ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಶುಭಾರಂಭ; ಸೆಲೆಕ್ಟರ್ಸ್​​ಗೆ ಉತ್ತರ ಕೊಟ್ಟ ಸಿರಾಜ್..!

ಸೆಕೆಂಡ್​ ಹಾಫ್​​ನಲ್ಲಿ ಟೀಮ್​ ಇಂಡಿಯಾ ಬೌಲರ್​ಗಳು ದರ್ಬಾರ್​ ನಡೆಸಿದ್ರು. ಆರ್ಷ್​​​ದೀಪ್​ ಸಿಂಗ್​, ಮೊಹಮ್ಮದ್​ ಸಿರಾಜ್​ ಆರಂಭದಲ್ಲೇ ಅಮೆರಿಕಾಗೆ ಪವರ್​ ಫುಲ್​ ಪಂಚ್​ ಕೊಟ್ರು. ಮಿಡಲ್​ ಓವರ್​ಗಳಲ್ಲಿ ವರುಣ್​ ಚಕ್ರವರ್ತಿ, ಅಕ್ಷರ್​ ಪಟೇಲ್​ ಸ್ಪಿನ್​ ಮೋಡಿ ಮಾಡಿದ್ರು.

author-image
Ganesh Kerekuli
siraj (1)
Advertisment
  • ವಾಂಖೆಡೆಯಲ್ಲಿ ಇಂಡಿಯನ್​ ಬೌಲರ್ಸ್​ ದರ್ಬಾರ್​
  • ಕಮ್​ಬ್ಯಾಕ್​ ಕಿಂಗ್​ ಮೊಹಮ್ಮದ್​ ಸಿರಾಜ್​ ಅಬ್ಬರ
  • USAಗೆ ಆರಂಭದಲ್ಲೇ ಸಿರಾಜ್​, ಆರ್ಷ್​​ದೀಪ್​ ಪಂಚ್​

162 ರನ್​ಗಳ ಟಾರ್ಗೆಟ್​ ಚೇಸಿಂಗ್​ಗಿಳಿದ ಯುಎಸ್​ಎ ತಂಡಕ್ಕೆ ಟೀಮ್​ ಇಂಡಿಯಾ ವೇಗಿಗಳು ಪವರ್​​​​​​​ಫುಲ್​ ಪಂಚ್​ ನೀಡಿದ್ರು. ಹಾಕಿದ ಮೊದಲ ಓವರ್​ನಲ್ಲೇ ಕಮ್​ಬ್ಯಾಕ್​ ಕಿಂಗ್​ ಮೊಹಮ್ಮದ್ ಸಿರಾಜ್​ ಆ್ಯಂಡ್ರಿಸ್​ ಗೌಸ್​ ವಿಕೆಟ್​ ಬೇಟೆಯಾಡಿದ್ರು. 

ಪವರ್​​ ಪ್ಲೇ ಕಿಂಗ್​ ಅನ್ನೋದನ್ನ ಆರ್ಷ್​​ದೀಪ್​ ಸಿಂಗ್​ ಮತ್ತೆ ನಿರೂಪಿಸಿದ್ರು. ಯುಎಸ್​​ಎ ನಾಯಕ ಮೊನಕ್​ ಪಟೇಲ್​ ಸೊನ್ನೆ ಸುತ್ತಿ ನಿರ್ಗಮಿಸಿದ್ರು. 4ನೇ ಓವರ್​ನಲ್ಲಿ ಮೊಹಮ್ಮದ್​ ಸಿರಾಜ್​ ಮತ್ತೊಂದು ಶಾಕ್​ ನೀಡಿದ್ರು. ಮತ್ತೊರ್ವ ಓಪನರ್​ ಸೈತೇಜಾ ಮುಕ್ಕಮಲ್ಲ ಸಿರಾಜ್​ಗೆ 2ನೇ ಬಲಿಯಾದ್ರು. ಮೊದಲ 4 ಓವರ್​​ಗಳಲ್ಲೇ 3 ವಿಕೆಟ್​ ಕಳೆದುಕೊಂಡ ಯುಎಸ್ಎ ಸಂಕಷ್ಟಕ್ಕೆ ಸಿಲುಕಿತು. 

ಇದನ್ನೂ ಓದಿ: ಇಂದಿನಿಂದಲೇ ಭಾರತದಲ್ಲಿ ಅಮೆರಿಕಾದ ಹಾರ್ಲೇ ಡೇವಿಡ್‌ಸನ್, ಇಂಡಿಯನ್ ಬೈಕ್ ಬೆಲೆಗಳು ಅಗ್ಗ: ಅಮದು ಮೇಲೆ ಶೂನ್ಯ ಸುಂಕ!

siraj (2)

4ನೇ ವಿಕೆಟ್​ಗೆ ಮಿಲಿಂದ್​ ಕುಮಾರ್​, ಸಂಜಯ್​ ಕೃಷ್ಣಮೂರ್ತಿ 50 ರನ್​ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡೋ ಯತ್ನ ಮಾಡಿದ್ರು. 34 ರನ್​ಗಳಿಸಿ ರಿಧಮ್​ ಕಂಡುಕೊಂಡಿದ್ದ ಮಿಲಿಂದ್​ ಕುಮಾರ್​ ಬಿಗ್​ ಶಾಟ್​ ಹೊಡೆಯಲು ಹೋಗಿ ವರುಣ್​ ಚಕ್ರವರ್ತಿಗೆ ಬಲಿಯಾದ್ರು. 2 ಸಿಕ್ಸರ್​​, 1 ಬೌಂಡರಿ ಸಹಿತ 31 ಎಸೆತಗಳಲ್ಲಿ 37 ರನ್​ಗಳಿಸಿ ಡೇಂಜರಸ್​ ಎನಿಸಿದ್ದ ಸಂಜಯ್​ ಕೃಷ್ಣಮೂರ್ತಿ ವಿಕೆಟ್​ನ ಅಕ್ಷರ್​ ಪಟೇಲ್​ ಉರುಳಿಸಿದ್ರು. ರಿಂಕು ಸಿಂಗ್​ಗೆ ಕ್ಯಾಚ್​ ನೀಡಿ ಸಂಜಯ್​ ನಿರ್ಗಮಿಸಿದ್ರು.  

7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಹರ್ಮಿತ್​ ಸಿಂಗ್​ ಮೊದಲ ಎಸೆತದಲ್ಲೇ ಔಟಾದ್ರು. ಹರ್ಮಿತ್ ಗೋಲ್ಡನ್​​ ಡಕೌಟ್​ ಆದ್ರೆ,  ಮೊಹಮ್ಮದ್​ ಮೊಹ್ಸಿನ್​ ಆಟ 8 ರನ್​ಗಳಿಗೆ ಅಂತ್ಯವಾಯ್ತು. ಅಂತಿಮ ಹಂತದವರೆಗೆ ಹೋರಾಡಿದ ಶುಭಂ ರಂಜನೆ ಇನ್ನಿಂಗ್ಸ್​ನ ಕೊನೆಯ ಎಸೆತದಲ್ಲಿ ಔಟಾದ್ರು. ಅಂತಿಮವಾಗಿ 20 ಓವರ್​​ಗಳ ಅಂತ್ಯಕ್ಕೆ 7 ವಿಕೆಟ್​ ಕಳೆದುಕೊಂಡ ಯುಎಸ್​​ಎ 132 ರನ್​ಗಳಿಸಲಷ್ಟೇ ಶಕ್ತವಾಯ್ತು. 29 ರನ್​ಗಳ ಜಯ ಸಾಧಿಸಿದ ಟೀಮ್​ ಇಂಡಿಯಾ ಟಿ20 ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿತು. 

ಇದನ್ನೂ ಓದಿ: ಅಮೆರಿಕ ದಾಳಿಗೆ ತತ್ತರಿಸಿದ ಬ್ಯಾಟರ್ಸ್​.. ಸಂಕಷ್ಟದಿಂದ ಟೀಂ ಇಂಡಿಯಾ ಪಾರಾಗಿದ್ದು ಹೇಗೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Suryakumar Yadav profile india vs usa T20 world cup Mohammed Siraj
Advertisment