/newsfirstlive-kannada/media/media_files/2026/03/08/team-india-26-2026-03-08-13-11-41.jpg)
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 7 ರನ್‌ಗಳ ರೋಚಕ ಜಯ ಸಾಧಿಸಿದ ಟೀಮ್ ಇಂಡಿಯಾ, ಟಿ20 ವಿಶ್ವಕಪ್ 2026ರ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮಹತ್ವಾಕಾಂಕ್ಷೆಯೊಂದಿಗೆ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ.
2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಇದೇ ಮೈದಾನದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. ಜೊತೆಗೆ ಕೆಲವು ವಾರಗಳ ಹಿಂದಷ್ಟೇ ಇದೇ ಟೂರ್ನಿಯ ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೂ ಸೋತು ಟೂರ್ನಿಯಿಂದ ಬಹುತೇಕ ಹೊರಬೀಳುವ ಹಂತಕ್ಕೆ ತಲುಪಿತ್ತು. ಈ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಈ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆಯೇ ಎಂಬ ಆತಂಕ ಅಭಿಮಾನಿಗಳಲ್ಲಿದೆ. ಹಾಗಾದರೆ ಇಂದಿನ ಹವಾಮಾನ ಮತ್ತು ಪಿಚ್ ಹೇಗಿರಲಿದೆ? ಇಲ್ಲಿದೆ ಸಂಪೂರ್ಣ ವಿವರ.
/filters:format(webp)/newsfirstlive-kannada/media/media_files/2026/03/08/hardik-pandya-and-mahika-sharma-1-2026-03-08-11-44-29.jpg)
ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಈವರೆಗೆ ಕಿವೀಸ್ (ನ್ಯೂಜಿಲೆಂಡ್) ಪಡೆಯನ್ನು ಒಮ್ಮೆಯೂ ಮಣಿಸಿಲ್ಲ. ಹೀಗಾಗಿ ಫೈನಲ್‌ನಲ್ಲಿ ಭರ್ಜರಿ ಜಯ ದಾಖಲಿಸಿ ಈ ಹಳೆಯ ದಾಖಲೆಯನ್ನು ಅಳಿಸಿಹಾಕಲು ಟೀಮ್ ಇಂಡಿಯಾ ಕಾತುರವಾಗಿದೆ. ಅತ್ತ ನ್ಯೂಜಿಲೆಂಡ್ ಕೂಡ ಈ ಟೂರ್ನಿಯಲ್ಲಿ ಏರಿಳಿತಗಳನ್ನು ಕಂಡಿದೆ. ಗ್ರೂಪ್ ಹಂತದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಸೂಪರ್-8 ಹಂತದಲ್ಲಿ ಇಂಗ್ಲೆಂಡ್ ಎದುರು ಕಿವೀಸ್ ಸೋಲನುಭವಿಸಿತ್ತು. ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಫಿನ್ ಅಲೆನ್ ಕೇವಲ 33 ಎಸೆತಗಳಲ್ಲಿ ಸಿಡಿಸಿದ ಅಮೋಘ ಶತಕದ ನೆರವಿನಿಂದ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾವನ್ನು ಸುಲಭವಾಗಿ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟಿದೆ.
ಅಹಮದಾಬಾದ್ ಪಿಚ್ ರಿಪೋರ್ಟ್
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಹೆಚ್ಚು ನೆರವಾಗುತ್ತದೆ. 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲೂ ಇದೇ ರೀತಿಯ ವಾತಾವರಣ ನಿರೀಕ್ಷಿಸಬಹುದು. ಇಲ್ಲಿನ ಪಿಚ್ ಅನ್ನು ಕೆಂಪು ಮಣ್ಣಿನಿಂದ (Red Soil) ಸಿದ್ಧಪಡಿಸಿರುವುದರಿಂದ ಬ್ಯಾಟರ್‌ಗಳಿಗೆ ಬಿರುಸಿನ ಶಾಟ್ ಹೊಡೆಯುವುದು ಸುಲಭವಾಗಲಿದೆ. ಕೆಂಪು ಮಣ್ಣಿನ ಪಿಚ್‌ನಲ್ಲಿ ಚೆಂಡು ಅತ್ಯುತ್ತಮ ಬೌನ್ಸ್‌ನೊಂದಿಗೆ ನೇರವಾಗಿ ಬ್ಯಾಟ್‌ಗೆ ಬರುತ್ತದೆ. ಹೀಗಾಗಿ ಇದೊಂದು ಹೈ-ಸ್ಕೋರಿಂಗ್ ಪಂದ್ಯ (High Scoring Match) ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮಳೆ ಬರುತ್ತಾ?
ಅಕ್ಯುವೆದರ್ (Accuweather) ಆ್ಯಪ್ ವರದಿಯ ಪ್ರಕಾರ, ಇಂದು ಅಹಮದಾಬಾದ್‌ನಲ್ಲಿ ಮಳೆಯಾಗುವ ಯಾವುದೇ ಸಾಧ್ಯತೆಯಿಲ್ಲ. ಬೆಳಗ್ಗೆ: ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಒಣ ಹವೆ ಇರಲಿದೆ. ಮಧ್ಯಾಹ್ನ: ಬಿಸಿಲಿನ ಝಳ ಹೆಚ್ಚಾಗಲಿದ್ದು ತಾಪಮಾನ 41 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು. ಸಂಜೆ (ಪಂದ್ಯದ ಸಮಯ): ಸಂಜೆಯ ವೇಳೆಗೆ ತಾಪಮಾನ 29 ಡಿಗ್ರಿಗೆ ಇಳಿಯಲಿದೆ.
ಒಟ್ಟಾರೆಯಾಗಿ ಫೈನಲ್ ಪಂದ್ಯದ ವೇಳೆ ಹವಾಮಾನ ಶುಭ್ರವಾಗಿರಲಿದ್ದು, ಯಾವುದೇ ಮಳೆಯ ಮುನ್ಸೂಚನೆ ಇಲ್ಲ. ಇದು ಕ್ರೀಡಾಭಿಮಾನಿಗಳಿಗೆ ಭಾರಿ ನೆಮ್ಮದಿ ತಂದಿದೆ. ಪೂರ್ಣ 40 ಓವರ್‌ಗಳ ರೋಮಾಂಚಕ ಪಂದ್ಯವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದಾಗಿದೆ.
ಇದನ್ನೂ ಓದಿ: IAS ಅಧಿಕಾರಿಗಳ ವೃತ್ತಿಜೀವನ: ತರಬೇತಿ ಮುಗಿದ ಬಳಿಕ ಸಿಗುವ ಮೊದಲ ಪೋಸ್ಟಿಂಗ್ ಯಾವುದು? ಪ್ರಮೋಷನ್ ಹೇಗಿರುತ್ತೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us