/newsfirstlive-kannada/media/media_files/2025/09/24/abhishek_gill-2025-09-24-18-56-14.jpg)
ಏಷ್ಯಾಕಪ್​ನ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ನಾಯಕ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಲಿದೆ.
ದುಬೈನ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ನಾಯಕ ಜಾಕೇರ್ ಅಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಲಿದೆ. ಬಾಂಗ್ಲಾದೇಶ ಸೂಪರ್-4 ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಈಗಾಗಲೇ ಪಂದ್ಯ ಗೆದ್ದಿದೆ. ಅದರಂತೆ ಟೀಮ್ ಇಂಡಿಯಾ ಕೂಡ ಪಾಕ್​ ಜೊತೆ ಒಂದು ಪಂದ್ಯ ಗೆದ್ದು ಮೊದಲ ಸ್ಥಾನದಲ್ಲಿದೆ. ಬಾಂಗ್ಲಾ ವಿರುದ್ಧ ಗೆದ್ದರೇ ಭಾರತಕ್ಕೆ ಫೈನಲ್​ ಟಿಕೆಟ್​ ಸಿಕ್ಕಂತೆ ಆಗುತ್ತದೆ. ಇವತ್ತಿನ ಮ್ಯಾಚ್ ಬಾಂಗ್ಲಾ ಹಾಗೂ ಭಾರತ ಎರಡಕ್ಕೂ ತುಂಬಾ ಮುಖ್ಯವಾಗಿದೆ. ಏಕೆಂದರೆ 2ನೇ ಸೂಪರ್​-4 ಪಂದ್ಯದಲ್ಲಿ ಗೆದ್ದಂತಹ ಟೀಮ್, ಇನ್ನೊಂದು ಪಂದ್ಯದಲ್ಲೂ ಜಯ ಪಡೆದರೆ ಫೈನಲ್​ಗೆ ನೇರವಾಗಿ ಎಂಟ್ರಿಯಾಗಲಿದೆ.
ಸೂರ್ಯಕುಮಾರ್ ನೇತೃತ್ವದ ತಂಡ ದುಬೈ ಮೈದಾನಕ್ಕೆ ಇಳಿದಿದ್ದು ಅಭಿಷೇಕ್ ಶರ್ಮಾ, ಶುಭ್​ಮನ್​ ಗಿಲ್ ಆರಂಭಿಕರಾಗಿ ಬ್ಯಾಟ್ ಬೀಸಲಿದ್ದಾರೆ. ಸೂರ್ಯಕುಮಾರ್ ಮೂರನೇ ಸ್ಥಾನದಲ್ಲಿ ಕ್ರೀಸ್​ಗೆ ಆಗಮಿಸುವರು. ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಸ್ಲಾಟ್​ ಯಾವುದು ಎನ್ನುವುದು ಕನ್​ಫರ್ಮ್​ ಇಲ್ಲ. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ, ಸಂಜು ಜೋಡಿಯಾಗಬಹುದು.
ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ​ ತಂಡದಲ್ಲಿ ಆಲ್​​ರೌಂಡರ್​ಗಳಾಗಿ ಶಕ್ತಿ ತುಂಬಲಿದ್ದಾರೆ. ಸೂರ್ಯಕುಮಾರ್ ಬ್ಯಾಟಿಂಗ್​​ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬೌಲಿಂಗ್​ನಲ್ಲಿ ಜಸ್ಪ್ರೀತ್ ಬುಮ್ರಾ ನೇತೃತ್ವದಲ್ಲಿ ಪರಾಕ್ರಮ ನಡೆಯಲಿದೆ. ಸ್ಪಿನ್ನರ್​​ಗಳಾಗಿ​ ಕುಲ್​ದೀಪ್ ಯಾದವ್, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಟೀಮ್ ಇಂಡಿಯಾ ಪ್ಲೇಯಿಂಗ್​- 11
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ