/newsfirstlive-kannada/media/media_files/2025/09/24/abhishek_gill-2025-09-24-18-56-14.jpg)
ಆಸಿಸ್​ನ ಕ್ಯಾನ್​ಬೇರದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್​​ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ. ಇದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಲಿದೆ.
ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವ ಸೂರ್ಯಕುಮಾರ್ ಅವರು ಬ್ಯಾಟಿಂಗ್ ಫಾರ್ಮ್​ಗೆ ಮರಳಬೇಕಿದೆ. ಟಿ20 ತಂಡಕ್ಕೆ ನಾಯಕ ಆದ ಮೇಲೆ ಸೂರ್ಯಕುಮಾರ್ ಪರ್ಫಾಮೆನ್ಸ್​ ಅಷ್ಟೇನೂ ಚೆನ್ನಾಗಿಲ್ಲ. ಈಗಾಗಲೇ ನಾಯಕನಿಂದ ಟೀಮ್​ಗೆ ರನ್​ಗಳು ಬೇಕು ಎಂದು ಹೆಡ್​ಕೋಚ್ ಗೌತಮ್ ಗಂಭೀರ್ ಅವರು ಹೇಳಿದ್ದಾರೆ. ಈ ಸರಣಿ ಸೂರ್ಯಕುಮಾರ್​ಗೆ ಅಗ್ನಿ ಪರೀಕ್ಷೆಯ ಕಣವಾಗಿದೆ.
ಇದನ್ನೂ ಓದಿ: ಇಂದಿನ ಭಾರತ vs ಆಸ್ಟ್ರೇಲಿಯಾ ನಡುವಿನ ಮೊದಲ T20 ಮ್ಯಾಚ್ ನಡೆಯೋದು ಡೌಟ್​.. ಯಾಕೆ ಗೊತ್ತಾ?
/filters:format(webp)/newsfirstlive-kannada/media/media_files/2025/09/27/surya_tilak-2025-09-27-07-01-17.jpg)
ಅಭಿಷೇಕ್ ಶರ್ಮಾ ಓಪನರ್ ಆಗಿ ಕ್ರೀಸ್​ಗೆ ಆಗಮಿಸಲಿದ್ದು ಶುಭ್​ಮನ್ ಗಿಲ್ ಅಥವಾ ಸಂಜು ಸ್ಯಾಮ್ಸನ್​ ಇವರಲ್ಲಿ ಒಬ್ಬರು ಅಭಿಷೇಕ್​ಗೆ ಆರಂಭದಲ್ಲಿ ಜೊತೆಯಾಗಲಿದ್ದಾರೆ. ಎಂದಿನಂತೆ ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅಬ್ಬರ ಮುಂದುವರೆಯುವ ನಿರೀಕ್ಷೆ ಇದೆ. ಈ ಮೊದಲೇ ಹೇಳಿದಂತೆ ಸೂರ್ಯಕುಮಾರ್ ಬ್ಯಾಟಿಂಗ್ ಇಲ್ಲಿ ನಿರ್ಣಾಯಕವಾಗಿರುತ್ತದೆ.
ತಂಡದಲ್ಲಿ ಆಲ್​ರೌಂಡರ್​ಗಳಾಗಿ ಶಿವಂ ದುಬೆ, ಅಕ್ಷರ್ ಪಟೇಲ್​ಗೆ ಅವಕಾಶ ನೀಡಲಾಗಿದೆ. ಉಳಿದಂತೆ ಬೌಲಿಂಗ್​ನಲ್ಲಿ ಬುಮ್ರಾ ತಂಡದ ಮುಖ್ಯ ಬೆನ್ನೆಲುಬು ಎನ್ನಬಹುದು. ಬೂಮ್ರಾಗೆ ಹರ್ಷಿತ್ ರಾಣಾ ಸಾಥ್ ಕೊಡಲಿದ್ದಾರೆ. ಕುಲ್​ದೀಪ್ ಯಾದವ್ ಸ್ಪಿನ್ ಮ್ಯಾಜಿಕ್ ಮಾಡಿದರೆ ಭಾರತಕ್ಕೆ ಗೆಲುವು ಪಕ್ಕಾ. ವರುಣ್ ಚಕ್ರವರ್ತಿ ಸ್ಪಿನ್​ ಮೋಡಿ ಮಾಡುವ ನಿರೀಕ್ಷೆ ಇದೆ.
ಟೀಮ್ ಇಂಡಿಯಾದ ಪ್ಲೇಯಿಂಗ್- 11
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ಕ್ಯಾಪ್ಟನ್), ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲ್​ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us