ಟಿ20 ವಿಶ್ವಕಪ್ ಸೂಪರ್-8 ವೇಳಾಪಟ್ಟಿ ಪ್ರಕಟ: ಟೀಂ ಇಂಡಿಯಾ ಮ್ಯಾಚ್​ಗಳು ಯಾವಾಗ..?

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ರೋಚಕ ಘಟ್ಟ ತಲುಪಿದೆ. ನಮೀಬಿಯಾ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸುವುದರೊಂದಿಗೆ ಸೂಪರ್-8 (Super-8) ಹಂತದ ಚಿತ್ರಣ ಸ್ಪಷ್ಟವಾಗಿದೆ. ಹಾಲಿ ಚಾಂಪಿಯನ್ ಭಾರತ ಸೇರಿದಂತೆ ಒಟ್ಟು 8 ತಂಡಗಳು ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿದ್ದು, ಕಪ್ ಗೆಲ್ಲಲು ಕಾದಾಟ ನಡೆಸಲಿವೆ.

author-image
Ganesh Kerekuli
India vs Netherlands (1)
Advertisment

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ರೋಚಕ ಘಟ್ಟ ತಲುಪಿದೆ. ನಮೀಬಿಯಾ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸುವುದರೊಂದಿಗೆ ಸೂಪರ್-8 (Super-8) ಹಂತದ ಚಿತ್ರಣ ಸ್ಪಷ್ಟವಾಗಿದೆ. ಹಾಲಿ ಚಾಂಪಿಯನ್ ಭಾರತ ಸೇರಿದಂತೆ ಒಟ್ಟು 8 ತಂಡಗಳು ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿದ್ದು, ಕಪ್ ಗೆಲ್ಲಲು ಕಾದಾಟ ನಡೆಸಲಿವೆ.
ಅರ್ಹತೆ ಪಡೆದ 8 ತಂಡಗಳನ್ನು ತಲಾ 4 ತಂಡಗಳಂತೆ ಎರಡು ಗುಂಪುಗಳಾಗಿ (Group 1 & Group 2) ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಟಾಪ್-2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ಸೂಪರ್-8 ಗುಂಪುಗಳ ವಿವರ

  • ಗ್ರೂಪ್-1: ಭಾರತ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ
  • ಗ್ರೂಪ್-2: ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್, ಶ್ರೀಲಂಕಾ

ಭಾರತದ ಪಂದ್ಯಗಳ ವೇಳಾಪಟ್ಟಿ (ಗ್ರೂಪ್-1):

  • ಫೆಬ್ರವರಿ 22: ಭಾರತ vs ದಕ್ಷಿಣ ಆಫ್ರಿಕಾ (ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ - ರಾತ್ರಿ 7 ಗಂಟೆಗೆ)
  • ಫೆಬ್ರವರಿ 26: ಭಾರತ vs ಜಿಂಬಾಬ್ವೆ (ಎಂ.ಎ. ಚಿದಂಬರಂ ಸ್ಟೇಡಿಯಂ, ಚೆನ್ನೈ - ರಾತ್ರಿ 7 ಗಂಟೆಗೆ)
  • ಮಾರ್ಚ್ 01: ಭಾರತ vs ವೆಸ್ಟ್ ಇಂಡೀಸ್ (ಈಡನ್ ಗಾರ್ಡನ್ಸ್, ಕೋಲ್ಕತ್ತಾ - ರಾತ್ರಿ 7 ಗಂಟೆಗೆ)

ಇದನ್ನೂ ಓದಿ: ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಗೆ ಲಘು ಹೃದಯಾಘಾತ; ಆಸ್ಪತ್ರೆಯಲ್ಲಿ ಚಿಕಿತ್ಸೆ

ಗ್ರೂಪ್-1 ರ ಇತರೆ ಪಂದ್ಯಗಳು

  • ಫೆ. 23: ಜಿಂಬಾಬ್ವೆ vs ವೆಸ್ಟ್ ಇಂಡೀಸ್ (ಮುಂಬೈ)
  • ಫೆ. 26: ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ (ಅಹಮದಾಬಾದ್)
  • ಮಾ. 01: ಜಿಂಬಾಬ್ವೆ vs ದಕ್ಷಿಣ ಆಫ್ರಿಕಾ (ದೆಹಲಿ)

ಗ್ರೂಪ್-2 ವೇಳಾಪಟ್ಟಿ (ಶ್ರೀಲಂಕಾದಲ್ಲಿ ಪಂದ್ಯಗಳು)

  • ಫೆ. 21: ನ್ಯೂಜಿಲೆಂಡ್ vs ಪಾಕಿಸ್ತಾನ (ಕೊಲಂಬೊ)
  • ಫೆ. 22: ಇಂಗ್ಲೆಂಡ್ vs ಶ್ರೀಲಂಕಾ (ಕ್ಯಾಂಡಿ)
  • ಫೆ. 24: ಇಂಗ್ಲೆಂಡ್ vs ಪಾಕಿಸ್ತಾನ (ಕ್ಯಾಂಡಿ)
  • ಫೆ. 25: ನ್ಯೂಜಿಲೆಂಡ್ vs ಶ್ರೀಲಂಕಾ (ಕೊಲಂಬೊ)
  • ಫೆ. 27: ಇಂಗ್ಲೆಂಡ್ vs ನ್ಯೂಜಿಲೆಂಡ್ (ಕೊಲಂಬೊ)
  • ಫೆ. 28: ಪಾಕಿಸ್ತಾನ vs ಶ್ರೀಲಂಕಾ (ಕ್ಯಾಂಡಿ)

2028ರ ವಿಶ್ವಕಪ್‌ಗೆ ನೇರ ಅರ್ಹತೆ!

ಈ ಬಾರಿಯ ಟಿ20 ವಿಶ್ವಕಪ್‌ನ ಸೂಪರ್-8 ಹಂತಕ್ಕೆ ಪ್ರವೇಶಿಸಿದ ಎಲ್ಲಾ ತಂಡಗಳಿಗೆ ಬಂಪರ್ ಕೊಡುಗೆ ಸಿಕ್ಕಿದೆ. ಈ 8 ತಂಡಗಳು 2028ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್‌ಗೆ ನೇರ ಅರ್ಹತೆ (Automatic Qualification) ಪಡೆದುಕೊಂಡಿವೆ.

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಆತಿಥೇಯ ರಾಷ್ಟ್ರಗಳಾಗಿರುವುದರಿಂದ ಮೊದಲೇ ಅರ್ಹತೆ ಪಡೆದಿವೆ. ಇವುಗಳ ಜೊತೆಗೆ ಸೂಪರ್-8 ತಲುಪಿದ ಉಳಿದ ತಂಡಗಳು ಸ್ಥಾನ ಖಚಿತಪಡಿಸಿಕೊಂಡಿವೆ. ಇನ್ನುಳಿದಂತೆ ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ತಂಡಗಳು ಕೂಡ 2028ರ ಟೂರ್ನಿಗೆ ನೇರ ಪ್ರವೇಶ ಪಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಜರ್ಸಿ ಬದಲಿಸಿದರೂ ಅದೃಷ್ಟ ಬದಲಾಗಲಿಲ್ಲ! 0, 0, 0 ಅಭಿಷೇಕ್ ಹ್ಯಾಟ್ರಿಕ್ ಶೂನ್ಯ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

India vs South Africa T20 world cup T20 World Cup 2026 Super 8 Schedule,
Advertisment