‘ರಾಜಕುಮಾರಿ’ಗೆ ಹಾರ್ದಿಕ್ ಪಾಂಡ್ಯ ಸ್ಪೆಷಲ್ ವಿಶ್! ವೈರಲ್ ಆಯ್ತು ಲವ್ಲಿ ಪೋಸ್ಟ್..!

ಐಸಿಸಿ ಟಿ20 ವಿಶ್ವಕಪ್ 2026ರ (ICC T20 World Cup 2026) ಭರಾಟೆಯ ನಡುವೆಯೂ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ವೈಯಕ್ತಿಕ ಜೀವನದ ಸಿಹಿ ಕ್ಷಣವನ್ನ ಹಂಚಿಕೊಂಡಿದ್ದಾರೆ

author-image
Ganesh Kerekuli
hardik pandya (20)
Advertisment

ಐಸಿಸಿ ಟಿ20 ವಿಶ್ವಕಪ್ 2026ರ (ICC T20 World Cup 2026) ಭರಾಟೆಯ ನಡುವೆಯೂ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ವೈಯಕ್ತಿಕ ಜೀವನದ ಸಿಹಿ ಕ್ಷಣವನ್ನ ಹಂಚಿಕೊಂಡಿದ್ದಾರೆ. ನೆದರ್ಲೆಂಡ್ಸ್ ವಿರುದ್ಧದ ಪಂದ್ಯ ಮುಗಿದ ಬೆನ್ನಲ್ಲೇ, ಹಾರ್ದಿಕ್ ಪಾಂಡ್ಯ ಗೆಳತಿ ಮಹಿಕಾ ಶರ್ಮಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಪೋಸ್ಟ್ ಹಾಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಮೈದಾನದಲ್ಲಿ ಎದುರಾಳಿಗಳ ಬೆವರಿಳಿಸುತ್ತಿರುವ ಹಾರ್ದಿಕ್, ಮೈದಾನದ ಹೊರಗೆ ಸಖತ್ ರೊಮ್ಯಾಂಟಿಕ್ ಆಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಹಿಕಾ ಜೊತೆಗಿನ ಫೋಟೋ ಹಂಚಿಕೊಂಡಿರುವ ಹಾರ್ದಿಕ್, "ಹ್ಯಾಪಿ ಬರ್ತ್‌ಡೇ ಮೈ ಪ್ರಿನ್ಸೆಸ್" (Happy birthday my princess) ಎಂದು ಬರೆದುಕೊಂಡಿದ್ದಾರೆ. ವಿಶ್ವಕಪ್‌ನಂತಹ ಒತ್ತಡದ ಟೂರ್ನಿಯ ನಡುವೆಯೂ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನವನ್ನು ಹಾರ್ದಿಕ್ ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದಕ್ಕೆ ಈ ಪೋಸ್ಟ್ ಸಾಕ್ಷಿಯಾಗಿದೆ.

hardik pandya (19)

ಹಾರ್ದಿಕ್ ಬಾಳಲ್ಲಿ ಹೊಸ ಅಧ್ಯಾಯ

ನಟಿ ನತಾಶಾ ಸ್ಟಾಂಕೋವಿಕ್ ಅವರೊಂದಿಗಿನ ವಿಚ್ಛೇದನದ ಬಳಿಕ, 2025ರ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಅಂದಿನಿಂದ ಮಹಿಕಾ ಅವರು ಹಾರ್ದಿಕ್ ಹಾಗೂ ಅವರ ಮಗ ಅಗಸ್ತ್ಯ ಜೊತೆಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಕಷ್ಟದ ದಿನಗಳಲ್ಲಿ ಮತ್ತೆ ಕ್ರಿಕೆಟ್ ಬಗ್ಗೆ ಆಸಕ್ತಿ ಮೂಡಿಸಲು ಮತ್ತು ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಮಹಿಕಾ ಅವರೇ ಕಾರಣ ಎಂದು ಹಾರ್ದಿಕ್ ಇತ್ತೀಚಿನ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ನಾ ನಿನ್ನ ಬಿಡಲಾರೆ: ‘ಒಪ್ಪಂದ ಆಗೊಯ್ತು’ ದುರ್ಗಾ-ಶರತ್ ಒಂದಾಗ್ತಾರಾ..?

ವ್ಯಾಲೆಂಟೈನ್ಸ್​ ಡೇ ಟ್ಯಾಟೂ 

ಮಹಿಕಾ ಅವರ ಹುಟ್ಟುಹಬ್ಬಕ್ಕೂ ಕೆಲವೇ ದಿನಗಳ ಮೊದಲು, ಅಂದರೆ ವ್ಯಾಲೆಂಟೈನ್ಸ್​ ಡೇ ದಿನ ಹಾರ್ದಿಕ್ ಪಾಂಡ್ಯ ತಮ್ಮ ಕತ್ತಿನ ಹಿಂಭಾಗದಲ್ಲಿ ಹಾಕಿಸಿಕೊಂಡಿರುವ ಟ್ಯಾಟೂ (Tattoo) ಸುದ್ದಿಯಾಗಿತ್ತು. ಇದರಲ್ಲಿ ಇಂಗ್ಲಿಷ್‌ನ 'M' ಅಕ್ಷರ (ಮಹಿಕಾ ಹೆಸರಿನ ಮೊದಲ ಅಕ್ಷರ) ಹಾಗೂ ಎರಡು ಚಿರತೆಗಳ ಚಿತ್ರವಿದೆ. ಇದು ಶಕ್ತಿ ಮತ್ತು ಪರಸ್ಪರ ಬೆಂಬಲದ ಸಂಕೇತವಾಗಿದೆ ಎಂದು ಹೇಳಲಾಗಿದೆ.

ಆಟದ ಮೇಲೂ ಮಹಿಕಾ ಪ್ರಭಾವ

ತಮ್ಮ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಮಹಿಕಾ ನೀಡಿದ ಮಾನಸಿಕ ಬೆಂಬಲವೇ ಕಾರಣ ಎಂದು ಹಾರ್ದಿಕ್ ಒಪ್ಪಿಕೊಂಡಿದ್ದಾರೆ. ದಿನಕ್ಕೆ 6-7 ಗಂಟೆಗಳ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಲು ಮತ್ತು ಹಳೆಯ ಜೋಶ್ ಮರಳಿ ಪಡೆಯಲು ಮಹಿಕಾ ಸ್ಫೂರ್ತಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ನೆಟ್ಟಿಗರು ಹಾರ್ದಿಕ್ ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಾರ್ದಿಕ್ ಅವರ ಈ ‘ಕೂಲ್ & ರೊಮ್ಯಾಂಟಿಕ್’ ಅವತಾರಕ್ಕೆ ಫಿದಾ ಆಗಿದ್ದಾರೆ.

ಇದನ್ನೂ ಓದಿ:ಇಂದು ಸಾರಿಗೆ ಬಂದ್ ಬಿಸಿ? ಸರ್ಕಾರಕ್ಕೆ ಸಂಜೆ 4ರವರೆಗೆ ಡೆಡ್‌ಲೈನ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Hardik Pandya Mahika Sharma
Advertisment