Advertisment

ಜರ್ಸಿ ಬದಲಿಸಿದರೂ ಅದೃಷ್ಟ ಬದಲಾಗಲಿಲ್ಲ! 0, 0, 0 ಅಭಿಷೇಕ್ ಹ್ಯಾಟ್ರಿಕ್ ಶೂನ್ಯ..!

ವಿಶ್ವದ ನಂಬರ್ 1 ಟಿ20 ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಟೀಮ್ ಇಂಡಿಯಾದ ಅಭಿಷೇಕ್ ಶರ್ಮಾ (Abhishek Sharma) ಅವರ ಬ್ಯಾಟ್, ಟಿ20 ವಿಶ್ವಕಪ್ 2026ರಲ್ಲಿ (T20 World Cup 2026) ಮೌನಕ್ಕೆ ಶರಣಾಗಿದೆ. ಸತತ ಮೂರು ಪಂದ್ಯಗಳಲ್ಲಿ 'ಶೂನ್ಯ'ಕ್ಕೆ ಔಟಾಗುವ ಮೂಲಕ ಅಭಿಷೇಕ್ ಶರ್ಮಾ ತೀವ್ರ ಮುಜುಗರಕ್ಕೀಡಾಗಿದ್ದಾರೆ.

author-image
Ganesh Kerekuli
Abhishek sharma (10)
Advertisment

ವಿಶ್ವದ ನಂಬರ್ 1 ಟಿ20 ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಟೀಮ್ ಇಂಡಿಯಾದ ಅಭಿಷೇಕ್ ಶರ್ಮಾ (Abhishek Sharma) ಅವರ ಬ್ಯಾಟ್, ಟಿ20 ವಿಶ್ವಕಪ್ 2026ರಲ್ಲಿ (T20 World Cup 2026) ಮೌನಕ್ಕೆ ಶರಣಾಗಿದೆ. ಸತತ ಮೂರು ಪಂದ್ಯಗಳಲ್ಲಿ 'ಶೂನ್ಯ'ಕ್ಕೆ ಔಟಾಗುವ ಮೂಲಕ ಅಭಿಷೇಕ್ ಶರ್ಮಾ ತೀವ್ರ ಮುಜುಗರಕ್ಕೀಡಾಗಿದ್ದಾರೆ.

Advertisment

ಜರ್ಸಿ ಬದಲಿಸಿದರೂ ಕೈಹಿಡಿಯದ ಅದೃಷ್ಟ

ಬುಧವಾರ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ವಿಚಿತ್ರ ಘಟನೆ ನಡೆಯಿತು. ಪಂದ್ಯದ ಆರಂಭದಲ್ಲಿ ರಾಷ್ಟ್ರಗೀತೆಗಾಗಿ ಮೈದಾನಕ್ಕೆ ಬಂದಾಗ ಅಭಿಷೇಕ್ ಶರ್ಮಾ, ವೇಗಿ ಅರ್ಶದೀಪ್ ಸಿಂಗ್ ಅವರ ಹೆಸರಿರುವ ಜರ್ಸಿ ಧರಿಸಿದ್ದರು. ಬ್ಯಾಟಿಂಗ್‌ಗೆ ಇಳಿಯುವಾಗ ಅವರು ಮೊಹಮ್ಮದ್ ಸಿರಾಜ್ ಹೆಸರಿನ ಜರ್ಸಿ ಧರಿಸಿ ಬಂದರು!

ಇದನ್ನೂ ಓದಿ: ತಲಾ 1 ಕೋಟಿ ರೂಪಾಯಿ ಪರಿಹಾರ -ಮೃತ ಮೂವರು ಲೈನ್​ಮ್ಯಾನ್ ಕುಟುಂಬಕ್ಕೆ ಸಚಿವ ಕೆ.ಜೆ.ಜಾರ್ಜ್ ಚೆಕ್ ವಿತರಣೆ

abhishek sharma (8)

ಹಿಂದಿನ ಎರಡೂ ಪಂದ್ಯಗಳಲ್ಲಿ (ಯುಎಸ್‌ಎ ಮತ್ತು ಪಾಕಿಸ್ತಾನ) ಶೂನ್ಯಕ್ಕೆ ಔಟಾಗಿದ್ದರಿಂದ, ಮೂಢನಂಬಿಕೆ ಅಥವಾ ಅದೃಷ್ಟಕ್ಕಾಗಿ ಅವರು ಹೀಗೆ ಜರ್ಸಿ ಬದಲಾಯಿಸಿರಬಹುದು ಎಂದು ಅಭಿಮಾನಿಗಳು ಭಾವಿಸಿದ್ದರು. ಜರ್ಸಿ ಬದಲಿಸಿದರೂ ಅಭಿಷೇಕ್ ಹಣೆಬರಹ ಮಾತ್ರ ಬದಲಾಗಲಿಲ್ಲ.

Advertisment

ಮತ್ತೆ ಡಕ್ ಔಟ್

ನೆದರ್ಲೆಂಡ್ಸ್ ಸ್ಪಿನ್ನರ್ ಆರ್ಯನ್ ದತ್ ಎಸೆದ ಮೊದಲ ಓವರ್‌ನಲ್ಲೇ ದೊಡ್ಡ ಶಾಟ್ ಹೊಡೆಯಲು ಹೋದ ಅಭಿಷೇಕ್, ಚೆಂಡನ್ನು ಅಂದಾಜಿಸುವಲ್ಲಿ ವಿಫಲರಾಗಿ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ಹ್ಯಾಟ್ರಿಕ್ ಶೂನ್ಯದ ಸಾಧನೆ ಮಾಡಿದರು.

  • ಯುಎಸ್‌ಎ ವಿರುದ್ಧ: ಗೋಲ್ಡನ್ ಡಕ್ (0)
  • ನಮೀಬಿಯಾ ವಿರುದ್ಧ: ಅನಾರೋಗ್ಯದ ಕಾರಣ ಆಡಿರಲಿಲ್ಲ.
  • ಪಾಕಿಸ್ತಾನ ವಿರುದ್ಧ: ಮೊದಲ ಓವರ್‌ನಲ್ಲೇ ಡಕ್ (0)
  • ನೆದರ್ಲೆಂಡ್ಸ್ ವಿರುದ್ಧ: ಡಕ್ ಔಟ್ (0)

ಬೇಡದ ದಾಖಲೆಗೆ ಜೊತೆಯಾದ ಶರ್ಮಾ

ಸತತ ವೈಫಲ್ಯದ ಮೂಲಕ ಅಭಿಷೇಕ್ ಶರ್ಮಾ ಅನಗತ್ಯ ದಾಖಲೆಯೊಂದನ್ನು ಬರೆದಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ಬಾರಿ (3) ಶೂನ್ಯಕ್ಕೆ ಔಟಾದ ಆಟಗಾರ ಎಂಬ ಕುಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಸದ್ಯ ಅವರು ಮಾಜಿ ವೇಗಿ ಆಶಿಶ್ ನೆಹ್ರಾ ಅವರ ದಾಖಲೆಯನ್ನು ಸರಿದೂಗಿಸಿದ್ದಾರೆ. (ವಿಶ್ವದಲ್ಲಿ ಶಾಹಿದ್ ಅಫ್ರಿದಿ ಮತ್ತು ದಿಲ್ಶಾನ್ ತಲಾ 5 ಬಾರಿ ಶೂನ್ಯ ಸುತ್ತಿ ಮೊದಲ ಸ್ಥಾನದಲ್ಲಿದ್ದಾರೆ).

Advertisment

ಗವಾಸ್ಕರ್ ಸಲಹೆ ಏನು?

ಪಂದ್ಯಕ್ಕೂ ಮುನ್ನ ಮಾತನಾಡಿದ್ದ ದಿಗ್ಗಜ ಸುನಿಲ್ ಗವಾಸ್ಕರ್, "ಅಭಿಷೇಕ್ ಮೊದಲು ಸಿಂಗಲ್ ರನ್ ತೆಗೆದುಕೊಂಡು ಖಾತೆ ತೆರೆಯುವತ್ತ ಗಮನಹರಿಸಬೇಕು. ನಂತರ ತಮ್ಮ ಶೈಲಿಯ ಆಟ ಆಡಲಿ," ಎಂದು ಕಿವಿಮಾತು ಹೇಳಿದ್ದರು. ಆದರೆ ಅಭಿಷೇಕ್ ಮೊದಲ ಬಾಲಿನಿಂದಲೇ ಅಬ್ಬರಿಸಲು ಹೋಗಿ ವಿಕೆಟ್ ಒಪ್ಪಿಸಿದ್ದಾರೆ.
ಸದ್ಯ ಭಾರತ ತಂಡ ಸೂಪರ್-8 ಹಂತಕ್ಕೆ ಅರ್ಹತೆ ಪಡೆದಿದ್ದು, ಫೆಬ್ರವರಿ 22 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ. ಮುಂದಿನ ಪಂದ್ಯದಲ್ಲಾದರೂ ಅಭಿಷೇಕ್ ತಮ್ಮ ಹಳೆಯ ಫಾರ್ಮ್‌ಗೆ ಮರಳಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ:‘ರಾಜಕುಮಾರಿ’ಗೆ ಹಾರ್ದಿಕ್ ಪಾಂಡ್ಯ ಸ್ಪೆಷಲ್ ವಿಶ್! ವೈರಲ್ ಆಯ್ತು ಲವ್ಲಿ ಪೋಸ್ಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Abhishek Sharma
Advertisment
Advertisment
Advertisment