/newsfirstlive-kannada/media/media_files/2025/09/22/suryakumar-yadav-1-2025-09-22-08-27-56.jpg)
ಏಷ್ಯಾಕಪ್​​ನಲ್ಲಿ ಟೀಂ ಇಂಡಿಯಾ ಎದುರು ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ ಆಗಿದೆ. ಅಭಿಷೇಕ್ ಶರ್ಮಾರ ಅರ್ಧಶತಕ ಮತ್ತು ಗಿಲ್ ಜೊತೆಗಿನ ಶತಕದ ಪಾಲುದಾರಿಕೆ ಭಾರತದ ಗೆಲುವಿಗೆ ಪ್ರಮುಖ ಕಾರಣವಾಯ್ತು. ಆ ಮೂಲಕ ಸೂಪರ್​ ಫೋರ್​ನ ಹಂತದ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಗೆದ್ದು ಬೀಗಿದೆ.
ಪಾಕಿಸ್ತಾನ ನೀಡಿದ್ದ 172 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಅಭಿಷೇಕ್ (74 ರನ್, 39 ಎಸೆತ, ಆರು ಬೌಂಡರಿ, ಐದು ಸಿಕ್ಸರ್) ಮತ್ತು ಗಿಲ್ (47 ರನ್, 28 ಎಸೆತ, ಎಂಟು ಬೌಂಡರಿ) ರನ್​ಗಳ ಕಾಣಿಕೆ ನೀಡಿದರು. ಇವರಿಬ್ಬರ 105 ರನ್‌ಗಳ ಪಾಲುದಾರಿಕೆ ಗೆಲುವಿಗೆ ಭದ್ರ ಅಡಿಪಾಯ ಹಾಕಿತು. ತಿಲಕ್ ವರ್ಮಾ ಕೂಡ 19 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿಯೊಂದಿಗೆ 30 ರನ್ ಗಳಿಸಿ ಅಜೇಯರಾಗಿ ಉಳಿದರು.
ಗೆದ್ದ ಬಳಿಕ ಕ್ಯಾಪ್ಟನ್ ಸೂರ್ಯ ಏನಂದ್ರು..?
ಪ್ರತಿ ಪಂದ್ಯದಲ್ಲೂ ನಮ್ಮ ಹುಡುಗರು ಉದ್ಭುತವಾಗಿ ಆಡಿದರು. ಅವರ ಪ್ರದರ್ಶನ ನನ್ನ ಕೆಲಸವನ್ನು ಸುಲಭಗೊಳಿಸುತ್ತಿದೆ. ಅವರು ಅದ್ಭುತ ಉತ್ಸಾಹ ಪ್ರದರ್ಶಸಿದರು. ಮೊದಲ 10 ಓವರ್ ಬೌಲಿಂಗ್ ಮುಗಿಯೋವರೆಗೂ ನಾನು ಸುಮ್ಮನಿದ್ದೆ. ಡ್ರಿಂಕ್ಸ್​ ಬ್ರೇಕ್ ನಂತರ ಆಟ ಪ್ರಾರಂಭವಾಗಲಿದೆ ಎಂದು ಹೇಳಿದೆ.
ಬುಮ್ರಾ ಬಗ್ಗೆ ಪ್ರತಿಕ್ರಿಯಿಸಿ.. ಪರವಾಗಿಲ್ಲ, ಅವರು ರೋಬೋಟ್ ಅಲ್ಲ, ನಿನ್ನೆ ಬುಮ್ರಾಗೆ ಕೆಟ್ಟ ದಿನವಾಗಿತ್ತು. ದುಬೆ ನಮ್ಮನ್ನು ತೊಂದರೆಯಿಂದ ಪಾರು ಮಾಡಿದರು. ಅಭಿಷೇಕ್ ಮತ್ತು ಗಿಲ್ ಒಳ್ಳೆಯ ಪಾಲುದಾರಿಕೆ ಕೊಟ್ಟರು. ಇದು ಬೆಂಕಿ ಮತ್ತು ಮಂಜುಗಡ್ಡೆಯ ಕಾಂಬಿನೇಷನ್. ಮೊದಲ ಇನ್ನಿಂಗ್ಸ್ ನಂತರ, ನಮ್ಮ ಫೀಲ್ಡಿಂಗ್ ಕೋಚ್ ಟಿ. ದಿಲೀಪ್, ಕಳಪೆ ಫೀಲ್ಡಿಂಗ್​ ಮಾಡಿದ ಆಟಗಾರರಿಗೆ ಇಮೇಲ್ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಟೀಮ್ ಇಂಡಿಯಾ ಜಯಭೇರಿ.. ಪಾಕ್​ಗೆ ಮತ್ತೆ ಮುಖಭಂಗ, ತಲೆ ತಗ್ಗಿಸಿದ ಬದ್ಧ ವೈರಿ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ