/newsfirstlive-kannada/media/media_files/2025/12/09/gambhir-3-2025-12-09-14-00-04.jpg)
ಟಿ20 ಫಾರ್ಮೆಟ್​​ನ ಬಿರುಗಾಳಿ ಬೌಲರ್​​ ಖ್ಯಾತಿಯ ಜಸ್​​​ಪ್ರಿತ್​ ಬೂಮ್ರಾ ಖದರ್​ ಈಗ ಮಾಯವಾಗಿದೆ. T20​ ಫಾರ್ಮೆಟ್​ನಲ್ಲಿ ಬೂಮ್ರಾ ರಿಧಮ್​ ಕಳೆದುಕೊಂಡಿದ್ದಾರೆ. ಬೆಂಕಿ, ಬಿರುಗಾಳಿಯ ಎಸೆತಗಳನ್ನ ಎಸೆದು ಎದುರಾಳಿಯ ಕಂಗೆಡಿಸ್ತಿದ್ದ ಬೂಮ್ರಾ ಹಳೆ ಖದರ್​​ ಈಗ ಮಾಯವಾಗಿದೆ. ಸರಣಿಯಿಂದ ಸರಣಿಗೆ ಬೂಮ್ರಾ ನೀಡ್ತಿರೋ ಕಳಪೆ ಪರ್ಫಾಮೆನ್ಸ್​ ವಿಶ್ವಕಪ್​ಗೂ ಮುನ್ನ ಟೀಮ್​ ಮ್ಯಾನೇಜ್​ಮೆಂಟ್​ಗೆ ಟೆನ್ಶನ್​ ಹೆಚ್ಚಿಸಿದೆ.
ಟೀಮ್​ ಇಂಡಿಯಾ ವೇಗಿ ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರಿತ್​ ಬೂಮ್ರಾ ಅಂದ್ರೆ ಎದುರಾಳಿ ಪಡೆ ಇಷ್ಟು ದಿನ ಬೆಚ್ಚಿ ಬೀಳ್ತಿತ್ತು. ಈ ಬೂಮ್ರಾ ಆಟಕ್ಕೆ ಟೀಮ್​ ಇಂಡಿಯಾಗೇ ಭಯ ಶುರುವಾಗಿಬಿಟ್ಟಿದೆ. ತವರಿನಲ್ಲಿ ನಡೆಯೋ ಪ್ರತಿಷ್ಟಿತ ಸರಣಿಯಲ್ಲಿ ಟೈಟಲ್​ ಡಿಫೆಂಡ್​ ಮಾಡಿಕೊಳ್ಳೋಕೆ ಮುಂದಾಗಿರೋ ಟೀಮ್​ ಇಂಡಿಯಾ ಬೂಮ್ರಾನೇ ದೊಡ್ಡ ತಲೆನೋವಾಗಿದ್ದಾರೆ. ಟೀಮ್​ ಮ್ಯಾನೇಜ್​​ಮೆಂಟ್​ಗೆ ಬೂಮ್ರಾ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ.
ಇದನ್ನೂ ಓದಿ: T20 world cup: ಅಭಿಷೇಕ್ ಶರ್ಮಾಗೆ ಜೋಡಿ ಯಾರು..? ಇಬ್ಬರು ಸ್ಟಾರ್​ಗಳ ಮಧ್ಯೆ ಫೈಟ್​..!
/filters:format(webp)/newsfirstlive-kannada/media/media_files/2025/12/19/jasprit-bumrah-2025-12-19-13-20-58.jpg)
ಟ್ರ್ಯಾಕ್​ ತಪ್ಪಿದ್ರಾ ಬೂಮ್ರಾ?
ಟೀಮ್​ ಇಂಡಿಯಾ ಮ್ಯಾನೇಜ್​​​ಮೆಂಟ್​ಗೆ ವೇಗಿ ಜಸ್​ಪ್ರಿತ್​ ಬೂಮ್ರಾ ಫಾರ್ಮ್​ ದೊಡ್ಡ ತಲೆ ನೋವಾಗಿದೆ. ಕರಾರುವಕ್​ ಬೌಲಿಂಗ್​ನಿಂದ ಎಂದುರಾಳಿಗಳನ್ನ ಕಂಗೆಡಿಸ್ತಾ ಇದ್ದ ವೇಗಿ, ಈಗ ಸ್ವಂತ ತಂಡವನ್ನೇ ಕಂಗಾಲ್​ ಮಾಡಿಬಿಟ್ಟಿದ್ದಾರೆ. ಬೂಮ್ರಾ ಬೌಲಿಂಗ್​ ಎದುರು ಬ್ಯಾಟಿಂಗ್​ ನಡೆಸಲು ಭಯ ಬೀಳ್ತಾ ಇದ್ದ ಬ್ಯಾಟರ್ಸ್​ ಈಗ ಬೌಂಡರಿ, ಸಿಕ್ಸರ್​ಗಳನ್ನ ಸಲೀಸಾಗಿ ಚಚ್ತಿದ್ದಾರೆ. ನ್ಯೂಜಿಲೆಂಡ್​ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.
ನ್ಯೂಜಿಲೆಂಡ್​ ವಿರುದ್ಧ ಕರಿಯರ್​ನ ಕಳಪೆ ಸಾಧನೆ
ತಿರುವನಂತಪುರಂನಲ್ಲಿ ನಡೆದ ಪಂದ್ಯದಲ್ಲಿ ಬೂಮ್ರಾ, ಬೌಲಿಂಗ್​ ದಾಳಿಯಲ್ಲಿ ಧಮ್ಮೇ ಇರಲಿಲ್ಲ. ಡೇರಿಲ್ ಮಿಚೆಲ್, ಫಿನ್ ಅಲೆನ್, ರಚಿನ್​ ರವಿಂದ್ರ.. ಅಷ್ಟೇ ಏಕೆ ಇಶ್​ ಸೋಧಿ, ಜೇಕಬ್​ ಢಫಿ ಕೂಡ ಬೂಮ್ರಾ ಬೌಲಿಂಗ್​ ದಾಳಿಯನ್ ಚಿಂದಿ ಉಡಾಯಿಸಿದ್ರು. 4 ಓವರ್​ ಬೌಲಿಂಗ್​ ಮಾಡಿ ಒಂದೇ ಒಂದು ವಿಕೆಟ್​ ಕಬಳಿಸದ ಬೂಮ್ರಾ, 14.50ರ ಎಕಾನಮಿಯಲ್ಲಿ ಬರೋಬ್ಬರಿ 58 ರನ್​ ಬಿಟ್ಟು ಕೊಟ್ರು.
ಬೂಮ್ರಾ ಕರಿಯರ್​​ನಲ್ಲೇ ಇದು ಮೋಸ್ಟ್​ ಎಕ್ಸ್​​ಪೆನ್ಸಿವ್​ ಸ್ಪೆಲ್​.!
ನ್ಯೂಜಿಲೆಂಡ್​ ವಿರುದ್ಧದ ಸರಣಿಯಲ್ಲಿ ಬೂಮ್ರಾ ಆಟವೇ ನಡೀಲಿಲ್ಲ. ವರ್ಕ್​​ಲೋಡ್​ ಮ್ಯಾನೇಜ್​ಮೆಂಟ್​ ಕಾರಣ ನೀಡಿ ಒಂದು ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡ ಬೂಮ್ರಾ, ಆಡಿದ 4 ಪಂದ್ಯಗಳಲ್ಲಿ ನೀಡಿದ್ದು ಹೀನಾಯ ಪ್ರದರ್ಶನ. 15 ಓವರ್​​ ಬೌಲಿಂಗ್​ ಮಾಡಿ ಕೇವಲ 4 ವಿಕೆಟ್​ ಕಬಳಿಸಿದ ಬೂಮ್ರಾ, ಬರೋಬ್ಬರಿ 142 ರನ್​ ಬಿಟ್ಟು ಕೊಟ್ರು. ನ್ಯೂಜಿಲೆಂಡ್​ ವಿರುದ್ಧದ ಸರಣಿ ಮಾತ್ರವಲ್ಲ.. ಅದಕ್ಕೂ ಹಿಂದಿನ ಎರಡು ಸರಣಿಗಳಲ್ಲೂ ಬೂಮ್ರಾ ಬೌಲಿಂಗ್​ ಸಾಧಾರಣವಾಗಿತ್ತು. ಆಸ್ಟ್ರೇಲಿಯಾದ ಪೇಸ್​ & ಬೌನ್ಸಿ ಟ್ರ್ಯಾಕ್​ನಲ್ಲೂ ಯಾರ್ಕರ್​ ಸ್ಪೆಷಲಿಸ್ಟ್​ ಬಿಗಿ ಬೌಲಿಂಗ್​ ದಾಳಿ ನಡೆಸುವಲ್ಲಿ ಫೇಲ್​ ಆದ್ರು. ಆಡಿದ 5 ಪಂದ್ಯಗಳಿಂದ ಕೇವಲ 3 ವಿಕೆಟ್​ ಕಬಳಿಸಿದ್ರು.
ಇದನ್ನೂ ಓದಿ: 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ‘ವನ್ಯಾ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಗರಿ!
/filters:format(webp)/newsfirstlive-kannada/media/post_attachments/wp-content/uploads/2023/08/BUMRAH.jpg)
ತವರಿನಲ್ಲಿ ನಡೆದ ಸೌತ್​ ಆಫ್ರಿಕಾ ಸರಣಿಯಲ್ಲೂ ಬೂಮ್ರಾ ಅಬ್ಬರ ನಡೆಯಲಿಲ್ಲ. ಸೌತ್​ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 3 ಪಂದ್ಯಗಳನ್ನಾಡಿದ ಬೂಮ್ರಾ, 11 ಓವರ್​ ಬೌಲಿಂಗ್​ ಮಾಡಿದ್ರು. ಕೇವಲ 4 ವಿಕೆಟ್​ ಕಬಳಿಸಿದ ಬೂಮ್ರಾ 8.86ರ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ರು.
ಬೂಮ್ರಾ ಬೌಲಿಂಗ್ ಸಾಧಾರಣ
ಕಳೆದ ಏಷ್ಯಾಕಪ್​ ಟೂರ್ನಿಯಲ್ಲೂ ಬೂಮ್ರಾ ಬೌಲಿಂಗ್​ ಅಷ್ಟಕಷ್ಟೇ. ದುಬೈನಲ್ಲಿ ದರ್ಬಾರ್​ ನಡೆಸ್ತಾರೆ ಅನ್ನೋ ಅಪಾರ ನಿರೀಕ್ಷೆಯಿಟ್ಟಿದ್ದ ಫ್ಯಾನ್ಸ್​ಗೆ ನಿರಾಸೆ ಮೂಡಿಸಿದ್ರು. 5 ಪಂದ್ಯ ಬೌಲಿಂಗ್​ ಮಾಡಿದ ಬೂಮ್ರಾ ಕೇವಲ 7 ವಿಕೆಟ್​ ಉರುಳಿಸಿದ್ರು. ಯುಎಇ ಬೌಲರ್​ ಜುನೈದ್​ ಸಿದ್ಧಕಿ ಅನ್ನೋ ಯುವ ವೇಗಿಯೇ 3 ಪಂದ್ಯಕ್ಕೆ 9 ವಿಕೆಟ್​ ಕಬಳಿಸಿದ ಟೂರ್ನಮೆಂಟ್​ನಲ್ಲಿ ಬೂಮ್ರಾ 7 ವಿಕೆಟ್​ಗೆ ಸುಸ್ತಾದ್ರು.
ಸತತವಾಗಿ 4 ಸರಣಿಗಳಿಂದ ಜಸ್​​ಪ್ರಿತ್​ ಬೂಮ್ರಾ ಟ್ರ್ಯಾಕ್​ ತಪ್ಪಿದ್ದಾರೆ. ಸರಣಿಯಿಂದ ಸರಣಿಗೆ ಬೂಮ್ರಾ ಖದರ್​ ಕಳೆದುಕೊಳ್ತಿದ್ದಾರೆ. ನ್ಯೂಜಿಲೆಂಡ್​ ವಿರುದ್ಧವೂ ವೈಫಲ್ಯ ಅನುಭವಿಸಿದ ಬಳಿಕ ​ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಟೆನ್ಶನ್​ ಮತ್ತಷ್ಟು ಹೆಚ್ಚಿಸಿದೆ. ಪ್ರತಿಷ್ಟಿತ ಸರಣಿಗೂ ಮುನ್ನ ಬೂಮ್ರಾ ವೀಕ್​​ನೆಸ್​ ಮೇಲೆ ವರ್ಕೌಟ್ ಮಾಡಿ ರಿಧಮ್​ ಕಂಡುಕೊಳ್ಳಬೇಕಿದೆ. ಇಲ್ಲದಿದ್ರೆ, ಟೀಮ್​ ಇಂಡಿಯಾಗೆ ಹಿನ್ನಡೆ ತಪ್ಪಿದ್ದಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us