/newsfirstlive-kannada/media/media_files/2025/09/10/hardhik_pandya_gill-2025-09-10-19-33-54.jpg)
ಟಿ20 ಏಷ್ಯಾ ಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಅವರು ಟಾಸ್ ಗೆದ್ದುಕೊಂಡು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ 2ನೇ ಪಂದ್ಯದಲ್ಲಿ ಯುಎಇ ವಿರುದ್ಧ ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಟಾಸ್ ಗೆದ್ದುಕೊಂಡಿದ್ದಾರೆ. ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಯುಇಎ ಟೀಮ್ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿದೆ. ಈ ಟೂರ್ನಿಯಲ್ಲಿ ಎರಡು ತಂಡಕ್ಕೂ ಇದು ಮೊದಲ ಪಂದ್ಯವಾಗಿದೆ.
ಇದನ್ನೂ ಓದಿ:ನೆಟ್ ಬೌಲರ್ಸ್ಗೆ ಬೆಂಡೆತ್ತಿದ ಯಂಗ್ ಬ್ಯಾಟರ್.. 30 ಸಿಕ್ಸರ್ ಸಿಡಿಸಿದ ಅಭಿಷೇಕ್ ಶರ್ಮಾ
ಏಷ್ಯಾ ಕಪ್ನಲ್ಲಿ ಹಾಲಿ ಚಾಂಪಿಯನ್ ಆಗಿರುವ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಭರ್ಜರಿ ತಯಾರಿ ಮಾಡಿಕೊಂಡಿದೆ. ಅದರಂತೆ ಟೂರ್ನಿಯಲ್ಲಿ ಮೊದಲ ಪಂದ್ಯ ಆಡುತ್ತಿರುವ ಟೀಮ್ ಇಂಡಿಯಾ, ಯುಎಇ ತಂಡದ ವಿರುದ್ಧ ಸೆಣಸಾಡುತ್ತಿದೆ. ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಯುಎಇ ತಂಡ ಚಾಂಪಿಯನ್ ಟೀಮ್ ವಿರುದ್ಧ ಗೆಲ್ಲುವ ಭರವಸೆಯಲ್ಲಿ ಕಣಕ್ಕೆ ಇಳಿದಿದೆ.
ಸೂರ್ಯಕುಮಾರ್ ನೇತೃತ್ವದಲ್ಲಿ ಭಾರತ ತಂಡ ಮೈದಾನಕ್ಕೆ ಇಳಿದಿದ್ದು ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಓಪನರ್ ಆಗಿ ಬ್ಯಾಟ್ ಬೀಸಲಿದ್ದಾರೆ. ಜೊತೆಗೆ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿಯು ಆಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್, ತಿಲಕ್ ವರ್ಮಾ ಅವರು ಕ್ರೀಸ್ಗೆ ಆಗಮಿಸುವರು. ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಆಲ್ರೌಂಡರ್ಗಳಾಗಿ ತಂಡದ ಭರವಸೆ ಎನಿಸಿದ್ದಾರೆ. ಟೀಮ್ ಇಂಡಿಯಾ ಬಲಿಷ್ಠ ಬೌಲರ್ಗಳನ್ನು ಹೊಂದಿದೆ.
ಜಸ್ಪ್ರೀತ್ ಬುಮ್ರಾ ತಂಡದ ಮೊದಲ ವೇಗಿ ಎನಿಸಿದ್ದರೇ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 2ನೇ ವೇಗದ ಬೌಲರ್ ಆಗಿದ್ದಾರೆ. ಇನ್ನು ತಂಡದಲ್ಲಿ ಸ್ಪನ್ನರ್ಗಳಿಗೆ ಹೆಚ್ಚು ಅವಕಾಶ ನೀಡಲಾಗಿದ್ದು ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಮ್ಯಾಜಿಕ್ ಮಾಡಲಿದ್ದಾರೆ. ಇವರ ಜೊತೆಗೆ ಅಭಿಷೇಕ್ ಶರ್ಮಾ, ಶಿವಂ ದುಬೆ ಕೈಚಳಕ ತೋರಿಸುವ ನಿರೀಕ್ಷೆ ಇದೆ.
ಟೀಮ್ ಇಂಡಿಯಾ ಪ್ಲೇಯಿಂಗ್- 11
ಸೂರ್ಯಕುಮಾರ್ ಯಾದವ್ (ನಾಯಕ) ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಯುನೈಟೆಡ್ ಅರಬ್ ಎಮಿರೇಟ್ಸ್- ಪ್ಲೇಯಿಂಗ್ XI
ಮುಹಮ್ಮದ್ ವಸೀಮ್ (ನಾಯಕ), ಅಲಿಶನ್ ಶರಾಫು, ಮುಹಮ್ಮದ್ ಜೊಹೈಬ್, ರಾಹುಲ್ ಚೋಪ್ರಾ (ವಿಕೆಟ್ ಕೀಪರ್), ಆಸಿಫ್ ಖಾನ್, ಹರ್ಷಿತ್ ಕೌಶಿಕ್, ಹೈದರ್ ಅಲಿ, ಧ್ರುವ ಪರಾಶರ್, ಮುಹಮ್ಮದ್ ರೋಹಿದ್ ಖಾನ್, ಜುನೈದ್ ಸಿದ್ದಿಕ್, ಸಿಮ್ರಂಜೀತ್ ಸಿಂಗ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ