ಡೆಲ್ಲಿಯಲ್ಲಿ ಇವತ್ತು ಭಾರತಕ್ಕೆ ನಮೀಬಿಯಾ ಸವಾಲ್.. ಟೀಂ ಇಂಡಿಯಾ ಪ್ಲಾನ್ ಏನು..?

ಯುಎಸ್​ಎ ವಿರುದ್ಧ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಇಂದು ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಸಿದ್ಧತೆ ನಡೆಸಿಕೊಂಡಿದೆ. ಅಮೆರಿಕಾ ವಿರುದ್ಧ ಟೀಮ್ ಇಂಡಿಯಾ, ಬ್ಯಾಟಿಂಗ್​ನಲ್ಲಿ ಪರದಾಡಿತ್ತು. ಹಾಗಾಗಿ ಸೂರ್ಯಕುಮಾರ್ ಯಾದವ್ ಪಡೆ ಈ ಪಂದ್ಯದಲ್ಲಿ ಎಲ್ಲಾ ಬಾಕ್ಸ್ ಟಿಕ್ ಮಾಡಲು ಹೊರಟಿದೆ.

author-image
Ganesh Kerekuli
india vs namibia
Advertisment
  • ನಮೀಬಿಯಾ ವಿರುದ್ಧ ಸಿಡಿದೇಳಲು ಅಭಿಷೇಕ್ ರೆಡಿ..?
  • ಡೆಲ್ಲಿಯಲ್ಲಿ ಕಿಶನ್, ತಿಲಕ್, ದುಬೆ ದರ್ಬಾರ್ ನಡೆಸ್ತಾರಾ..?
  • ಕ್ಯಾಪ್ಟನ್ ಸೂರ್ಯಕುಮಾರ್ ಕನ್ಸಿಸ್ಟೆನ್ಸಿ, ತಂಡಕ್ಕೆ ವರದಾನ..!

ಡೆಲ್ಲಿಯ ಅರುಣ್ ಜೀಟ್ಲಿ ಮೈದಾನ ಟೀಮ್ ಇಂಡಿಯಾ ವರ್ಸಸ್ ನಮೀಬಿಯಾ ಪಂದ್ಯಕ್ಕೆ ಸಜ್ಜಾಗಿದೆ. ಸೂರ್ಯಕುಮಾರ್ ಯಾದವ್ ಪಡೆ ಬಲಿಷ್ಟ ತಂಡವಾಗಿ ಕಾಣ್ತಿದೆ. ಸದ್ಯ ಪಂದ್ಯ ಗೆಲ್ಲುವ ಫೇವರಿಟ್ಸ್ ಎನಿಸಿಕೊಂಡಿರುವ ಟೀಮ್ ಇಂಡಿಯಾಕ್ಕೆ, ನಮೀಬಿಯಾ ಟಫ್ ಫೈಟ್ ನೀಡಲು ಮುಂದಾಗಲಿದೆ. ಅಮೆರಿಕಾ ವಿರುದ್ಧ ಬ್ಯಾಟಿಂಗ್​ನಲ್ಲಿ ಪರದಾಡಿದ್ದ ಸ್ಕೈ ಪಡೆ ಇಂದು ಹಳೆ ತಪ್ಪನ್ನ ತಿದ್ದಿಕೊಳ್ಳಲು ಹೊರಟಿದೆ.

ನಮೀಬಿಯಾ ವಿರುದ್ಧ ಸಿಡಿದೇಳಲು ಅಭಿಷೇಕ್ ರೆಡಿ?

ಯುಎಸ್​ಎ ವಿರುದ್ಧ ಡೆಡ್ಲಿ ಌಂಡ್ ಡೇಂಜರಸ್ ಬ್ಯಾಟರ್ ಅಭಿಷೇಕ್ ಶರ್ಮಾ ಭಾರೀ ನಿರಾಸೆ ಅನುಭವಿಸಿದ್ರು. ಅಮೆರಿಕಾ ತಂಡದ ಸಾಲಿಡ್ ಫೀಲ್ಡ್ ಪ್ಲೇಸಿಂಗ್​ಗೆ ಬಲಿಯಾದ ಅಭಿಷೇಕ್, ಡಕ್​ಔಟ್ ಆಗಿದ್ರು. ಆದ್ರೀಗ ಅಭಿಷೇಕ್, ಇಂದು ನಮೀಬಿಯಾ ಬೌಲರ್​ಗಳನ್ನ ಷೇಕ್ ಮಾಡಲು ರೆಡಿಯಾಗಿದ್ದಾರೆ. 

ಇದನ್ನೂ ಓದಿ:ಕೇಂದ್ರ ಸರ್ಕಾರದಿಂದ ವಂದೇ ಮಾತರಂಗೆ ಹೊಸ ಗೈಡ್​ಲೈನ್ಸ್​!: ಇನ್ಮುಂದೆ ಜನಗಣಮನಕ್ಕೂ ಮುನ್ನ ವಂದೇ ಮಾತರಂ ಕಡ್ಡಾಯ!

surya hardik pandya

ಸಂಜು ಸ್ಯಾಮ್ಸನ್ ಬದಲಿಗೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಇಶಾನ್ ಕಿಶನ್, ನ್ಯೂಜಿಲೆಂಡ್ ಸರಣಿ ಮತ್ತು ಅಭ್ಯಾಸ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ರು. ಆದ್ರೆ ಯುಎಸ್​​ಎ ವಿರುದ್ಧ ಕಿಶನ್ ಬಂದ ವೇಗದಲ್ಲೇ ಹಿಂತಿರುಗಿದ್ರು. ಮತ್ತೊಂದೆಡೆ​ ತಿಲಕ್ ವರ್ಮಾ, ಕಮ್​ಬ್ಯಾಕ್ ಪಂದ್ಯದಲ್ಲಿ ಡೀಸೆಂಟ್ ಪರ್ಫಾಮೆನ್ಸ್ ನೀಡಿದ್ದಾರೆ. ಇನ್ನು ಶಿವಂ ದುಬೆ, ವಾಂಖೆಡೆಯಲ್ಲಿ ಕ್ಲೂ ಇಲ್ಲದೇ, ವಿಕೆಟ್ ಒಪ್ಪಿಸಿ ಹೊರನಡೆದಿದ್ರು. ಈ ತ್ರಿಮೂರ್ತಿಗಳು ಇವತ್ತು, ನಮೀಬಿಯಾ ವಿರುದ್ದ ಡೆಲ್ಲಿಯಲ್ಲಿ ದರ್ಬಾರ್ ನಡೆಸಬೇಕಿದೆ. 

ಅಮೆರಿಕಾ ವಿರುದ್ಧ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಏಕಾಂಗಿ ಹೋರಾಟ ನಡೆಸಿ ಪಂದ್ಯ ಗೆಲ್ಲಿಸಿದ್ರು. ಸೂರ್ಯ ಕನ್ಸಿಸ್ಟೆಂಟ್ ಪರ್ಫಾಮೆನ್ಸ್, ಟೀಮ್ ಇಂಡಿಯಾಕ್ಕೆ ಬಿಗ್ ಪ್ಲಸ್ ಪಾಯಿಂಟ್ ಆಗಿದೆ. ಕ್ಯಾಪ್ಟನ್ ಸೂರ್ಯ ಇದೇ ಫಾರ್ಮ್​ ಮುಂದುವರೆಸಿದ್ರೆ, ಭಾರತಕ್ಕೆ ಟಿ-ಟ್ವೆಂಟಿ ವಿಶ್ವಕಪ್ ಗೆಲ್ಲೋದು ಕಷ್ಟವೇನಲ್ಲ.  

ಟೀಮ್ ಇಂಡಿಯಾ ಟಾಪ್ ಮತ್ತು ಮಿಡಲ್ ಆರ್ಡರ್ ಫ್ಲಾಪ್ ಆದ್ರೆ, ಕೆಳ ಕ್ರಮಾಂಕದ ಬ್ಯಾಟರ್ಸ್ ಮೇಲೆ ಹೆಚ್ಚು ಒತ್ತಡ ಬೀಳಲಿದೆ. ಆ ಒತ್ತಡವನ್ನ ರಿಂಕು ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ, ನಿಭಾಯಿಸಬೇಕಿದೆ. ಪ್ರೆಷರ್​ನಲ್ಲಿ ಅದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿರುವ ರಿಂಕು ಮತ್ತು ಹಾರ್ದಿಕ್, ಬ್ಯಾಟಿಂಗ್​ನಲ್ಲಿ ತಂಡದ ಆಪತ್ಭಾಂದವರಾಗಬೇಕು.

ಇದನ್ನೂ ಓದಿ:ಮಾನಸಿಕ ಗೊಂದಲ ದೂರ ಆಗುತ್ತದೆ -ಹೇಗಿದೆ ನಿಮ್ಮ ರಾಶಿ ಭವಿಷ್ಯ..?

ವೈರೆಲ್ ಫೀವರ್​ನಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ವೇಗಿ ಜಸ್ಪ್ರೀತ್ ಬೂಮ್ರಾ, ಇದೀಗ ಫುಲ್ ಫಿಟ್ ಆಗಿದ್ದಾರೆ. ಬೂಮ್ರಾ ಪ್ಲೇಯಿಂಗ್ ಇಲೆವೆನ್​​ಗೆ ಎಂಟ್ರಿಯಾದ್ರೆ, ಯಾರಿಗೆ ಕೊಕ್ ಕೊಡೋದು ಅನ್ನೋದು ಟೀಮ್ ಮ್ಯಾನೇಜ್ಮೆಂಟ್ ಚಿಂತೆಯಾಗಿದೆ. ಸದ್ಯ ಕೋಚ್ ಗಂಭೀರ್ ಮುಂದಿರೋ ಆಪ್ಶನ್ ಯಾರು ಅನ್ನೋದೇ ಗೊತ್ತಾಗ್ತಿಲ್ಲ.

ನಮೀಬಿಯಾ ತಂಡವನ್ನ ಲಘುವಾಗಿ ಪರಿಗಣಿಸುವಂತಿಲ್ಲ

ಜೆರಾರ್ಡ್​ ಎರಾಸ್ಮಸ್ ನೇತೃತ್ವದ ನಮೀಬಿಯಾ ತಂಡ, ಟಿ-20 ಕ್ರಿಕೆಟ್​ನಲ್ಲಿ ಡೀಸೆಂಟ್ ಆಗಿದೆ. ತಂಡದಲ್ಲಿ ಬಿಗ್ ಹಿಟ್ಟರ್ಸ್​ ಜೊತೆಗೆ ಟಿ-ಟ್ವೆಂಟಿ ಸ್ಪೆಷಲಿಸ್ಟ್ ಬೌಲರ್​ಗಳಿದ್ದಾರೆ. ಟೀಮ್ ಇಂಡಿಯಾಕ್ಕೆ ತಕ್ಕ ಪೈಪೋಟಿ ನೀಡೋಕೆ, ಸಾಕಷ್ಟು ತಯಾರಿ ಕೂಡ ನಡೆಸಿಕೊಂಡಿದ್ದಾರೆ. ಟಿ-20 ಕ್ರಿಕೆಟ್​ನಲ್ಲಿ ಯಾವ ತಂಡವನ್ನ ಲಘುವಾಗಿ ಪರಿಗಣಿಸಬಾರದು.   

ಈಗಾಗಲೇ ಟಿ-20 ವಿಶ್ವಕಪ್​ನಲ್ಲಿ ನೆದರ್​ಲೆಂಡ್ಸ್​, ನೇಪಾಳ್ ಮತ್ತು ಐರ್ಲೆಂಡ್ ತಂಡಗಳು, ಬಲಿಷ್ಟ ತಂಡಗಳಿಗೆ ಬಿಸಿ ಮುಟ್ಟಿಸಿವೆ. ಹಾಗಾಗಿ ಟೀಮ್ ಇಂಡಿಯಾ, ನಮೀಬಿಯಾ ವಿರುದ್ಧ ತಮ್ಮ ಸಾಮರ್ಥ್ಯಕ್ಕೆ ತಕ್ಕ  ಆಟವಾಡಬೇಕಿದೆ.  

ಇದನ್ನೂ ಓದಿ:ಅಪ್ಪ-ಅಮ್ಮನಿಗೆ ಚೂರಿ ಹಾಕಿ ಜೀವ ತೆಗೆದ ಸಾಫ್ಟ್‌ವೇರ್ ಇಂಜಿನಿಯರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

India vs Nambia T20 world cup
Advertisment