/newsfirstlive-kannada/media/media_files/2025/10/24/rohit_shreyas-2025-10-24-10-36-56.jpg)
ಪರ್ತ್​​ ನಂತರ ಅಡಿಲೇಡ್​​ ಏಕದಿನ ಪಂದ್ಯದಲ್ಲೂ, ಟೀಮ್ ಇಂಡಿಯಾ ಸೋಲು ಅನುಭವಿಸಿತು. ಒಂದೆಡೆ ಬಿಗ್ ಪ್ಲೇಯರ್​ಗಳ ಬ್ಯಾಟಿಂಗ್ ವೈಫಲ್ಯ ಮತ್ತೊಂದೆಡೆ ಕಳಪೆ ಫೀಲ್ಡಿಂಗ್, ಶುಭ್ಮನ್ ಗಿಲ್ ಪಡೆಯ ಸೋಲಿಗೆ ಕಾರಣವಾಯಿತು. ಸತತ 2 ಪಂದ್ಯಗಳನ್ನು ಟೀಮ್ ಇಂಡಿಯಾ ಸೋತಿದೆ.
ಅಡಿಲೇಡ್​ನಲ್ಲಿ ಸರಣಿ ಉಳಿಸಿಕೊಳ್ಳಲು ಹೋರಾಟ ನಡೆಸಿದ ಟೀಮ್ ಇಂಡಿಯಾ, ಕೊನೆಗೂ ಆಸ್ಟ್ರೇಲಿಯಾ ತಂಡಕ್ಕೆ ಶರಣಾಗಿದೆ. ಡು ಆರ್ ಡೈ ಪಂದ್ಯದಲ್ಲಿ ಸರಣಿ ಉಳಿಸಿಕೊಳ್ಳಲು ಗಿಲ್ ಪಡೆ, ಭಾರೀ ಪ್ರಯತ್ನ ಪಟ್ಟಿತ್ತು. ಆದ್ರೆ ಓವಲ್ ಮೈದಾನದಲ್ಲಿ ಅಂದುಕೊಂಡಿದ್ದೇ ಒಂದು, ಆಗಿದ್ದೇ ಮತ್ತೊಂದು.
/filters:format(webp)/newsfirstlive-kannada/media/media_files/2025/10/23/shreyas_rohit-2025-10-23-12-48-50.jpg)
ಕೈಕೊಟ್ಟ ಗಿಲ್, ಕೊಹ್ಲಿ ಮತ್ತೆ ಡಕೌಟ್..!
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಪವರ್​ ಪ್ಲೇನಲ್ಲಿ ನಾಯಕ ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿಯ, ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತ್ತು. ಗಿಲ್ 9 ರನ್​ಗಳಿಸಿ ಬಾರ್ಟ್ಲೆಟ್​​ಗೆ ವಿಕೆಟ್​ ಒಪ್ಪಿಸಿದ್ರೆ, ಕೊಹ್ಲಿ ಸತತ 2ನೇ ಬಾರಿ ಡಕೌಟ್ ಆದರು.
ರೋಹಿತ್- ಶ್ರೇಯಸ್ ಭರ್ಜರಿ ಜೊತೆಯಾಟ..!
3ನೇ ವಿಕೆಟ್​​ಗೆ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್, ಬೊಂಬಾಟ್ ಜೊತೆಯಾಟವಾಡಿದ್ರು. 136 ಎಸೆತಗಳಲ್ಲಿ ಈ ಜೋಡಿ 118 ರನ್​ಗಳಿಸಿ, ತಂಡಕ್ಕೆ ಚೇತರಿಕೆ ನೀಡಿತ್ತು.
ಅಡಿಲೇಡ್​ನಲ್ಲಿ ಮುಂಬೈಕರ್ಸ್​ ದರ್ಬಾರ್..!
ಅಡಿಲೇಡ್​​ನ ಓವಲ್​ ಮೈದಾನದಲ್ಲಿ ರೋಹಿತ್ ಮತ್ತು ಶ್ರೇಯಸ್, ದರ್ಬಾರ್ ನಡೆಸಿದರು. ಇಬ್ಬರೂ ತಲಾ ಅರ್ಧಶತಕಗಳನ್ನ ಸಿಡಿಸಿ ಸಂಭ್ರಮಿಸಿದರು. ಈ ನಡುವೆ ರೋಹಿತ್, 73 ರನ್​ಗಳಿಸಿ ಫೈನ್​​ ಲೆಗ್​ನಲ್ಲಿ ಹೇಝಲ್​ವುಡ್​​ಗೆ ಕ್ಯಾಚ್ ನೀಡಿದ್ರೆ, 61 ರನ್​ಗಳಿಸಿದ್ದ ಶ್ರೇಯಸ್​​​ ಇನ್ನಿಂಗ್ಸ್​ಗೆ, ಌಡಂ ಝಾಂಪ ಫುಲ್​​ಸ್ಟಾಪ್ ಇಟ್ಟರು.
ರಾಹುಲ್, ಸುಂದರ್, ನಿತೀಶ್​​ ಫುಲ್ ಸೈಲೆಂಟ್..!
ಅಕ್ಷರ್ ಪಟೇಲ್ ಕೆಲ ಕಾಲ ಆಸಿಸ್ ಬೌಲರ್​ಗಳನ್ನ ಕಾಡಿದರು. ಕೆ.ಎಲ್.ರಾಹುಲ್, ವಾಶಿಂಗ್ಟನ್ ಸುಂದರ್ ಒಬ್ಬರ ಹಿಂದೊಬ್ಬರು ಪೆವಿಲಿಯನ್ ಸೇರಿಕೊಂಡ್ರೆ, 44 ರನ್​ಗಳಿಸಿದ್ದ ಅಕ್ಷರ್ ಪಟೇಲ್ ಮತ್ತು ನಿತೀಶ್ ರೆಡ್ಡಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 264 ರನ್​ಗಳಿಸಿತು. ಆಸಿಸ್ ಪರ ಝಾಂಪ 4 ಮತ್ತು ಬಾಟ್ಲೆಟ್​​​​​​ 3 ವಿಕೆಟ್ ಪಡೆದರು.
ಇದನ್ನೂ ಓದಿ: 1Kg ಟೊಮೆಟೊ 700 ರೂಪಾಯಿ.. ಅಫ್ಘಾನ್​ ಜೊತೆ ಗಲಾಟೆ, ತರಕಾರಿ, ದಿನಸಿಗಳ ಬೆಲೆ ಭಾರೀ ಏರಿಕೆ
/filters:format(webp)/newsfirstlive-kannada/media/media_files/2025/10/23/virat_kohli_new-2025-10-23-09-58-12.jpg)
ಕಾಂಗರೂಗಳನ್ನ ಬಚಾವ್ ಮಾಡಿದ ಶಾರ್ಟ್, ಕಾನೊಲಿ..!
265 ರನ್​ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡಕ್ಕೂ, ಹೇಳಿಕೊಳ್ಳುವಂತಹ ಸ್ಟಾರ್ಟ್ ಸಿಗಲಿಲ್ಲ. ನಾಯಕ ಮಿಚ್ಚೆಲ್ ಮಾರ್ಚ್ 11 ರನ್ ಮತ್ತು ಟ್ರಾವಿಸ್ ಹೆಡ್ 28 ರನ್​ಗಳಿಸಿ ಔಟಾದ್ರು. ಮ್ಯಾಥ್ಯೂ ರನ್​ಶಾ 30 ರನ್​ಗಳಿಸಿದ್ರೆ, ಌಲೆಕ್ಸ್ ಕೇರಿ 6 ರನ್​ಗಳಿಗೆ ಸುಸ್ತಾದ್ರು. ಕೊನೆಗೆ ಮ್ಯಾಥ್ಯೂ ಶಾರ್ಟ್, ಕೂಪರ್ ಕಾನೊಲಿರ ಆಕರ್ಷಕ ಅರ್ಧಶತಕಗಳು, ಮತ್ತು ಮಿಚ್ಚೆಲ್ ಒವನ್​ರ ಬಿರುಸಿನ ಬ್ಯಾಟಿಂಗ್, ಆಸ್ಟ್ರೇಲಿಯಾ ತಂಡಕ್ಕೆ 2 ವಿಕೆಟ್​ಗಳ ರೋಚಕ ಗೆಲುವು ತಂದುಕೊಡ್ತು.
ಟೀಮ್ ಇಂಡಿಯಾಕ್ಕೆ ಏಕದಿನ ಸರಣಿ ಸೋಲು
ಮೈದಾನದಲ್ಲಿ ಕಳಪೆ ಫೀಲ್ಡಿಂಗ್​ ಮಾಡಿದ ಟೀಮ್ ಇಂಡಿಯಾ, ಭಾರೀ ಬೆಲೆ ಕಟ್ಟಬೇಕಾಯ್ತು. 3 ಕ್ಯಾಚ್ ಮತ್ತು ಒಂದು ರನೌಟ್ ಮಿಸ್ ಮಾಡಿದ ಭಾರತದ ಫೀಲ್ಡರ್ಸ್​, ತಂಡದ ಹಿನ್ನಡೆ ಕಾರಣರಾದರು. ಆ ಮೂಲಕ ಟೀಮ್ ಇಂಡಿಯಾ ಸತತ 2 ಪಂದ್ಯಗಳನ್ನ ಸೋತು, ಸರಣಿ ಕೈಚೆಲ್ಲಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us