Advertisment

ಇಂದು ಸಾರಿಗೆ ಬಂದ್ ಬಿಸಿ? ಸರ್ಕಾರಕ್ಕೆ ಸಂಜೆ 4ರವರೆಗೆ ಡೆಡ್‌ಲೈನ್..!

ರಾಜ್ಯದ ಪ್ರಯಾಣಿಕರಿಗೆ ಇಂದು (ಗುರುವಾರ) ಸಾರಿಗೆ ಬಿಸಿ ಮುಟ್ಟುವ ಸಾಧ್ಯತೆ ಇದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಇಂದು ಫ್ರೀಡಂ ಪಾರ್ಕ್‌ನಲ್ಲಿ ‘ಬೆಂಗಳೂರು ಚಲೋ’ (Bengaluru Chalo) ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

author-image
Ganesh Kerekuli
bmtc electric buses
Advertisment

ಬೆಂಗಳೂರು: ರಾಜ್ಯದ ಪ್ರಯಾಣಿಕರಿಗೆ ಇಂದು (ಗುರುವಾರ) ಸಾರಿಗೆ ಬಿಸಿ ಮುಟ್ಟುವ ಸಾಧ್ಯತೆ ಇದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಇಂದು ಫ್ರೀಡಂ ಪಾರ್ಕ್‌ನಲ್ಲಿ ‘ಬೆಂಗಳೂರು ಚಲೋ’ (Bengaluru Chalo) ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

Advertisment

ಸಾರಿಗೆ ನೌಕರರ ಕೂಟ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಸಾವಿರಾರು ನೌಕರರು ಭಾಗವಹಿಸುವ ನಿರೀಕ್ಷೆಯಿದ್ದು, ಇದರಿಂದ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಸಂಜೆ 4 ಗಂಟೆಯವರೆಗೆ ಡೆಡ್‌ಲೈನ್

ಬೆಳಗ್ಗೆ 10 ಗಂಟೆಯಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆರಂಭವಾಗಲಿದ್ದು, ಸಂಜೆ 4 ಗಂಟೆಯವರೆಗೆ ಸರ್ಕಾರಕ್ಕೆ ಗಡುವು ನೀಡಲಾಗಿದೆ. ಅಷ್ಟರೊಳಗೆ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನು ನೌಕರರು ನೀಡಿದ್ದಾರೆ.

ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳೇನು?

ಸರ್ಕಾರ ಮತ್ತು ನೌಕರರ ನಡುವೆ ಪ್ರಮುಖವಾಗಿ ಎರಡು ವಿಚಾರಗಳಲ್ಲಿ ಜಟಾಪಟಿ ನಡೆಯುತ್ತಿದೆ. ಹಿಂಬಾಕಿ (Arrears) ಮತ್ತು ವೇತನ ಪರಿಷ್ಕರಣೆ ಜಾರಿ ದಿನಾಂಕದ ಬಗ್ಗೆ ಒಮ್ಮತ ಮೂಡಿಲ್ಲ.

Advertisment

ಇದನ್ನೂ ಓದಿ: ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಲೋಗೋ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ: ಫೆಬ್ರವರಿ 21 ರಿಂದ 3 ದಿನ ನಡೆಯುವ ಟೂರ್ನಿ

ಬೇಡಿಕೆ-1: 38 ತಿಂಗಳ ಹಿಂಬಾಕಿಗೆ ಪಟ್ಟು

  • ನೌಕರರ ಆಗ್ರಹ: ತಮಗೆ ಬರಬೇಕಾದ ಪೂರ್ತಿ 38 ತಿಂಗಳುಗಳ ಹಿಂಬಾಕಿಯನ್ನು ಪಾವತಿಸಬೇಕೆಂದು ನೌಕರರು ಒತ್ತಾಯಿಸುತ್ತಿದ್ದಾರೆ.
  • ಸರ್ಕಾರದ ನಿಲುವು: ಸರ್ಕಾರ ಕೇವಲ 26 ತಿಂಗಳ ಹಿಂಬಾಕಿಯನ್ನು ನೀಡುವುದಾಗಿ ಭರವಸೆ ನೀಡಿದೆ.
  • ಸಂಘರ್ಷ: ಸರ್ಕಾರದ 26 ತಿಂಗಳ ಆಫರ್ ಅನ್ನು ನೌಕರರು ತಿರಸ್ಕರಿಸಿದ್ದು, ಎಲ್ಲಾ 38 ತಿಂಗಳ ಹಿಂಬಾಕಿಯನ್ನೂ ಪಾವತಿಸಲೇಬೇಕೆಂದು ಪಟ್ಟು ಹಿಡಿದಿದ್ದಾರೆ.

ಬೇಡಿಕೆ-2: ವೇತನ ಪರಿಷ್ಕರಣೆ ದಿನಾಂಕ

  • ನೌಕರರ ಆಗ್ರಹ: ಪರಿಷ್ಕೃತ ವೇತನವನ್ನು 2024ರ ಜನವರಿ 1 ರಿಂದಲೇ ಅನ್ವಯವಾಗುವಂತೆ (Retrospective Effect) ಜಾರಿಗೊಳಿಸಬೇಕು ಎಂಬುದು ನೌಕರರ ಒತ್ತಾಯ.
  • ಸರ್ಕಾರದ ನಿಲುವು: ವೇತನ ಪರಿಷ್ಕರಣೆಯನ್ನು 2025ರ ಏಪ್ರಿಲ್‌ನಿಂದ ಅನ್ವಯಿಸುವಂತೆ ಜಾರಿ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ.
  • ಸಂಘರ್ಷ: ಸರ್ಕಾರದ ಈ ನಿರ್ಧಾರಕ್ಕೆ ನೌಕರರು ಒಪ್ಪಿಗೆ ಸೂಚಿಸಿಲ್ಲ. 2024ರ ಜನವರಿಯಿಂದಲೇ ಹೆಚ್ಚಳವಾಗಬೇಕೆಂದು ಆಗ್ರಹಿಸಿದ್ದಾರೆ.
Advertisment

ಒಟ್ಟಿನಲ್ಲಿ ಇಂದು ರಾಜಧಾನಿಯಲ್ಲಿ ಸಾರಿಗೆ ನೌಕರರ ಶಕ್ತಿ ಪ್ರದರ್ಶನ ನಡೆಯಲಿದ್ದು, ಪ್ರಯಾಣಿಕರು ಎಚ್ಚರಿಕೆಯಿಂದ ತಮ್ಮ ಪ್ರಯಾಣದ ಯೋಜನೆ ರೂಪಿಸಿಕೊಳ್ಳುವುದು ಒಳ್ಳೆಯದು.

ಇದನ್ನೂ ಓದಿ: 3 ವಿಕೆಟ್​ ಕಬಳಿಸಿ ಚಕ್ರವರ್ತಿ ಮಿಂಚು.. ಬೌಲಿಂಗ್​ನಲ್ಲೂ ದುಬೆ ದರ್ಬಾರ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Transport Strike Karnataka
Advertisment
Advertisment
Advertisment