/newsfirstlive-kannada/media/media_files/2025/09/05/suryakumar_pandya-2025-09-05-09-35-14.jpg)
ಟಿ20 ಏಷ್ಯಾ ಕಪ್ ಟೂರ್ನಿ ಇದೇ ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ. ಒಟ್ಟು 8 ತಂಡಗಳು ಇದರಲ್ಲಿ ಪಾಲ್ಗೊಳ್ಳಲಿದ್ದು ಹಾಂಗ್ ಕಾಂಗ್ ಹಾಗೂ ಅಫ್ಘಾನಿಸ್ತಾನ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಆಗಿರುವ ಟೀಮ್ ಇಂಡಿಯಾ ಮತ್ತೊಮ್ಮೆ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಈ ಎಲ್ಲದರ ಮಧ್ಯೆ ಕ್ಯಾಪ್ಟನ್ ಸೂರ್ಯಕುಮಾರ್, ಸ್ಟಾರ್ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.
ಟೀಮ್​​ ಇಂಡಿಯಾದ ಕ್ಯಾಪ್ಟನ್ ಸೂರ್ಯಕುಮಾರ್​ ಯಾದವ್, ಹೆಡ್​ ಕೋಚ್​ ಗೌತಮ್​ ಗಂಭೀರ್​, ಹಾರ್ದಿಕ್​ ಪಾಂಡ್ಯ ಮುಂಬೈನಿಂದ ದುಬೈಗೆ ಹಾರಿದ್ದಾರೆ. ಏರ್​ಪೋರ್ಟ್​​ನಲ್ಲಿ ಸೂರ್ಯಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ಹೊಸ ಲುಕ್​ನಲ್ಲಿ ಕಾಣಿಸಿರೋದು ವಿಶೇಷ ಎನಿಸಿದೆ. ಇನ್ನು ಕೋಚ್ ಗೌತಮ್ ಗಂಭೀರ್ ಎಂದಿನಂತೆ ಬ್ಲ್ಯಾಕ್ ಡ್ರೆಸ್​ನಲ್ಲಿ ಏರ್​ಪೋರ್ಟ್​ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.
ಇವರನ್ನು ಹೊರತು ಪಡಿಸಿ ಉಳಿದ ಆಟಗಾರರಾದ ಹರ್ಷೀತ್ ರಾಣ, ಆರ್ಷ್​ದೀಪ್ ಸಿಂಗ್, ಕುಲ್​ದೀಪ್ ಯಾದವ್ ಈಗಾಗಲೇ ದುಬೈಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆರ್ಷ್​ದೀಪ್ ಸಿಂಗ್ ಸೋಷಿಯಲ್ ಮೀಡಿಯಾ ಪೋಸ್ಟ್​ವೊಂದರಲ್ಲಿ ಇಂದು ಬೆಳಗ್ಗೆ ದುಬೈ ಬಂದಿದ್ದೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ರಿಸರ್ವ್​ ಆಟಗಾರರಾದ ಕನ್ನಡಿಗ ಪ್ರಸಿದ್ಧ್ ಕೃಷ್ಣ, ವಾಸಿಂಗ್ಟನ್ ಸುಂದರ್, ಯಶಸ್ವಿ ಜೈಸ್ವಾಲ್ ಇನ್ನು ಭಾರತದಲ್ಲಿದ್ದಾರೆ. ಏಷ್ಯಾಕಪ್​ ಟೂರ್ನಿ ಸಪ್ಟೆಂಬರ್​ 9ರಿಂದ ಆರಂಭವಾಗಲಿದ್ದು, ಟೀಮ್ ಇಂಡಿಯಾ ಯುಎಇ ವಿರುದ್ಧ ಸಪ್ಟೆಂಬರ್​ 10ಕ್ಕೆ ಮೊದಲ ಪಂದ್ಯವನ್ನು ಆಡಲಿದೆ. ಇದಾದ ಮೇಲೆ ಸೆಪ್ಟೆಂಬರ್ 14 ರಂದು ಭಾರತ ಹಾಗೂ ಪಾಕಿಸ್ತಾನದ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ.
Off they go! ✈️
— Star Sports (@StarSportsIndia) September 4, 2025
Team India captain @surya_14kumar and star all-rounder @hardikpandya7 have left for the Asia Cup 2025.
The mission? Bring the trophy home. 🏆🇮🇳
[Asia Cup 2025, Indian Cricket Team] pic.twitter.com/hYY7z6O0rc
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ