ಮಿಸ್ಟರ್ 360 ಸೂರ್ಯ ಈಗ ಮಿಸ್ಟರ್ ಕನ್ಸಿಸ್ಟೆಂಟ್.. ಪ್ಲೇಯರ್ಸ್ ಫ್ರೆಂಡ್ಲಿ ಕ್ಯಾಪ್ಟನ್..!

ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ T20 ಕ್ರಿಕೆಟ್​​ನ ಗ್ರೇಟ್ ಕ್ಯಾಪ್ಟನ್. ಆಟಗಾರನಾಗಿ, ನಾಯಕನಾಗಿ ಮಿಂಚ್ತಿರುವ ಸೂರ್ಯ, ಕೋಚ್ ಗೌತಮ್ ಗಂಭೀರ್ ಮೇಲಿನ ಒತ್ತಡವನ್ನ ಕಡಿಮೆ ಮಾಡಿದ್ದಾರೆ. ಟಿ-20 ತಂಡದಲ್ಲಿ ಸೂರ್ಯ ಇದ್ರೆ ನೋ ಟೆನ್ಶನ್ ಅನ್ನುವಂತಾಗಿದೆ.

author-image
Ganesh Kerekuli
Surya kumar yadav (2)
Advertisment

ಲೇಟಾದ್ರೂ ಲೆಟೆಸ್ಟ್ ಆಗಿ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ರು. 31ನೇ ವರ್ಷದಲ್ಲಿ ಭಾರತ ತಂಡಕ್ಕೆ ಕಾಲಿಟ್ಟ ಸೂರ್ಯಕುಮಾರ್​ಗೆ ನಾಯಕತ್ವ ಬೇಗನೇ ಸಿಕ್ತು. 33ನೇ ವರ್ಷಕ್ಕೆ ಸೂರ್ಯನಿಗೆ ಟಿ-20 ತಂಡದ ನಾಯಕ ಪಟ್ಟ ಕಟ್ಟಲಾಯ್ತು. ಕೆಲವೇ ವರ್ಷಗಳಲ್ಲಿ ಸೂರ್ಯ ಅಸಾಧ್ಯವಾದದ್ದನ್ನ ಸಾಧಿಸಿ ತೋರಿಸಿದ್ರು. ಟಿ-20 ಕ್ರಿಕೆಟ್​​ನ ಗ್ರೇಟೆಸ್ಟ್ ಕ್ಯಾಪ್ಟನ್ ಎನಿಸಿಕೊಂಡಿರೋ ಸ್ಕೈ ಟೀಮ್ ಇಂಡಿಯಾಗೆ ತನ್ನದೇ ಕೊಡುಗೆ ನೀಡುತ್ತಿದ್ದಾರೆ.

ಮಿಸ್ಟರ್ 360 ಸೂರ್ಯ ಈಗ ಮಿಸ್ಟರ್ ಕನ್ಸಿಸ್ಟೆಂಟ್

ಟಿ-20 ಕ್ರಿಕೆಟ್​​​​​​​​ಗೆ ಸೂರ್ಯ ಹೇಳಿ ಮಾಡಿಸಿದ ಆಟಗಾರ. ಶಾರ್ಟರ್ ಫಾರ್ಮೆಟ್​ನಲ್ಲಿ ಡೇಂಜರಸ್ ಬ್ಯಾಟರ್ ಎನಿಸಿಕೊಂಡಿರೋ ಸ್ಕೈ ಬತ್ತಳಿಕೆಯಲ್ಲಿ, ಟಿ-20 ಕ್ರಿಕೆಟ್​ಗೆ​ ಸೂಟ್​ ಆಗುವ ಎಲ್ಲಾ ಶಾಟ್ಸ್ ಇವೆ. ಇದೇ ಕಾರಣಕ್ಕೆ ಸೂರ್ಯನನ್ನ ಮಿಸ್ಟರ್ 360 ಅಂತ ಕರೆಯಲಾಗ್ತಿದೆ. ಸದ್ಯ ಕನ್ಸಿಸ್ಟೆಂಟ್ ಆಗಿ ಪರ್ಫಾಮ್ ಮಾಡ್ತಿರುವ ಮುಂಬೈಕರ್ ಸೂರ್ಯ, ಮಿಸ್ಟರ್ ಕನ್ಸಿಸ್ಟೆಂಟ್ ಎನಿಸಿಕೊಂಡಿದ್ದಾರೆ.
 
ಟೀಮ್ ಇಂಡಿಯಾ ಟಿ-20 ನಾಯಕ ಸೂರ್ಯಕುಮಾರ್ ಯಾದವ್ ತಂಡದ ಆಪತ್ಭಾಂಧವ. ಎಷ್ಟೋ ಪಂದ್ಯಗಳನ್ನ ಸೂರ್ಯ ಏಕಾಂಗಿಯಾಗಿ ನಿಂತು ಗೆಲ್ಲಿಸಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಯುಎಸ್​ಎ ವಿರುದ್ಧದ ಪಂದ್ಯ. ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರಮುಖ ಬ್ಯಾಟ್ಸ್​ಮನ್​​ಗಳ ವಿಕೆಟ್ ಕಳೆದುಕೊಂಡಿತ್ತು. ಆಗ ಸೂರ್ಯ ಸಿಂಗಲ್ ಹ್ಯಾಂಡೆಡ್ ಆಗಿ ಪಂದ್ಯವನ್ನ ಗೆಲ್ಲಿಸಿದ್ರು.

ಇದನ್ನೂ ಓದಿ:ಇರಾನ್ ಮೇಲೆ ವಾರಾಂತ್ಯದಲ್ಲಿ ದಾಳಿಗೆ ಸಜ್ಜಾದ ಅಮೆರಿಕಾ!! ಡೋನಾಲ್ಡ್ ಟ್ರಂಪ್ ಒಪ್ಪಿಗೆ ನೀಡುವುದು ಮಾತ್ರ ಬಾಕಿ!

suryakumar yadav (1)


 
ಆಟಗಾರನಾಗಿ ಸೂರ್ಯ ಸಾಕಷ್ಟು ಸಾಧನೆ ದಾಖಲೆಗಳನ್ನ ಮಾಡಿದ್ದಾರೆ. ನಾಯಕನಾಗಿ ಸೂರ್ಯ, ಎಕ್ಸ್ಟ್ರಾರ್ಡಿನರಿ ರೆಕಾರ್ಡ್ಸ್​ ಹೊಂದಿದ್ದಾರೆ. ಸೂರ್ಯ ತಮ್ಮ ಆಟಗಾರರನ್ನ ಹೆಚ್ಚು ಟ್ರಸ್ಟ್ ಮಾಡ್ತಾರೆ. ಆಟಗಾರರಿಗೆ ಜವಾಬ್ದಾರಿ ಹಂಚುತ್ತಾರೆ. ಅವರ ಪ್ರತಿಭೆ ಹೊರಹಾಕಲು ಉತ್ತಮ ವೇದಿಕೆ ಕಲ್ಪಿಸಿಕೊಡ್ತಾರೆ. ಆಟಗಾರರ ಜೊತೆ ಉತ್ತಮ ಕಮ್ಯುನಿಕೇಷನ್ ಮಾಡ್ತಾರೆ. 

ಕೋಚ್​ ಟೆನ್ಶನ್ ಕಡಿಮೆ ಮಾಡೋ ಸಾರಥಿ ಸೂರ್ಯ

ನಾಯಕನಾಗಿ ಸೂರ್ಯಕುಮಾರ್ ಯಾದವ್ ಎಲ್ಲಾ ಬಾಕ್ಸ್​ಗಳನ್ನ ಟಿಕ್ ಮಾಡಿದ್ದಾರೆ. ಡ್ರೆಸ್ಸಿಂಗ್ ರೂಮ್​ನಲ್ಲಿ ಆಟಗಾರರಿಗೆ ಅತ್ಯುತ್ತಮ ವಾತಾವರಣ ಸೃಷ್ಟಿಸಿರೋ ಸೂರ್ಯ ಯಾವಾಗಲೂ ಕೂಲ್ ಌಂಡ್ ಕಾಮ್ ಆಗಿರ್ತಾರೆ. ಮೈದಾನದಲ್ಲಿ ಗೇಮ್ ಪ್ಲಾನ್​​ನಲ್ಲಿ ಸಾಲಿಡ್ ಆಗಿ ಎಕ್ಸಿಕ್ಯೂಟ್ ಮಾಡುವ ಕ್ಯಾಪ್ಟನ್ ಸ್ಕೈ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ತಾರೆ. ಇದ್ರಿಂದ ತಂಡದ ಕೋಚ್ ಮೇಲಿನ ಒತ್ತಡವನ್ನೂ ಕಡಿಮೆ ಮಾಡಿದ್ದಾರೆ.  

ಟಿ-20 ಕ್ರಿಕೆಟ್​ನ ಗ್ರೇಟ್​​​​ ಕ್ಯಾಪ್ಟನ್ ಯಾರಪ್ಪಾ ಅಂದ್ರೆ ಮೊದಲು ನೆನಪಾಗೋದೇ ಸೂರ್ಯಕುಮಾರ್ ಯಾದವ್ ಹೆಸರು. ನಾಯಕನಾಗಿ ಸೂರ್ಯಕುಮಾರ್ 46 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. 35 ಪಂದ್ಯಗಳಲ್ಲಿ ಗೆಲುವು ಸಾಧಿಸಿರೋ ಸೂರ್ಯ ವಿನ್ನಿಂಗ್ ಪರ್ಸಂಟೇಜ್ ಬರೋಬ್ಬರಿ 82. ಕೇವಲ 7 ಪಂದ್ಯಗಳಲ್ಲಿ ಮಾತ್ರ ಸೂರ್ಯ ಸೋಲು ಅನುಭವಿಸಿದ್ದಾರೆ.   

ಸೂರ್ಯ ಟೀಮ್ ಇಂಡಿಯಾಕ್ಕೆ ಸಾರಥಿ ಮಾತ್ರವಲ್ಲ. ಆಪತ್ಭಾಂಧ ಗೇಮ್ ಚೇಂಜರ್ ಕೂಡ ಹೌದು.. ಸೂರ್ಯನ ಅಬ್ಬರ ಹೀಗೆ ಮುಂದುವರೆಯಲಿ. ಸೂರ್ಯ ಸದಾ ಶೈನ್ ಆಗುತ್ತಿರಲಿ ಅನ್ನೋದೇ ಎಲ್ಲರ ಆಶಯ.

ಇದನ್ನೂ ಓದಿ: ಹೂ ಮಾರಿ ಮಗನ ಕನಸಿಗೆ ನೀರೆರೆದ ತಾಯಿ.. ನಿಸ್ಸಂಕಾ ಕ್ರಿಕೆಟ್​ ಜರ್ನಿ ಶುರುವಾಗಿದ್ದು ದೇವಸ್ಥಾನದಲ್ಲಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Surya kumar Yadav
Advertisment