/newsfirstlive-kannada/media/media_files/2026/03/09/mandya-couple-case-2026-03-09-12-51-36.jpg)
ಮಂಡ್ಯ: ಅದು ಮುದ್ದಾದ ಸಂಸಾರ. ಮದುವೆಯಾಗಿ ಮೂರು ವರ್ಷವಷ್ಟೇ ಆಗಿತ್ತು. ಆ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಅಂದುಕೊಳ್ತಿರುವಾಗಲೇ ಇಂದು ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್ ಬಂದಿದೆ. ಎರಡು ವರ್ಷಗಳ ಹಿಂದಷ್ಟೇ ಪ್ರಪಂಚಕ್ಕೆ ಬಂದು ಈಗಷ್ಟೇ ಕಣ್ತೆರೆಯುತ್ತಿದ್ದ ಕಂದಮ್ಮನನ್ನ ಹೆತ್ತವರೇ ಕತ್ತು ಹಿಸುಕಿ, ನಂತರ ಅನಾಥನನ್ನಾಗಿ ಬಿಟ್ಟು ಹೋಗಿರುವ, ಕರಳು ಹಿಂಡುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಏನಿದು ಪ್ರಕರಣ..?
ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ಕಳೆದ ಮೂರು ವರ್ಷದ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಎರಡು ವರ್ಷದ ಮಗು ಇತ್ತು. ಕೌಟುಂಬಿಕ ಜಗಳಕ್ಕೆ ರೋಸಿಹೋದ ದಂಪತಿ ಇಂದು ಬೆಳಿಗ್ಗೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮಂಡ್ಯದ ಕೆ.ಆರ್.ಪೇಟೆಯ ಜಯನಗರ ಬಡಾವಣೆ ಮನೆಯೊಂದರಲ್ಲಿ ಬಾಡಿಗೆ ಇದ್ದ ದಂಪತಿ ಮೊದಲು ತಮ್ಮ ಎರಡು ವರ್ಷದ ಮಗುವಿನ ಕತ್ತು ಹಿಸುಕಿದ್ದಾರೆ.
ಇದನ್ನೂ ಓದಿ : ಜಸ್ಟ್ ಕಾಲು ಟಚ್ ಆಗಿದ್ಕೆ ಚಾಕು ಇರಿದು ಮುಗಿಸಿಯೇ ಬಿಟ್ಟರು..!
/filters:format(webp)/newsfirstlive-kannada/media/media_files/2026/03/09/mandy-couple-sucide-2026-03-09-11-46-12.jpg)
ತದನಂತರ ಇಬ್ಬರೂ ನೇಣಿಗೆ ಕೊರಳೊಡ್ಡಿದ್ದಾರೆ ಎಂದು ಹೇಳಲಾಗ್ತಿದೆ. ಅದೃಷ್ಟವಶಾತ್ 2 ವರ್ಷದ ಮಗು ಅಸ್ವಸ್ಥಗೊಂಡು ಬದುಕುಳಿದಿದೆ. ಸದ್ಯ ಮಗುವನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆ.ಆರ್.ಪೇಟೆ ಟೌನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದಂಪತಿಯ ಕೆಟ್ಟ ನಿರ್ಧಾರಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಂಟುಂಬಿಕ ಕಲಹದಿಂದ ಬೇಸತ್ತು ಈ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗಿದೆ. ಪೊಲೀಸ್ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us