/newsfirstlive-kannada/media/media_files/2025/09/24/abhishek_sharma_75-2025-09-24-22-03-03.jpg)
ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಏಷ್ಯಾಕಪ್​ನ ಸೂಪರ್-4 ಪಂದ್ಯದಲ್ಲಿ ಟೀಮ್ ಇಂಡಿಯಾ 169 ರನ್​ಗಳ ಸಾಧಾರಣವಾದ ಟಾರ್ಗೆಟ್​ ನೀಡಿದೆ.
ದುಬೈನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಿ ಸಾಧಾರಣ ಮೊತ್ತದ ರನ್ ಕಲೆ ಹಾಕಿದೆ. ಓಪನರ್​ ಆಗಿ ಕ್ರೀಸ್​ಗೆ ಆಗಮಿಸಿದ್ದ ಅಭಿಷೇಕ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಉತ್ತಮ ಆರಂಭ ಪಡೆದರು. ಶುಭ್​ಮನ್ ಗಿಲ್ 19 ಎಸೆತದಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್​​ನಿಂದ 29 ರನ್​ ಗಳಿಸಿ ಕ್ಯಾಚ್ ಔಟ್​ ಆದರು.
ಗಿಲ್ ಹೊರ ಹೋಗುತ್ತಿದ್ದಂತೆ ಕ್ರೀಸ್​ಗೆ ಆಗಮಿಸಿದ ಶಿವಂ ದುಬೆ ಅಷ್ಟೇನೂ ಪರಿಣಾಮಕಾರಿ ಬ್ಯಾಟಿಂಗ್ ಮಾಡಲಿಲ್ಲ. ಕೇವಲ 2 ರನ್​ಗೆ ಕ್ರೀಸ್​ ಖಾಲಿ ಮಾಡಿದರು. ಇನ್ನೊಂದೆಡೆ ಅಭಿಷೇಕ್ ಶರ್ಮಾ ಅಬ್ಬರ ಮುಂದುವರೆದಿತ್ತು. ಅಭಿಷೇಕ್ ಶರ್ಮಾ ಬಾಂಗ್ಲಾ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಅಭಿಷೇಕ್ ಕೇವಲ 27 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್​ಗಳಿಂದ ಭರ್ಜರಿ ಅರ್ಧಶತಕ ಬಾರಿಸಿದರು. 75 ರನ್​ ಗಳಿಸಿ ಬ್ಯಾಟಿಂಗ್ ಮಾಡುವಾಗ ರನೌಟ್​ಗೆ ಬಲಿಯಾದರು.
ಕಳೆದ ಮ್ಯಾಚ್​ನಲ್ಲಿ ಬ್ಯಾಟಿಂಗ್​ನಲ್ಲಿ ವಿಫಲವಾಗಿದ್ದ ನಾಯಕ ಸೂರ್ಯಕುಮಾರ್ ಮತ್ತೊಮ್ಮೆ ಪರ್ಫಾಮೆನ್ಸ್​ ನೀಡುವಲ್ಲಿ ಎಡವಿ, 5 ರನ್​ಗೆ ವಿಕೆಟ್​ ಒಪ್ಪಿಸಿದರು. ತಿಲಕ್ ವರ್ಮಾ 5 ರನ್​ಗೆ ಕ್ಯಾಚ್ ಕೊಟ್ಟರು. ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಸಿಕ್ಕ ಅವಕಾಶವನ್ನು ಬಳಸಿಕೊಂಡು 4 ಬೌಂಡರಿ, 1 ಸಿಕ್ಸರ್​ನಿಂದ 38 ರನ್​ ಚಚ್ಚಿದರು. ಅಕ್ಷರ್​ ಪಟೇಲ್ 10 ರನ್​ಗಳಿಂದ ಟೀಮ್ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್​ಗಳ ಟಾರ್ಗೆಟ್​ ಅನ್ನು ಎದುರಾಳಿಗೆ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ