/newsfirstlive-kannada/media/media_files/2026/03/09/surya-and-gambhir-2026-03-09-13-17-42.jpg)
ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಳಲ್ಲಿನ ಹೀನಾಯ ಸೋಲಿನ ಬಳಿಕ ಮುಖ್ಯ ಕೋಚ್ ಗೌತಮ್ ಗಂಭೀರ್ ತೀವ್ರ ಟೀಕೆಗಳನ್ನು ಎದುರಿಸಿದ್ದರು. ಭಾನುವಾರ ನಡೆದ 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಬೃಹತ್ ಜಯ ಸಾಧಿಸುವ ಮೂಲಕ ಗಂಭೀರ್ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಈ ಗೆಲುವಿನೊಂದಿಗೆ ಭಾರತವು ಮೂರು ಬಾರಿ ಟಿ20 ವಿಶ್ವಕಪ್ ಗೆದ್ದ ತವರಿನಲ್ಲಿ ಕಪ್ ಎತ್ತಿಹಿಡಿದ ಹಾಗೂ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಟ್ರೋಫಿ ಉಳಿಸಿಕೊಂಡ (Defending Champions) ವಿಶ್ವದ ಮೊದಲ ತಂಡ ಎಂಬ ಐತಿಹಾಸಿಕ ದಾಖಲೆ ಬರೆದಿದೆ. ಪಂದ್ಯದ ಬಳಿಕ ತಮ್ಮದೇ ಶೈಲಿಯಲ್ಲಿ ಖಡಕ್ ಆಗಿ ಮಾತನಾಡಿದ ಗಂಭೀರ್, ಹಲವಾರು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಕೌಟುಂಬಿಕ ಕಲಹ, ಪ್ರಾಣಬಿಟ್ಟ ದಂಪತಿ.. 2 ವರ್ಷದ ಮಗು ಬದುಕಿದ್ದೇ ಪವಾಡ
ಪೋಸ್ಟ್-ಮ್ಯಾಚ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಗಂಭೀರ್, ನನ್ನ ಹೊಣೆಗಾರಿಕೆ ಏನಿದ್ದರೂ ಡ್ರೆಸ್ಸಿಂಗ್ ರೂಮ್‌ನಲ್ಲಿರುವ 30 ಜನರಿಗಷ್ಟೇ ವಿನಃ ಸೋಷಿಯಲ್ ಮೀಡಿಯಾದಲ್ಲಿರುವ ಜನರಿಗಲ್ಲ. ತಂಡ ಹೇಗಿರುತ್ತದೆಯೋ ಕೋಚ್ ಕೂಡ ಹಾಗೆಯೇ ಇರುತ್ತಾನೆ. ಆಟಗಾರರೇ ನನ್ನನ್ನು ಉತ್ತಮ ಕೋಚ್ ಆಗುವಂತೆ ಮಾಡಿದ್ದಾರೆ ಎಂದರು.
ದ್ರಾವಿಡ್, ಲಕ್ಷ್ಮಣ್, ಜಯ್ ಶಾಗೆ ಗೆಲುವು ಅರ್ಪಣೆ
ತಮ್ಮ ಕೋಚಿಂಗ್‌ನಲ್ಲಿ ಭಾರತ ವಿಶ್ವಕಪ್ ಗೆದ್ದರೂ, ಗಂಭೀರ್ ಹಿಂದಿನ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಮರೆಯಲಿಲ್ಲ. ನಾನು ಈ ಟ್ರೋಫಿಯನ್ನು ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರಿಗೆ ಅರ್ಪಿಸುತ್ತೇನೆ. ದ್ರಾವಿಡ್ ಈ ತಂಡವನ್ನು ಒಂದು ಅತ್ಯುತ್ತಮ ಹಂತಕ್ಕೆ ತಂದು ನಿಲ್ಲಿಸಿದ್ದರು. ಲಕ್ಷ್ಮಣ್ ಅವರು ಎನ್‌ಸಿಎ (CoE) ಮೂಲಕ ಭವಿಷ್ಯದ ಆಟಗಾರರನ್ನು ಸೃಷ್ಟಿಸುತ್ತಿದ್ದಾರೆ. ಎಷ್ಟೇ ಟೀಕೆಗಳಿದ್ದರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರಿಗೂ ಧನ್ಯವಾದ. 2024 ಮತ್ತು 2025ರಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ವಿರುದ್ಧ ಸೋತು ನಾನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದಾಗ ಐಸಿಸಿ ಚೇರ್ಮನ್ ಜಯ್ ಶಾ ನನಗೆ ಕರೆ ಮಾಡಿ ಬೆಂಬಲಿಸಿದ್ದರು ಎಂದು ಗಂಭೀರ್ ಸ್ಮರಿಸಿದರು.
ತಂಡದ ಆಕ್ರಮಣಕಾರಿ ಆಟದ ಬಗ್ಗೆ ಮಾತನಾಡಿದ ಕೋಚ್, ನಾವು ಸೋಲಿನ ಭಯವನ್ನು ಬಿಡಬೇಕು. ರಕ್ಷಣಾತ್ಮಕ ಆಟವಾಡುವುದಕ್ಕಿಂತ 120 ರನ್‌ಗಳಿಗೆ ಆಲೌಟ್ ಆದರೂ ಪರವಾಗಿಲ್ಲ, ಧೈರ್ಯದಿಂದ ಆಡಬೇಕು. ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ 250 ರನ್ ಗಳಿಸುವ ಧೈರ್ಯ ತೋರಿದ್ದೇ ನಮ್ಮ ಹೆಗ್ಗಳಿಕೆ. ಇಷ್ಟು ವರ್ಷ ನಾವು ವೈಯಕ್ತಿಕ ಮೈಲಿಗಲ್ಲುಗಳನ್ನೇ ಆಚರಿಸಿದ್ದೇವೆ. ದಯವಿಟ್ಟು ಅದನ್ನು ನಿಲ್ಲಿಸಿ, ಟ್ರೋಫಿಗಳನ್ನು ಸಂಭ್ರಮಿಸಲು ಶುರುಮಾಡಿ. ಕ್ಯಾಪ್ಟನ್ ಸೂರ್ಯಕುಮಾರ್ ತಂದೆಯ ಸ್ಥಾನದಲ್ಲಿ ನಿಂತು ತಂಡವನ್ನು ಮುನ್ನಡೆಸುವ ಮೂಲಕ ನನ್ನ ಕೆಲಸವನ್ನು ಸುಲಭ ಮಾಡಿದರು. ನಾನು ಭರವಸೆಗಳ ಆಧಾರದ ಮೇಲೆ ತಂಡ ಆಯ್ಕೆ ಮಾಡಿಲ್ಲ, ನಂಬಿಕೆ ಮತ್ತು ವಿಶ್ವಾಸದ ಮೇಲೆ ಆಯ್ಕೆ ಮಾಡಿದ್ದೇನೆ ಎಂದರು.
ಇದನ್ನೂ ಓದಿ: ನೈಟ್ ಜಾಲಿ ರೈಡ್​ಗೆ ತೆರಳಿದ್ದಾಗ ಭೀಕರ ಅಪಘಾತ.. ಇಬ್ಬರು ಯುವಕರು ಬಲಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us