/newsfirstlive-kannada/media/media_files/2025/08/22/ind_vs_pak-2025-08-22-13-04-46.jpg)
ಏಷ್ಯಾ ಕಪ್ ಟೂರ್ನಿ ಇನ್ನೇನು ಮುಂದಿನ ತಿಂಗಳಿಂದ ಆರಂಭವಾಗಲಿದ್ದು 8 ದೇಶಗಳ ತಂಡಗಳು ಅಖಾಡಕ್ಕೆ ಧುಮುಕುತ್ತಿವೆ. ಇದರಲ್ಲಿ ಭಾರತ- ಪಾಕಿಸ್ತಾನ ನಡುವಿನ ಪಂದ್ಯ ಹೈವೋಲ್ಟೇಜ್ನಿಂದ ಕೂಡಿರಲಿದೆ. ಆದರೆ ಭಾರತ-ಪಾಕ್ ಪಂದ್ಯ ಆಡಬಾರದು ಎನ್ನುವ ಕೂಗು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಭಾರತದ ಕ್ರೀಡಾ ಸಚಿವಾಲಯ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು ಟೂರ್ನ್ಮೆಂಟ್ಗಳಲ್ಲಿ ನಾವು ಏನು ಮಾಡೋಕೆ ಆಗಲ್ಲ ಎಂದಿದೆ.
ಭಾರತ- ಪಾಕಿಸ್ತಾನದ ನಡುವಿನ ಪಂದ್ಯ ಎಂದರೆ ವಿಶ್ವದ ಕಿವಿ ಚುರುಕಾಗುತ್ತವೆ. ಯಾವುದು ಗೆಲ್ಲುತ್ತದೆ ಎಂದು ಬೆಟ್ಟಿಂಗ್ಗಳೇ ನಡೆದು ಬಿಡುತ್ತವೆ. ಯಾವಾತ್ತೂ ಕ್ರಿಕೆಟ್ ನೋಡದವರು ಟಿವಿ ಮುಂದೆ ಕುಳಿತು ಕ್ರಿಕೆಟ್ ನೋಡುತ್ತಾರೆ. ಇಂಡಿಯಾ-ಪಾಕ್ ಕ್ರಿಕೆಟ್ ಅಂದರೆ ಅಷ್ಟೊಂದು ಕ್ರೇಜ್ ಇರುತ್ತದೆ. ಇಂತಹ ಹೈವೋಲ್ಟೇಜ್ ಪಂದ್ಯ ಕೇಲವೇ ದಿನಗಳಲ್ಲಿ ಏಷ್ಯಾ ಕಪ್ ಟೂರ್ನಿಯಲ್ಲಿ ವೀಕ್ಷಣೆ ಮಾಡಬಹುದು.
ಭಾರತದ ಕ್ರೀಡಾ ಇಲಾಖೆಯು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಭಾರತ ಹಾಗೂ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಪಂದ್ಯಗಳು ನಡೆಯಬೇಕೇ, ಬೇಡವೇ ಎನ್ನುವ ನಿರ್ಧಾರ ಇನ್ನು ನಮ್ಮ ಟೇಬಲ್ ಮೇಲಿದೆ. ಆದರೆ ಏಷ್ಯಾ ಕಪ್ನಂತಹ ಟೂರ್ನಿಗಳು ಹಾಗೂ ಅಂತರಾಷ್ಟ್ರೀಯ ಮಟ್ಟದ ಟ್ರೋಫಿಗಳಲ್ಲಿ ಭಾರತ-ಪಾಕಿಸ್ತಾನ ಆಡುವುದು ನಮಗೆ ಸಂಬಂಧಿಸಿಲ್ಲ. ಇಂತಹ ಟ್ರೋಫಿಗಳಲ್ಲಿ ಪಾಕಿಸ್ತಾನವನ್ನು ಆಡಬೇಡ ಎಂದು ಹೇಳುವುದಕ್ಕೆ ಬರಲ್ಲ. ಈ ಪಂದ್ಯಗಳನ್ನು ನಿರ್ಬಂಧ ಮಾಡಲು ನಮಗೆ ಬರಲ್ಲ ಎಂದು ಹೇಳಿದೆ.
ಅಂದರೆ ಏಷ್ಯಾ ಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಅಖಾಡಕ್ಕೆ ಇಳಿಯಲಿದೆ ಎಂದರ್ಥ. ಯುಎಇನಲ್ಲಿ ಸೆಪ್ಟೆಂಬರ್ 9 ರಿಂದ ಆರಂಭವಾಗುವ ಏಷ್ಯಾ ಕಪ್ ಟೂರ್ನಿಯಲ್ಲಿ ಸೆಪ್ಟೆಂಬರ್ 14 ರಂದು ಭಾರತ- ಪಾಕಿಸ್ತಾನ ನಡೆವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಆದರೆ ದ್ವಿಪಕ್ಷೀಯವಾಗಿ ಅಂದರೆ ಭಾರತ- ಪಾಕಿಸ್ತಾನ ಪಂದ್ಯಕ್ಕೆ ಅವಕಾಶವಿಲ್ಲ. ಭಾರತದ ನೆಲದಲ್ಲಿ ಪಾಕಿಸ್ತಾನ ತಂಡ ಆಡುವುದಕ್ಕೆ ಅವಕಾಶ ನೀಡಲ್ಲ ಎಂದು ಹೇಳಿದ್ದಾರೆ.
ದ್ವಿಪಕ್ಷೀಯ ಪಂದ್ಯದಲ್ಲಿ ನಮ್ಮ ದೇಶದ ಮಣ್ಣಲ್ಲಿ ಪಾಕಿಸ್ತಾನ ಆಡಲು ಅವಕಾಶ ನೀಡಲ್ಲ. ಅದರಂತೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಿ ಕ್ರಿಕೆಟ್ ಆಡುವುದಿಲ್ಲ. ಆದರೆ ಟೂರ್ನಿಗಳಲ್ಲಿ ಭಾರತ-ಪಾಕ್ ನಡುವಿನ ಪಂದ್ಯ ನಿಲ್ಲಿಸಲು ನಮಗೆ ಬರುವುದಿಲ್ಲ. ಏಕೆಂದರೆ ನಾವು, ಒಲಿಂಪಿಕ್ ನಿಯಮಕ್ಕೆ ಬದ್ಧರಾಗಿರಬೇಕು ಎಂದು ಹೇಳಿದೆ. ಕ್ರೀಡಾ ಸಚಿವಾಲಯವು ತನ್ನ ನಿರ್ಧಾರ ತಿಳಿಸಿದ್ದು ಏಷ್ಯಾ ಕಪ್ನಲ್ಲಿ ಭಾರತ- ಪಾಕಿಸ್ತಾನದ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯುವುದು ಗ್ಯಾರಂಟಿ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ