/newsfirstlive-kannada/media/media_files/2025/09/19/abhishek_sharma_bat-2025-09-19-22-02-13.jpg)
ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್​ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಒಮಾನ್​ಗೆ 189 ರನ್​ಗಳ ಟಾರ್ಗೆಟ್​ ನೀಡಿದೆ. ಎದುರಾಳಿ ವಿರುದ್ಧ ಬ್ಯಾಟಿಂಗ್ ಮಾಡಲು ಟೀಮ್ ಇಂಡಿಯಾ ಆಟಗಾರರು ಪರದಾಡಿದರು ಎಂದೇ ಹೇಳಬಹುದು.
ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಅವರು ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿದರು. ಓಪನರ್​ ಆಗಿ ಕ್ರೀಸ್​ಗೆ ಆಗಮಿಸಿದ ಅಭಿಷೇಕ್ ಶರ್ಮಾ ಹಾಗೂ ಶುಭ್​ಮನ್​ ಗಿಲ್​ ಒಳ್ಳೆಯ ಆರಂಭ ಪಡೆಯಲಿಲ್ಲ. ಕೇವಲ 5 ರನ್​ಗೆ ಗಿಲ್​ ಕ್ಲೀನ್​ ಬೋಲ್ಡ್​ ಆಗಿ ಮತ್ತೆ ಬ್ಯಾಟಿಂಗ್​ನಲ್ಲಿ ನಿರಾಸೆ ಮೂಡಿಸಿದರು. ಗಿಲ್​ ಔಟ್​ ಆಗುತ್ತಿದ್ದಂತೆ ಸಂಜು ಸ್ಯಾಮ್ಸನ್ ಕ್ರೀಸ್​ಗೆ​ ಆಗಮಿಸಿದರು.
/filters:format(webp)/newsfirstlive-kannada/media/media_files/2025/09/19/sanju_samson-3-2025-09-19-21-42-14.jpg)
ಇನ್ನೊಂದೆಡೆ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ಅಭಿಷೇಕ್ ಶರ್ಮಾ 38 ರನ್​ ಗಳಿಸಿ ಆಡುವಾಗ ಕ್ಯಾಚ್ ಕೊಟ್ಟು ಹೊರ ನಡೆದರು. ಪಂದ್ಯದಲ್ಲಿ 15 ಬಾಲ್ ಎದುರಿಸಿದ ಅಭಿಷೇಕ್ 5 ಬೌಂಡರಿ, 2 ಸಿಕ್ಸರ್​​ಗಳಿಂದ​ 38 ರನ್​ಗೆ ವಿಕೆಟ್​ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ ಕ್ರೀಸ್​ಗೆ ಬಂದು ರನೌಟ್​ ಆಗಿ ಹಾಗೇ ಹಿಂದಕ್ಕೆ ಹೋದರು. ಆಲ್​ರೌಂಡರ್ ಅಕ್ಷರ್ ಪಟೇಲ್ ತಂಡಕ್ಕಾಗಿ ಕೆಲ ಸಮಯ ಕ್ರೀಸ್​ ಕಾಯ್ದು 26 ರನ್​ ಗಳಿಸಿದ್ದಾಗ ಕ್ಯಾಚ್​ ಕೊಟ್ಟರು. ಶಿವಂ ದುಬೆ ಕೂಡ 5 ರನ್​ಗೆ ಔಟ್ ಆದರು.
ತಿಲಕ್​ ವರ್ಮಾ ಕೊಂಚ ಸಮಯ ಬ್ಯಾಟಿಂಗ್ ಮಾಡಿ 2 ಸಿಕ್ಸರ್​ಗಳಿಂದ 29 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಆರ್ಷ್​ದೀಪ್ ಸಿಂಗ್ 1 ರನ್​ಗೆ ರನೌಟ್ ಆದರು. ಆದರೆ ಕ್ರೀಸ್​ ಕಾಯ್ದುಕೊಂಡಿದ್ದ ಸಂಜು ಸ್ಯಾಮ್ಸನ್, ಒಮಾನ್ ಬೌಲರ್​ಗಳಿಗೆ ಬೆವರಿಳಿಸಿದರು. 41 ಬಾಲ್​ಗಳಲ್ಲಿ 3 ಬೌಂಡರಿ, 3 ಭರ್ಜರಿ ಸಿಕ್ಸರ್​ಗಳಿಂದ ಅರ್ಧಶತಕ ಸಿಡಿಸಿದರು. ಇದೇ ವೇಳೆ 56 ರನ್​ ಗಳಿಸಿ ಆಡುವಾಗ ಸಂಜು ಔಟ್ ಆದರು. ಹೀಗಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ 189 ರನ್​ಗಳ ಗುರಿಯನ್ನು ಒಮಾನ್​ಗೆ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us