Advertisment

ಭಾರತಕ್ಕೆ ಮೂರು ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ವಿಶ್ವದ ಮೊದಲ ಹೆಗ್ಗಳಿಕೆ! Highlights

ಟಿ20 ವಿಶ್ವಕಪ್ 2026ರ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ 96 ರನ್‌ಗಳ ಬೃಹತ್ ಜಯ ಸಾಧಿಸಿ, ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾರತ ತಂಡ ಈ ಅದ್ಭುತ ಗೆಲುವಿನೊಂದಿಗೆ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಹೊಸ ದಾಖಲೆಗಳನ್ನು ಬರೆದಿದೆ.

author-image
Ganesh Kerekuli
team india (27)

Photograph: (BCCI)

Advertisment

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ 2026ರ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ 96 ರನ್‌ಗಳ ಬೃಹತ್ ಜಯ ಸಾಧಿಸಿ, ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಈ ಅದ್ಭುತ ಗೆಲುವಿನೊಂದಿಗೆ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಹೊಸ ದಾಖಲೆಗಳನ್ನು ಬರೆದಿದೆ.

Advertisment

ಟೀಮ್ ಇಂಡಿಯಾ ಬರೆದ 3 ಐತಿಹಾಸಿಕ ದಾಖಲೆಗಳು

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಸಂಜು ಸ್ಯಾಮ್ಸನ್ (46 ಎಸೆತಗಳಲ್ಲಿ 89 ರನ್) ಮತ್ತು ಅಭಿಷೇಕ್ ಶರ್ಮಾ (21 ಎಸೆತಗಳಲ್ಲಿ 52 ರನ್) ಭರ್ಜರಿ ಆರಂಭ ಒದಗಿಸಿದರು. ಬಳಿಕ ಬಂದ ಇಶಾನ್ ಕಿಶನ್ ಕೂಡ ಕೇವಲ 25 ಎಸೆತಗಳಲ್ಲಿ 54 ರನ್ ಸಿಡಿಸಿ ಅಬ್ಬರಿಸಿದರು. ಇದರ ನೆರವಿನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಬರೋಬ್ಬರಿ 255 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದು ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ತಂಡವೊಂದು ಗಳಿಸಿದ ಅತಿ ಗರಿಷ್ಠ ಮೊತ್ತವಾಗಿದೆ.

ಇದನ್ನೂ ಓದಿ: ವಿಶ್ವವಿಜೇತ ಟೀಮ್ ಇಂಡಿಯಾ: ಬ್ಯಾಕ್‌ ಟು ಬ್ಯಾಕ್ ಟಿ20 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ಸೂರ್ಯ ಪಡೆ

india vs new zealand

ಬುಮ್ರಾ, ಅಕ್ಷರ್ ಸ್ಪಿನ್-ಪೇಸ್ ಮೋಡಿ

256 ರನ್‌ಗಳ ಅಸಾಧ್ಯ ಗುರಿ ಬೆನ್ನತ್ತಿದ ಕಿವೀಸ್ ಪಡೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕ್ಯಾಪ್ಟನ್ ಸೂರ್ಯಕುಮಾರ್ ಅವರ ಮಾಸ್ಟರ್ ಪ್ಲ್ಯಾನ್‌ನಂತೆ 3ನೇ ಓವರ್‌ನಲ್ಲೇ ದಾಳಿಗಿಳಿದ ಅಕ್ಷರ್ ಪಟೇಲ್ (3/27) ಅಪಾಯಕಾರಿ ಫಿನ್ ಅಲೆನ್ ವಿಕೆಟ್ ಕಿತ್ತು ಆಘಾತ ನೀಡಿದರು. ಮತ್ತೊಂದೆಡೆ ಬೆಂಕಿ ಚೆಂಡುಗಳನ್ನು ಎಸೆದ ಜಸ್ಪ್ರೀತ್ ಬುಮ್ರಾ ಕೇವಲ 15 ರನ್ ನೀಡಿ 4 ವಿಕೆಟ್ (4/15) ಕಬಳಿಸಿದರು. ಟಿಮ್ ಸೈಫರ್ಟ್ (ಅರ್ಧಶತಕ) ಹೋರಾಟದ ಹೊರತಾಗಿಯೂ ನ್ಯೂಜಿಲೆಂಡ್ 159 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ ಶರಣಾಯಿತು.

Advertisment

ಬುಮ್ರಾ ನಮ್ಮ ‘ನ್ಯಾಷನಲ್ ಟ್ರೆಷರ್’ ಎಂದ ಸೂರ್ಯ

ಗೆಲುವಿನ ಬಳಿಕ ಭಾವುಕರಾಗಿ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು 'ರಾಷ್ಟ್ರೀಯ ಸಂಪತ್ತು' (National Treasure) ಎಂದು ಬಣ್ಣಿಸಿದರು. "ಈ ಗೆಲುವನ್ನು ಅರಗಿಸಿಕೊಳ್ಳಲು ಸ್ವಲ್ಪ ಸಮಯ ಬೇಕು. 2024ರ ವಿಶ್ವಕಪ್ ಬಳಿಕ ಬಿಸಿಸಿಐ, ಜಯ್ ಶಾ, ರೋಹಿತ್ ಶರ್ಮಾ ನನ್ನ ಮೇಲೆ ನಂಬಿಕೆಯಿಟ್ಟು ಈ ಅದ್ಭುತ ತಂಡವನ್ನು ಮುನ್ನಡೆಸುವ ಅವಕಾಶ ನೀಡಿದರು. ತವರಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ಈ ಸಾಧನೆ ಮಾಡಿರುವುದು ಅತ್ಯಂತ ವಿಶೇಷ ಅನುಭವ  ಎಂದು ಸಂತಸ ಹಂಚಿಕೊಂಡರು.

ಇದನ್ನೂ ಓದಿ:Bhavishya: ಸ್ವಂತ ಉದ್ಯೋಗದ ಚಿಂತನೆ, ಈ ರಾಶಿಯವರಿಗೆ ಇವತ್ತು ಒಳ್ಳೆಯ ದಿನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

India Win India vs New Zealand final India vs NewZealand T20 WORLD CUP 2026 T20 World Cup 2026 final T20 world cup
Advertisment
Advertisment
Advertisment