/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ಸೊಸೆಯ ಸೌಂದರ್ಯ ವರ್ಣನೆಯ ಜೊತೆಗೆ ಲೈಂಗಿಕ ಕಿರುಕುಳ ಕೊಟ್ಟ ಮಾವ! : ಲಿಫ್ಟ್ ನಲ್ಲಿ ಮಾವನಿಂದ ಸೊಸೆಯ ಅಲಿಂಗನ!
ಮೇಷ
ಸ್ಥಗಿತಗೊಂಡಿರುವ ಕಾರ್ಯ ಮುಂದುವರಿಸಬಹುದು
ವಿದ್ಯಾರ್ಥಿಗಳಿಗೆ ಸರ್ವಾಂಗೀಣ ಅಭಿವೃದ್ಧಿಯಿದೆ
ಮಾನಸಿಕ ಗೊಂದಲಗಳು ದೂರವಾಗುತ್ತದೆ
ತಂತ್ರಜ್ಞಾನದ ವಿಚಾರಕ್ಕೆ ಹಣ ಖರ್ಚು
ಈ ದಿನ ಮನೆ ಬದಲಾವಣೆ ಯೋಚನೆ ಬೇಡ
ಹೊಸ ಕೆಲಸ ಆರಂಭಿಸಲು ಸೂಕ್ತಕಾಲ
ಕುಲದೇವತಾ ಪ್ರಾರ್ಥನೆ ಮಾಡಿ
ವೃಷಭ
- ಪ್ರೇಮಿಗಳಿಗೆ ದೊಡ್ಡ ಸಮಸ್ಯೆ ಕಾಡಬಹುದು
- ಪ್ರಮುಖ ಕೆಲಸಗಳಿಗೆ ಅಡಚಣೆಯಾಗಬಹುದು
- ಮನೆ ಖರ್ಚನ್ನು ನಿಯಂತ್ರಿಸಿ
- ಷೇರು ಹೂಡಿಕೆಗಳನ್ನು ಪ್ರಾರಂಭಿಸಬಹುದು
- ಮನೆಗೆ ಹೊಸ ಅತಿಥಿಯ ಆಗಮನದ ಸೂಚನೆ
- ಅಹಂಭಾವ, ಅತೀವ ಸಂತೋಷ ಬೇಡ ನಿರಾಸೆಯಾಗಬಹುದು
- ಮೈಲಾರಲಿಂಗೇಶ್ವರನನ್ನು ಪ್ರಾರ್ಥನೆ ಮಾಡಿ
ಮಿಥುನ
- ಯೋಜನೆಗಳನ್ನು ಬದಲಾಯಿಸಿ ಅನುಕೂಲವಿದೆ
- ಪೋಷಕರ ಸಲಹೆಗೆ ಮಾನ್ಯತೆ ನೀಡಿ
- ಹೊಸ ಕೆಲಸಕ್ಕೆ ಸರಿಯಾದ ಸಮಯವಲ್ಲ
- ಆರ್ಥಿಕವಾಗಿ ಇರುವ ಸಮಸ್ಯೆಗಳಿಗೆ ಪರಿಹಾರವಿಲ್ಲ
- ತಂದೆಯವರ ಬೇಸರಕ್ಕೆ ಕಾರಣವಾಗದಿರಿ
- ಬೇರೆಯವರನ್ನು ವ್ಯಂಗ್ಯ ಮಾಡದಿರಿ ಅವಮಾನ ಆಗಬಹುದು
- ಶನೈಶ್ಚರ ದೇವಾಲಯಕ್ಕೆ ಹೋಗಿ ದರ್ಶನ ಮಾಡಿ
ಕಟಕ
- ನಿಮ್ಮ ಅದೃಷ್ಟ ನಿಮ್ಮ ಕೈ ಹಿಡಿಯುವ ದಿನ
- ಸಹೋದ್ಯೋಗಿಗಳೊಂದಿಗೆ ಸಂತೋಷದ ಸಮಯವಿದೆ
- ವೃತ್ತಿ ಜೀವನದಲ್ಲಿ ಉತ್ತಮ ಅವಕಾಶವಿದೆ
- ವ್ಯವಹಾರದ ಚತುರತೆ ನಿಮ್ಮ ಲಾಭಕ್ಕೆ ಕಾರಣ
- ಕುಟುಂಬದಲ್ಲಿ ಶಾಂತಿ ವಾತಾವರಣ
- ನಿಮ್ಮ ಶಿಸ್ತು ಕಾರ್ಯವೈಖರಿಯನ್ನು ಹಾಗೇ ಉಳಿಸಿಕೊಳ್ಳಿ
- ಸುಬ್ರಹ್ಮಣ್ಯನಿಗೆ ಪ್ರಾರ್ಥನೆ ಮಾಡಿ
ಸಿಂಹ
- ನೌಕರಿಗೆ ಸಂಬಂಧಿಸಿದಂತೆ ವಿದೇಶ ವಾರ್ತೆಯಿಂದ ಸಂತೋಷ
- ಅನಗತ್ಯ ಮಾತುಬೇಡ ಹಗುರ ಅಗುತ್ತೀರಿ
- ಸ್ನೇಹಿತರು ಮಧ್ಯೆ ಅಧಿಕಾರ ಬೇಡ ಸ್ವಾಭಾವಿಕರಾಗಿರಿ
- ಪೂರ್ಣಮಾಡಬೇಕಾದ ಕೆಲಸಗಳು ಹಾಗೆ ಉಳಿಯಬಹುದು
- ಸ್ನೇಹಿತರಿಗೆ ಸಹಾಯ ಮಾಡಬಹುದು ನಿರೀಕ್ಷಿಸಬೇಡಿ
- ಅಜೀರ್ಣ ಸಮಸ್ಯೆ ಕಾಡಬಹುದು
- ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ
ಕನ್ಯಾ
- ಕುಟುಂಬ ನಿರ್ವಹಣೆಯ ಬಗ್ಗೆ ಚರ್ಚೆ ಕಲಹ
- ಮಕ್ಕಳಿಂದ ಅವಮಾನ ಆಗಬಹುದು
- ಗೌರವಕ್ಕೆ ತಕ್ಕ ಕೆಲಸ ಮಾಡಿ ಶುಭವಿದೆ
- ಬೇರೆಯವರನ್ನು ಅವಲಂಬಿಸಿ ಕಾರ್ಯಪ್ರವೃತ್ತರಾಗಬಾರದು
- ನಿಮ್ಮ ಕೆಲಸದಲ್ಲಿ ಪ್ರಮುಖ ಸ್ಥಾನವಿರುತ್ತದೆ
- ನಿಮ್ಮ ಲೋಪ ದೋಷಗಳ ಅನಾವರಣ ಅವಮಾನ
- ಗಣಪತಿಗೆ ಚಂದನ ಲೇಪನ ಮಾಡಿಸಿ
ತುಲಾ
- ವ್ಯಾಪಾರ ವೃತ್ತಿಯಲ್ಲಿ ಅನಿರೀಕ್ಷಿತ ಲಾಭ
- ಹಣಕ್ಕೆ ಕೊರತೆಯಿಲ್ಲ ಕೀರ್ತಿಯೂ ಇದೆ
- ವಿದ್ಯಾರ್ಥಿಗಳಿಗೆ ಅನುಕೂಲವಿದೆ ಅಲಸ್ಯಬೇಡ
- ಸಾಧುಗಳ ಧಾರ್ಮಿಕ ಮುಖಂಡರ ಭೇಟಿಯಾಗಬಹುದು
- ನಿಮ್ಮ ವರ್ತನೆ ಎಂದಿನಂತೆಯಿರಲಿ ರಾಜಿಬೇಡ
- ಶತ್ರುಗಳಿಂದ ವಿರೋಧಿಗಳಿಂದ ಕೆಲಸ ಹಾಳಾಗಬಹುದು
- ನಾಗನಿಗೆ ಅಡಿಕೆ ಹೂ ಅರ್ಪಿಸಿ
ವೃಶ್ಚಿಕ
- ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಅವಕಾಶವಿದೆ
- ಹಣಕಾಸಿನ ಲಾಭದ ಆಸೆಯಿಂದ ಮೋಸ ಹೋಗಬಹುದು
- ಬೇರೆಯವರ ಸಂಪರ್ಕದಿಂದ ಮನೆಯಲ್ಲಿ ಬೇಸರ
- ಕುಟುಂಬದಲ್ಲಿ ಅಶಾಂತಿ ತಲೆದೋರಬಹುದು
- ಅನಗತ್ಯ ವಿಚಾರಗಳಿಂದ ಗೊಂದಲ ನಿರಾಸೆ
- ರಾಜಕೀಯದಲ್ಲಿ ವಿಷಯದಿಂದ ದೂರವಿದ್ದರೆ ಒಳಿತು
- ದತ್ತಾತ್ರೇಯರ ಆರಾಧನೆ ಮಾಡಿ
ಧನುಸ್ಸು
- ಸಾಲದ ವಿಚಾರಕ್ಕೆ ಸಿಕ್ಕಿಕೊಳ್ಳಬಹುದು
- ಹಳೆಯ ಚಿಂತೆ ಮರೆತರೆ ಅನುಕೂಲವಿದೆ
- ಮನೆಯವರ ಯೋಗಕ್ಷೇಮ ಗಮನಿಸಿ
- ಬೇರೆಯವರಿಗೆ ಸಹಾಯದ ಹಸ್ತ ಬೇಡ ತೊಂದರೆಯಾಗಬಹುದು
- ಹಳೆಯ ನೆನಪುಗಳಿಂದ ಕಣ್ಣೀರು ಕಹಿ ಅನುಭವ
- ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ
- ನದೀ ತೀರದ ದೇವಾಲಯಕ್ಕೆ ಸೇವೆ ಮಾಡಿಸಿ
ಮಕರ
- ವೃತ್ತಿಯಲ್ಲಿ ತೊಂದರೆಯಾಗಬಹುದು
- ಬೇರೆಯವರಿಗೆ ಸಹಾಯ ಮಾಡಿದ್ರೆ ಅವರಿಂದ ಏನನ್ನು ನಿರೀಕ್ಷಿಸಬೇಡಿ
- ಸ್ವನಿರ್ಧಾರ ಒಳಿತು ಕುತಂತ್ರ ಬೇಡ
- ಕುಟುಂಬ ರಾಜಕಾರಣ ಕಲಹ ಮನಸ್ತಾಪಗಳಿರುತ್ತವೆ
- ನಿಮ್ಮದಲ್ಲದ ವಿಚಾರ ನಿಮಗೆ ತೊಂದರೆ ಮಾಡುತ್ತದೆ
- ಪಿತ್ರಾರ್ಜಿತದ ವಿಚಾರದಲ್ಲಿ ದೊಡ್ಡ ಗಲಾಟೆಯಾಗಬಹುದು
- ಮಹಾಕಾಳಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ಧಾರ್ಮಿಕ ಕಾರ್ಯಗಳ ಯೋಚನೆ ಹಾಕುತ್ತೀರಿ ಕಾರ್ಯರೂಪಕ್ಕೆ ಬರುವುದಿಲ್ಲ
- ತಪ್ಪು ನಿರ್ಧಾರಗಳು ಬೇಡ
- ಬೇರೆಯವರ ಬಗ್ಗೆ ಅನುಮಾನ
- ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು
- ಮಕ್ಕಳ ಭವಿಷ್ಯದ ಚಿಂತೆ ಕಾಡಲಿದೆ
- ಬಂಧುಗಳಲ್ಲಿ ಅಲ್ಪ ಪ್ರೀತಿ ಬೇಸರ ಆಗಬಹುದು
- ಅಮೃತ ಮೃತ್ಯುಂಜನನ್ನು ಪ್ರಾರ್ಥನೆ ಮಾಡಿ
ಮೀನ
- ಯಶಸ್ಸಿನ ಆಸೆಯಿಂದ ದುರಾಸೆ ಬೇಡ
- ಲಾಭಗಳಿಸುವ ಹಂಬಲದಲ್ಲಿ ನೈತಿಕತೆ ದೂರಮಾಡಬಾರದು
- ವ್ಯಾವಹಾರಿಕವಾಗಿ ಬೇರೆಯವರ ಸಹಾಯ ದೊರೆಯುತ್ತದೆ
- ಕೋಪ ಕಡಿಮೆಯಿರಲಿ ನಿಮ್ಮ ಕೆಲಸಗಳಾಗುತ್ತವೆ
- ಮಕ್ಕಳು ಮೊಮ್ಮಕ್ಕಳಿಂದ ಉತ್ತಮ ಸಾಧನೆ ಸಮಾಧಾನ
- ದಿನಚರಿಯಲ್ಲಿ ಬದಲಾವಣೆ ಕಾಯುವಿಕೆಯಿಂದ ಬೇಸರ
- ಶ್ರೀರಾಮ ಪರಿವಾರ ದೇವತೆಗಳನ್ನು ಪ್ರಾರ್ಥನೆ ಮಾಡಿ
ಇದನ್ನೂ ಓದಿ: ಸೊಸೆಯ ಸೌಂದರ್ಯ ವರ್ಣನೆಯ ಜೊತೆಗೆ ಲೈಂಗಿಕ ಕಿರುಕುಳ ಕೊಟ್ಟ ಮಾವ! : ಲಿಫ್ಟ್ ನಲ್ಲಿ ಮಾವನಿಂದ ಸೊಸೆಯ ಅಲಿಂಗನ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us