/newsfirstlive-kannada/media/media_files/2025/08/15/suryakumar_sanju-2025-08-15-15-08-49.jpg)
ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟಿಸಬೇಕಿದೆ. ಕೆಲವೇ ದಿನಗಳಲ್ಲಿ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅನೌನ್ಸ್ ಮಾಡಲಿದ್ದಾರೆ. ಕೆಲ ಆಟಗಾರರಿಗೆ ಈಗಾಗಲೇ ಸ್ಥಾನ ಫಿಕ್ಸ್​ ಆಗಿದೆ. ಆದ್ರೆ, ಸ್ಥಾನ ಗಿಟ್ಟಿಸಿಕೊಳ್ಳೋ ಇವ್ರಿಗೆ ಏಷ್ಯಾಕಪ್​​ ಅಗ್ನಿಪರೀಕ್ಷೆ ಕಣವಾಗಿದೆ. 2026ರ ಟಿ20 ವಿಶ್ವಕಪ್ ಆಡಬೇಕು ಅಂದ್ರೆ, ​​​​​​ಏಷ್ಯಾ ಬ್ಯಾಟಲ್​​ನಲ್ಲಿ ಗೆಲ್ಲಬೇಕಿದೆ.
ಬಹುನಿರೀಕ್ಷಿತ ಏಷ್ಯಾಕಪ್​ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ವಾರಂತ್ಯದಲ್ಲಿ ಏಷ್ಯಾಕಪ್​​ಗೆ ಟೀಮ್ ಇಂಡಿಯಾ ಪ್ರಕಟಿಸುವುದು ಬಹುತೇಕ ಕನ್ಫರ್ಮ್​. 2026ರ ಟಿ20 ವಿಶ್ವಕಪ್ ದೃಷ್ಟಿಯಲ್ಲಿ ಇಟ್ಕೊಂಡೇ ಬಿಗ್​ಬಾಸ್​ಗಳು ತಂಡವನ್ನು ಪ್ರಕಟಿಸಲು ಮುಂದಾಗಿದ್ದಾರೆ. ಈ ಏಷ್ಯಾಕಪ್​ ಟೀಮ್ ಇಂಡಿಯಾದ ಕೆಲ ಆಟಗಾರರಿಗೆ ಆಗ್ನಿಪರೀಕ್ಷೆಯ ಕಣವಾಗಿದೆ. ಮುಂದಿನ 6 ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಇದಕ್ಕೆ ಕಾರಣವಾಗಿದೆ.
2026ರ ಫೆಬ್ರುವರಿಯಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. ಈ ಟಿ20 ವಿಶ್ವಕಪ್​​ನಲ್ಲಿ ಸ್ಥಾನ ಗಿಟ್ಟಿಸಬೇಕಾದ್ರೆ, ಕೆಲ ಆಟಗಾರರು ಸಾಮರ್ಥ್ಯಕ್ಕೂ ಮಿಗಿಲಾದ ಆಟವಾಡಬೇಕಿದೆ. ಇಲ್ಲ 2026ರ ಟಿ20 ವಿಶ್ವಕಪ್​​​ನಿಂದ ಕಿಕ್ ಔಟ್ ಆಗೋದ್ರಲ್ಲಿ ಡೌಟೇ ಇಲ್ಲ.
ಶುಭ್​ಮನ್ ಗಿಲ್​ ಪಾಲಿಗೆ ಪ್ರತಿಷ್ಠೆಯ ಕಣ ಏಷ್ಯಾಕಪ್​..!
ಏಷ್ಯಾಕಪ್ ಟೂರ್ನಿ ಪ್ರಿನ್ಸ್​ ಶುಭ್​ಮನ್​​ ಪಾಲಿಗೆ ಆಗ್ನಿಪರೀಕ್ಷೆಯ ಕಣವಾಗಿದೆ. ಬರೋಬ್ಬರಿ 8 ತಿಂಗಳ ಬಳಿಕ ಟಿ20 ಅಖಾಡಕ್ಕಿಳಿಯಲಿರುವ ಗಿಲ್​​, ಇಂಗ್ಲೆಂಡ್ ಟೆಸ್ಟ್​ ಸರಣಿಯಲ್ಲಿ ತೋರಿದಂತೆ ಜವಾಬ್ದಾರಿಯುತ ಆಟ ಪ್ರದರ್ಶಿಸಬೇಕಿದೆ. ಅನುಭವಿ ವಿರಾಟ್​, ರೋಹಿತ್ ಇಲ್ಲದ ಕೊರುಗು ನೀಗಿಸುವ ಜೊತೆಗೆ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಬೇಕಿದೆ. ಗಿಲ್​​, ಓನ್ಲಿ ಐಪಿಎಲ್ ಪ್ಲೇಯರ್​ ಎಂಬ ಟೀಕೆಗೆ ಉತ್ತರ ನೀಡಬೇಕಿದೆ. ಇಲ್ಲ 2024ರ ಟಿ20 ವಿಶ್ವಕಪ್​​ನಲ್ಲಿ ಸ್ಟಾಂಡ್​ ಬೈ ಆಟಗಾರನಾದಂತೆ, 2026 ವಿಶ್ವಕಪ್​​​ನಲ್ಲೂ ಸ್ಟಾಂಡ್ ಬೈ ಆಗೋದು ಫಿಕ್ಸ್.
ಸೂರ್ಯನಂತೆ ಪ್ರಜ್ವಲಿಸಬೇಕು ಸೂರ್ಯಕುಮಾರ್..!
ಸೂರ್ಯಕುಮಾರ್ ಯಾದವ್. ಟಿ20 ಕ್ರಿಕೆಟ್​​ನ ಬೆಸ್ಟ್ ಪ್ಲೇಯರ್. ಆದ್ರೆ, ಇದೇ ಸೂರ್ಯನಿಗೆ ಏಷ್ಯಾಕಪ್​​​ ಟೂರ್ನಿಯೇ ಕೊನೆ ಚಾನ್ಸ್​.! ಇದಕ್ಕೆ ಕಾರಣ ಸೂರ್ಯಕುಮಾರ್ ಆಟ. ಕಳೆದ 3 ಟಿ20 ಸರಣಿಗಳಿಂದ ಸೂರ್ಯ ರನ್​ಗಳಿಸುವಲ್ಲಿ ಫೇಲ್​ ಆಗಿದ್ದಾರೆ. ಬಾಂಗ್ಲಾ ಎದುರಿನ ಕೊನೆ ಟಿ20 ಪಂದ್ಯದಲ್ಲಿ ಗಳಿಸಿದ 75 ರನ್​​ಗಳೇ ಕೊನೆ, ಆ ಬಳಿಕ ಆಡಿದ ಪರದಾಡಿದ್ದಾರೆ. ಕಳೆದ 9 ಪಂದ್ಯಗಳಿಂದ ಕೇವಲ 54 ರನ್ ಗಳಿಸಿದ್ದಾರೆ. ಹೀಗಾಗಿ ಸೂರ್ಯನಿಗೆ ಬ್ಯಾಟಿಂಗ್ ಜೊತೆಗೆ ನಾಯಕತ್ವದಲ್ಲೂ ಆಗ್ನಿಪರೀಕ್ಷೆ ಎದುರಾಗಲಿದೆ. ಹಾಲಿ ಚಾಂಪಿಯನ್ಸ್ ಆಗಿರುವ ಟೀಮ್ ಇಂಡಿಯಾಗೆ, ಏಷ್ಯನ್ ಕಿಂಗ್ ಕಿರೀಟ ಉಳಿಸಿಕೊಡುವ ಜವಾಬ್ದಾರಿ ಸೂರ್ಯನ ಮೇಲಿದೆ. ಇಲ್ಲಿ ಸೂರ್ಯ ಎಡವಿದ್ರೆ. ಸೂರ್ಯಾಸ್ತ ಗ್ಯಾರಂಟಿ.
ಸಂಜು ಸ್ಯಾಮ್ಸನ್​ಗೆ ಮಾಡು ಇಲ್ಲವೆ ಮಡಿ ಟೂರ್ನಿ..!
ಸಂಜು ಸ್ಯಾಮ್ಸನ್ ಕರಿಯರ್​ಗೆ​ ಏಷ್ಯಾಕಪ್​ ಮಹತ್ವದ ವೇದಿಕೆಯಾಗಿದೆ. ಪಂತ್ ಅಲಭ್ಯತೆಯಲ್ಲಿ ಟೂರ್ನಿಯುದ್ದಕ್ಕೂ ಆಡುವ ಅವಕಾಶ ಸಿಗಲಿದೆ. ಈ ಅವಕಾಶದಲ್ಲಿ ಸಂಜು ಸ್ಯಾಮ್ಸನ್, ಆರ್ಭಟಿಸಬೇಕಿದೆ. ಆರಂಭಿಕನಾಗಿ ಮಾತ್ರವಲ್ಲ. ಪ್ರತಿ ರೋಲ್​​ನಲ್ಲಿ ನಾನು ಮಿಂಚಬಲ್ಲೆ ಅನ್ನೋದನ್ನ ತೋರಿಸಬೇಕಿದೆ. ಇಲ್ಲ ಪಂತ್ ಕಮ್​ಬ್ಯಾಕ್​ ಬಳಿಕ ಬೆಂಚ್​ ಫಿಕ್ಸ್.! ಏಷ್ಯಾಕಪ್​​ನಲ್ಲಿ ಪರ್ಫಾರ್ಮ್ ಮಾಡದಿದ್ರೆ, ಸಂಕಷ್ಟ ಕಾದಿದೆ.
ಇದನ್ನೂ ಓದಿ: ಸಾರಾಗೆ ಕೈ ಕೊಟ್ರಾ ಕ್ಯಾಪ್ಟನ್ ಗಿಲ್..? ಮುಂಬೈನಲ್ಲಿ ಹೊಸ ಬೆಡಗಿ ಜೊತೆ ಶುಭ್​ಮನ್ ಸುತ್ತಾಟ!
ಏಷ್ಯನ್ ಸಮರದಲ್ಲಿ ಗೆಲ್ಲಬೇಕಿದೆ ಜಸ್​ಪ್ರೀತ್ ಬೂಮ್ರಾ!
2024ರ ಟಿ20 ವಿಶ್ವಕಪ್ ಬಳಿಕ ಟಿ20ಯಿಂದ ದೂರವಾಗಿದ್ದ ಜಸ್​​ಪ್ರೀತ್​ ಬೂಮ್ರಾ, ಏಷ್ಯಾಕಪ್​​​ನಲ್ಲಿ ಕಮ್​ಬ್ಯಾಕ್ ಮಾಡ್ತಿದ್ದಾರೆ. ಬೂಮ್ರಾಗೆ ಏಷ್ಯಾಕಪ್ ಅಗ್ನಿಪರೀಕ್ಷೆಯ ಕಣ ಅಂದ್ರೆ ತಪ್ಪಿಲ್ಲ. ಫಿಟ್​ನೆಸ್, ವರ್ಕ್​ಲೋಡ್ ವಿಚಾರಕ್ಕೆ ಇಂಗ್ಲೆಂಡ್ ಟೆಸ್ಟ್ ಸರಣಿಯುದ್ದಕ್ಕೂ ಟೀಕೆಗೆ ಆಹಾರವಾಗಿದ್ದ ಬೂಮ್ರಾ, ಸರಣಿಯ ಅಂತ್ಯದಲ್ಲಿ ಪರಿಣಾಮಕಾರಿ ಅನಿಸಲೇ ಇಲ್ಲ. ಅಷ್ಟೇ ಅಲ್ಲ.! ಸಾಮರ್ಥ್ಯಕ್ಕೆ ತಕ್ಕ ಸ್ಪೆಲ್ಸ್ ಹಾಕಲಿಲ್ಲ. ಈಗ ಅದಕ್ಕೆಲ್ಲ ಉತ್ತರ ನೀಡಬೇಕು. ಇಲ್ಲ ಟಿ20ಯಿಂದ ಕಂಪ್ಲೀಟ್ ದೂರವಾಗುವ ಸಮಯ ದೂರವಿಲ್ಲ.
ಸ್ಪಿನ್ ಚಮತ್ಕಾರ​ ಮಾಡಬೇಕಿದೆ ವರುಣ್​ ಚಕ್ರವರ್ತಿ..!
ವರುಣ್ ಚಕ್ರವರ್ತಿ, ಟೀಮ್ ಇಂಡಿಯಾದ ಮಿಸ್ಟ್ರಿ ಸ್ಪಿನ್ನರ್. ಟಿ20 ಸರಣಿಯಲ್ಲಿ ಚಮತ್ಕಾರ ಮಾಡಿರುವ ಈ ಮಿಸ್ಟ್ರಿ ಸ್ಪಿನ್ನರ್, ಮಹತ್ವದ ಟೂರ್ನಿಗಳಲ್ಲಿ ಎಡವಿದ್ದಿದೆ. ಈ ಬಾರಿಯ ಏಷ್ಯಾಕಪ್​​ನಲ್ಲಿ ಎಡವಿದ್ರೆ, ವರುಣ್, ಟಿ20 ವಿಶ್ವಕಪ್ ಸ್ಥಾನ ಕೈ ತಪ್ಪಲಿದೆ. ಹೀಗಾಗಿ ಸ್ಪಿನ್​ ಚಮಾತ್ಕಾರ ಮಾಡಬೇಕಿದೆ. ವಿಶ್ವಕಪ್​​ಗೂ ಮುನ್ನ ಮಿನಿ ವಿಶ್ವಕಪ್​​ ಎದುರಾಗ್ತಿದೆ. ಈ ಮಿನಿ ಸಮರದಲ್ಲಿ ಟೀಮ್ ಇಂಡಿಯಾ ಆಟಗಾರರು ಗೆಲ್ತಾರಾ..? ಸ್ಥಾನ ಮತ್ತಷ್ಟು ಭದ್ರವಾಗಿಸಿಕೊಳ್ತಾರಾ.? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ