಓಪನರ್​ ಫಾತುಮ್​ ನಿಸ್ಸಂಕಾ ಆರ್ಭಟಕ್ಕೆ ಕಾಂಗರೂಗಳು ಕಂಗಾಲ್ ಆಗಿ ಬಿಟ್ರು. 5 ಸಿಕ್ಸರ್​, 10 ಬೌಂಡರಿ.. ಜಸ್ಟ್​ 52 ಎಸೆತಕ್ಕೆ ಬೊಂಬಾಟ್​ ಸೆಂಚುರಿ ಸಿಡಿಸಿ ಪಾತುಮ್​ ನಿಸ್ಸಂಕಾ ಮೆರೆದಾಡಿದ್ರು. ಪಾತುಮ್ ಆರ್ಭಟಕ್ಕೆ ಆಸಿಸ್​ ಗರ್ವಭಂಗವಾಯ್ತು. 

ಸುನಾಮಿಗೆ ಕೊಚ್ಚಿ ಹೋಗಿತ್ತು ಮನೆ

ಫಾತುಮ್​ ನಿಸ್ಸಂಕಾ ಈಗ ವಿಶ್ವಕಪ್​ ಹೀರೋ ಹೀರೋ ಆಗುವರೆಗಿನ ಜರ್ನಿ ಸುಲಭದ್ದಿರಲಿಲ್ಲ. ಬಡತನದ ಬೇಗೆಯಲ್ಲಿ ಬೆಂದು, ಬೆಂಕಿಯಲ್ಲಿ ಅರಳಿದ ಹೂವು ಈ ಪಾತುಮ್​ ನಿಸ್ಸಂಕಾ. ಶ್ರೀಲಂಕಾದ ಕಲುತರ ಜಿಲ್ಲೆಯಲ್ಲಿ ತೀರಾ ಬಡವರ್ಗದ ಕುಟುಂಬದಲ್ಲಿ ಫಾತುಮ್​ ನಿಸ್ಸಂಕಾ ಜನಿಸಿದ್ದು. ಇದ್ದ ಒಂದು ಮನೆಯೂ ಸುನಾಮಿಗೆ ಕೊಚ್ಚಿ ಹೋಗಿ ಸರ್ಕಾರ ಕಟ್ಟಿಸಿಕೊಟ್ಟಿದ್ದ ನಿರಾಶ್ರೀತರ ಮನೆಯಲ್ಲಿ ಜೀವನ ನಡೆಸ್ತಾ ಇತ್ತು. ಇವ್ರ ಕುಟುಂಬ. ಈ ಬಡತನದ ನಡುವೆಯೂ ಸ್ಕೂಲ್​ ಡೇಸ್​ನಲ್ಲೇ ನಿಸ್ಸಂಕಾಗೆ ಕ್ರಿಕೆಟ್​ ಮೇಲೆ ಅತೀವ ವ್ಯಾಮೋಹ ಹುಟ್ಟಿಕೊಂಡಿತ್ತು. 

ಹೂ ಮಾರಿ ಮಗನ ಕನಸಿಗೆ ನೀರೆರೆದ ತಾಯಿ

ಪಾತುಮ್​ ನಿಸ್ಸಂಕಾ ಇಂದು ಏನೇ ಆಗಿದ್ರೂ ಅದ್ರ ಕ್ರೆಡಿಟ್​ ಸಲ್ಲಬೇಕಾಗಿರೋದು ತಾಯಿಗೆ. ಬಡತನದ ನಡುವೆಯೂ ಮಗನ ಕ್ರಿಕೆಟ್​ ಕನಸಿಗೆ ನೀರೆರೆದಿದ್ದು ತಾಯಿನೇ. ಸಮೀಪದ ದೇವಸ್ಥಾನದ ಬಳಿ ಹೂ ಮಾರಿ ಕುಟುಂಬವನ್ನ ನಡೆಸ್ತಿದ್ದ ತಾಯಿ ಮಗನ ಕ್ರಿಕೆಟ್​ ಕನಸಿಗೆ ಎಂದೂ ಅಡ್ಡಿಯಾಗಲಿಲ್ಲ. ತಾಯಿ ಹೂ ಮಾರ್ತಾ ಇದ್ದ ದೇವಸ್ಥಾನದಲ್ಲೇ ಶುರುವಾಗಿದ್ದು ಪಾತುಮ್ ನಿಸ್ಸಂಕಾ ಕ್ರಿಕೆಟ್​ ಜರ್ನಿ. ಪಾತುಮ್​ ಟ್ಯಾಲೆಂಡ್ ಕೇಳಿ ಇಂಪ್ರೆಸ್​ ಆಗಿದ್ದ ಕೊಲಂಬೋದ ಸ್ಕೂಲ್ ಕೋಚ್​ ಪ್ರದೀಪ್ ನಿಶಾಂತ ಎಂಬವರು ಕಾಂಟ್ರ್ಯಾಕ್ಟ್ ಮಾಡಿಕೊಳ್ಳುವಂತೆ ಹೇಳಿದ್ರು. ಆ ಸ್ಕೂಲ್​ ಕಾಂಟ್ರ್ಯಾಕ್ಟ್​ಗೆ ಆ ದೇವಸ್ಥಾನದಲ್ಲೇ ಪಾತುಮ್ ಸೈನ್​ ಮಾಡಿದ್ರು. ಆ ನಂತರ ಜೀವನವೇ ಬದಲಾಯ್ತು.

ಇದನ್ನೂ ಓದಿ:ಶ್ರೀಕಾಂತ್ ಸತ್ತಿಲ್ಲ.. ರವಿಶಂಕರ್​​ನ ಕಳ್ಳಾಟ ಬಯಲು ಮಾಡಿ ಮರಳಿ ಬಂದ..!

ಪಾತುಮ್​ ನಿಸ್ಸಂಕಾ ಟೀಮ್​ ಇಂಡಿಯಾ ಬ್ಯಾಟ್ಸ್​​ಮನ್​ ವಿರಾಟ್​ ಕೊಹ್ಲಿ ಅಪ್ಪಟ ಅಭಿಮಾನಿ. ಕ್ರಿಕೆಟ್​ ಕರಿಯರ್​ ಆರಂಭಿಸಿದ ದಿನದಿಂದಲೂ ಕೊಹ್ಲಿಯನ್ನ, ಸ್ಪೂರ್ತಿಯಾಗಿ ತೆಗೆದುಕೊಂಡು ಬೆಳೆದುಬಂದ ಆಟಗಾರ. ಅದೇ ಕಾರಣಕ್ಕೆ ಇಂಟರ್​ನ್ಯಾಷನಲ್​ ಕ್ರಿಕೆಟ್​ಗೆ ಡೆಬ್ಯೂ ಆದಾಗ 18 ನಂಬರ್​ ಜೆರ್ಸಿ ಬೇಕೆಂದು ಪಟ್ಟು ಹಿಡಿದು ಪಡೆದುಕೊಂಡಿದ್ದು. ಪಾತುಮ್​ ನಿಸ್ಸಂಕಾ ಜೆರ್ಸಿ ನಂಬರ್​ 18 ಸಿಕ್ರೇಟ್​ ಕೊಹ್ಲಿ ಮೇಲಿನ ಅಭಿಮಾನವೇ ಇದೇ.!

ವಿಶ್ವಕಪ್​ ಅಖಾಡದಲ್ಲಿ ಧೂಳೆಬ್ಬಿಸಿರೋ ಪಾತುಮ್ ನಿಸ್ಸಂಕಾ ಇಂಡಿಯನ್​ ಪ್ರೀಮಿಯರ್​ ಲೀಗ್​ ಅಖಾಡದಲ್ಲಿ ಮಿಂಚು ಹರಿಸೋ ಗುರಿ ಹೊಂದಿದ್ದಾರೆ. ಪಾತುಮ್ ನಿಸ್ಸಾಂಕಾ ಟ್ಯಾಲೆಂಟ್​ ಮೊದಲೇ ಗುರುತಿಸಿದ್ದ ಐಪಿಎಲ್​ ಫ್ರಾಂಚೈಸಿಗಳು ಹರಾಜಿನ ವೇಳೆ ಈತನ ಖರೀದಿಗೆ ತೀವ್ರ ಪೈಪೋಟಿ ನಡೆಸಿದ್ವು. ಅಂತಿಮವಾಗಿ 4 ಕೋಟಿ ನೀಡಿ ಡೆಲ್ಲಿ ಕ್ಯಾಪಿಟಲ್ಸ್​​​ ಲಂಕನ್​ ಲಯನ್​ನ ಖರೀದಿಸಿದೆ. ಶ್ರೀಲಂಕಾ ಪರ ಮಾತ್ರವಲ್ಲದೇ, ಫ್ರಾಂಚೈಸಿ ಲೀಗ್​ ಕ್ರಿಕೆಟ್​ನಲ್ಲೂ ಸದ್ದು ಮಾಡಿರೋ ಪಾತುಮ್​ ನಿಸ್ಸಂಕಾ, ಐಪಿಎಲ್​ನಲ್ಲೂ ಧೂಳೆಬ್ಬಿಸೋ ಲೆಕ್ಕಾಚಾರದಲ್ಲಿದ್ದಾರೆ. 

ಇದನ್ನೂ ಓದಿ: ಇರಾನ್ ಮೇಲೆ ವಾರಾಂತ್ಯದಲ್ಲಿ ದಾಳಿಗೆ ಸಜ್ಜಾದ ಅಮೆರಿಕಾ!! ಡೋನಾಲ್ಡ್ ಟ್ರಂಪ್ ಒಪ್ಪಿಗೆ ನೀಡುವುದು ಮಾತ್ರ ಬಾಕಿ!

ಬಡತನಕ್ಕೆ ಸವಾಲ್​ ಎಸೆದು ಕಠಿಣ ಪರಿಶ್ರಮ ಪಟ್ಟು ಛಲದ ಹೋರಾಟ ನಡೆಸಿದ ಪಾತುಮ್ ನಿಸ್ಸಾಂಕ ಇಂದು ವಿಶ್ವಕಪ್ ಹೀರೋ ಆಗಿದ್ದಾರೆ. ದೇವಸ್ಥಾನದಲ್ಲಿ ಸೈನ್ ಹಾಕಿ, ವಿಶ್ವಕಪ್​ನಲ್ಲಿ ಸಾಮರ್ಥ್ಯ ನಿರೂಪಿಸಿದ ಪಾತುಮ್​ ನಿಸ್ಸಾಂಕ ಜರ್ನಿ ಯುವ ಆಟಗಾರರ ಪಾಲಿಗೆ ಸ್ಪೂರ್ತಿಯ ಕಥನ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pathum Nissanka
Advertisment