/newsfirstlive-kannada/media/media_files/2026/02/07/surya-kumar-yadav-3-2026-02-07-16-52-06.jpg)
ಟಿ-20 ವಿಶ್ವಕಪ್​ನಲ್ಲಿ ಪವರ್ ಹಿಟ್ಟರ್ಸ್, ತಂಡದ ದೊಡ್ಡ ಶಕ್ತಿ. ಇವರು ಹೊಡೆಯೋ ಒಂದೊಂದು ಬೌಂಡ್ರಿ-ಸಿಕ್ಸರ್, ತಂಡದ ಗೆಲುವನ್ನ ಹೆಚ್ಚಿಸುತ್ತದೆ. ಎದುರಾಳಿ ಬೌಲರ್​ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ಈ ಪವರ್ ಹಿಟ್ಟರ್ಸ್​, ತಂಡದ ಗೇಮ್ ಚೇಂಜರ್ಸ್ ಅಂತ ಗುರುತಿಸಿಕೊಂಡಿದ್ದಾರೆ. ಮುಂಬರುವ ವಿಶ್ವಕಪ್​​ನಲ್ಲೂ ಟೀಮ್ ಇಂಡಿಯಾಕ್ಕೆ ಆತ್ಮವಿಶ್ವಾಸ ಹೆಚ್ಚಿಸಿರೋದು ಇದೇ ಪವರ್ ಹಿಟ್ಟರ್ಸ್.
ಪವರ್ ಹಿಟ್ಟರ್ ನಂ.1: ಅಭಿಷೇಕ್ ಶರ್ಮಾ
ಮೊದಲ ಬಾಲ್​ನಿಂದಲೇ ಅಟ್ಯಾಕಿಂಗ್ ಮೂಡ್​​ಗೆ ಜಾರುವ ಅಗ್ರೆಸಿವ್ ಓಪನರ್ ಅಭಿಷೇಕ್ ಶರ್ಮಾ, ಪವರ್ ಪ್ಲೇನ ನಂಬರ್.1 ಪವರ್ ಹಿಟ್ಟರ್. ಬೌಂಡ್ರಿ ಸಿಕ್ಸರ್​ಗಳ ಮೂಲಕ ಕ್ವಿಕ್ ಆಗಿ ರನ್ ಸ್ಕೋರ್ ಮಾಡೋ ಅಭಿಷೇಕ್, ಟಿ-20 ಕ್ರಿಕೆಟ್​ನ ಡೆಡ್ಲಿ ಌಂಡ್ ಡೇಂಜರಸ್ ಪ್ಲೇಯರ್.​
ಪವರ್ ಹಿಟ್ಟರ್ ನಂ.2: ಇಶಾನ್ ಕಿಶನ್
ಅತ್ಯುತ್ತಮ ಸ್ಟ್ರೈಕ್​ರೇಟ್, ಬಿಗ್ ಹಿಟ್ಟಿಂಗ್, ಎಕ್ಸ್​ಪ್ಲೋಸಿವ್ ಬ್ಯಾಟಿಂಗ್​​​ನಿಂದ ಗಮನ ಸೆಳೆದಿರುವ ಇಶಾನ್ ಕಿಶನ್, ಟೀಮ್ ಇಂಡಿಯಾದ ನಂಬರ್.2 ಪವರ್ ಹಿಟ್ಟರ್. ಇಶಾನ್ ಕಿಶನ್ ಕ್ರೀಸ್​ನಲ್ಲಿ ಇರೋವರೆಗೂ, ರನ್​​ಗಳಿಗೇನು ಬರವಿಲ್ಲ. ಕಿಶನ್, ಒಳ್ಳೆ ಫಾರ್ಮ್​ನಲ್ಲಿದ್ರಂತೂ ಎದುರಾಳಿ ಬೌಲರ್​ಗಳ ಕಥೆ ಮುಗೀತು.
ಇದನ್ನೂ ಓದಿ: ಈ ಸ್ಟಾರ್​ನ ವಿಚಾರದಲ್ಲಿ ಗಂಭೀರ್ ಟೆನ್ಶನ್ ಹೆಚ್ಚಾಗಿದೆ.. ಹಳೆಯ ಖದರ್ ಇಲ್ಲವೇ ಇಲ್ಲ..!
ಪವರ್ ಹಿಟ್ಟರ್ ನಂ.3: ಹಾರ್ದಿಕ್ ಪಾಂಡ್ಯ!
ಗೇಮ್ ಫಿನಿಷರ್ ರೋಲ್​ಗೆ ಹಾರ್ದಿಕ್​​ ಪಾಂಡ್ಯ, ಸಖತ್ ಆಗಿ ಸೂಟ್ ಆಗ್ತಾರೆ. ಹಾರ್ದಿಕ್ ಇನ್ನಿಂಗ್ಸ್​ ಕೊನೆಯವರೆಗೂ ಕ್ರೀಸ್​ನಲ್ಲಿ ನಿಂತ್ರೆ ಬಿಗ್ ಸ್ಕೋರ್ ಬರೋದ್ರಲ್ಲಿ ಅನುಮಾನ ಇಲ್ಲ. ಹಾರ್ಡ್ ಹಿಟ್ಟಿಂಗ್ ಆಲ್​ರೌಂಡರ್ ಎನಿಸಿಕೊಂಡಿರೋ ಹಾರ್ದಿಕ್, ಟೀಮ್ ಇಂಡಿಯಾದ ಗೆಲುವಿನ ವೆಪನ್.
ಪವರ್ ಹಿಟ್ಟರ್ ನಂ.4: ಶಿವಂ ದುಬೆ
ಕೆಳ ಕ್ರಮಾಂಕದಲ್ಲಿ ಬಿಗ್ ಹಿಟ್ಟಿಂಗ್​ ಮಾಡೋದ್ರಲ್ಲಿ ಶಿವಂ ದುಬೆ ಫೇಮಸ್. ಸುಲಭವಾಗಿ ಬೌಂಡ್ರಿ ಕ್ಲಿಯರ್ ಮಾಡೋ ದುಬೆ, ಆ ದಿನದಲ್ಲಿ ಏನ್ ಬೇಕಾದ್ರೂ ಮಾಡಿಬಿಡ್ತಾರೆ. ಟಿ-ಟ್ವೆಂಟಿ ಫಾರ್ಮೆಟ್​ಗೆ ದುಬೆ ಹೇಳಿ ಮಾಡಿಸಿದ ಆಟಗಾರ. ಹಾಗಾಗಿ ದುಬೆ ANY DAY ಟೀಮ್ ಇಂಡಿಯಾದ ಬಿಗ್ ಮ್ಯಾಚ್​​​​​​ ವಿನ್ನರ್.
ಪವರ್ ಹಿಟ್ಟರ್ ನಂ.5: ರಿಂಕು ಸಿಂಗ್
ಎಡಗೈ ಬ್ಯಾಟರ್ ರಿಂಕು ಸಿಂಗ್ ಸಾಕಷ್ಟು ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಡೆಥ್ ಓವರ್​ಗಳಲ್ಲಿ ಪವರ್ ಹಿಟ್ಟಿಂಗ್ ಮೂಲಕ ಗಮಸ ಸೆಳೆದಿರುವ ಯು.ಪಿ ಬ್ಯಾಟರ್, ತಂಡದ ಆಪತ್ಭಾಂಧವ ಕೂಡ ಹೌದು.! ಒಂದೇ ಓವರ್​ನಲ್ಲಿ ರಿಂಕು, ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ರಿಂಕು ಇದ್ರೆ ಟೆನ್ಶನ್ ಇಲ್ಲ.
ಈ ಟಿ-20 ವಿಶ್ವಕಪ್​ನಲ್ಲಿ ಪವರ್​ ಹಿಟ್ಟರ್ಸ್​ ತಂಡದ ಗೇಮ್ ಚೇಂಜರ್ಸ್. ಟೀಮ್ ಇಂಡಿಯಾದಲ್ಲಿ ಸಾಕಷ್ಟು ಪವರ್ ಹಿಟ್ಟರ್ಸ್ ಇರೋದ್ರಿಂದ ಡಿಫೆಂಡಿಂಗ್ ಚಾಂಪಿಯನ್ಸ್​​ಗೆ ಆನೆ ಬಲ ಬಂದಂತಾಗಿದೆ.
ಇದನ್ನೂ ಓದಿ:ಹಾಫ್ ಸೆಂಚುರಿ ಭಾರಿಸಿದ ನಟಿ ಅಭಿಷೇಕ್ ಬಚ್ಚನ್: ಪತ್ನಿ ಐಶ್ಚರ್ಯಾ ರೈ ಹಾರೈಸಿದ್ದು ಹೇಗೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us