ಸಿಡಿದರೆ ಸಿಡಿಲು, ಇಲ್ಲದಿದ್ದರೆ ಶೂನ್ಯ.. ಟೀಮ್ ಇಂಡಿಯಾ ಈ ಸ್ಟಾರ್‌ಗೆ ‘ಕನ್ಸಿಸ್ಟೆನ್ಸಿ’ ಸವಾಲ್..!

ಟೀಮ್ ಇಂಡಿಯಾದ ಫಿಯರ್​ಲೆಸ್ (Fearless) ಬ್ಯಾಟರ್ ಎಂದೇ ಖ್ಯಾತಿಗಳಿಸಿರುವ ಯುವ ತಾರೆ ಅಭಿಷೇಕ್ ಶರ್ಮಾ ಸದ್ಯ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ತಮ್ಮ ಡಿಸ್ಟ್ರಕ್ಟಿವ್ ಬ್ಯಾಟಿಂಗ್ ಮೂಲಕ ಬೌಲರ್‌ಗಳ ನಿದ್ದೆಗೆಡಿಸುತ್ತಿದ್ದ ಪಂಜಾಬ್‌ ಮೂಲದ ಈ ಬ್ಯಾಟರ್, ಈಗ ತಾವೇ ರನ್ ಗಳಿಸಲು ಪರದಾಡುತ್ತಿದ್ದಾರೆ.

author-image
Ganesh Kerekuli
team india (22)
Advertisment

ಟೀಮ್ ಇಂಡಿಯಾದ ಫಿಯರ್​ಲೆಸ್ (Fearless) ಬ್ಯಾಟರ್ ಎಂದೇ ಖ್ಯಾತಿಗಳಿಸಿರುವ ಯುವ ತಾರೆ ಅಭಿಷೇಕ್ ಶರ್ಮಾ ಸದ್ಯ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ತಮ್ಮ ಡಿಸ್ಟ್ರಕ್ಟಿವ್ ಬ್ಯಾಟಿಂಗ್ ಮೂಲಕ ಬೌಲರ್‌ಗಳ ನಿದ್ದೆಗೆಡಿಸುತ್ತಿದ್ದ ಪಂಜಾಬ್‌ ಮೂಲದ ಈ ಬ್ಯಾಟರ್,  ಈಗ ತಾವೇ ರನ್ ಗಳಿಸಲು ಪರದಾಡುತ್ತಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿರುವ ಅಭಿಷೇಕ್, ಎದುರಾಳಿಗಳಿಗೆ ತಮ್ಮ ದೌರ್ಬಲ್ಯವನ್ನು ತಾವೇ ಬಿಟ್ಟುಕೊಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ಸಿಡಿದರೆ ‘ವೈಲೆಂಟ್’, ಇಲ್ಲದಿದ್ದರೆ ‘ಸೈಲೆಂಟ್’

ಅಭಿಷೇಕ್ ಶರ್ಮಾ ಕ್ರೀಸ್‌ಗೆ ಬಂದರೆ ಅಭಿಮಾನಿಗಳಿಗೆ ಫುಲ್ ಎಂಟರ್‌ಟೈನ್ಮೆಂಟ್ ಗ್ಯಾರಂಟಿ. ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈಯುವ ಈ ಎಡಗೈ ಬ್ಯಾಟರ್, ಟಿ20 ಕ್ರಿಕೆಟ್‌ನ ಹೊಸ 'ಡಾನ್' ಎಂದೇ ಕರೆಸಿಕೊಂಡವರು. ಅವರು ಕ್ರೀಸ್‌ನಲ್ಲಿ ನಿಂತರೆ ರನ್ ಹೊಳೆ ಹರಿಯುತ್ತದೆ, ಇಲ್ಲದಿದ್ದರೆ ಸೈಲೆಂಟ್ ಆಗಿ ಪೆವಿಲಿಯನ್ ಸೇರುತ್ತಾರೆ.

6 ಇನ್ನಿಂಗ್ಸ್, 3 ಗೋಲ್ಡನ್ ಡಕ್

ಅಭಿಷೇಕ್ ಶರ್ಮಾ ಅವರ ಇತ್ತೀಚಿನ ಫಾರ್ಮ್ ಕಳವಳಕಾರಿಯಾಗಿದೆ. ಅಂಕಿ-ಅಂಶಗಳನ್ನೇ ನೋಡುವುದಾದರೆ ಕಳೆದ 6 ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಬರೋಬ್ಬರಿ 3 ಬಾರಿ 'ಗೋಲ್ಡನ್ ಡಕ್'ಗೆ (ಮೊದಲ ಎಸೆತದಲ್ಲೇ ಔಟ್) ಬಲಿಯಾಗಿದ್ದಾರೆ. ಉಳಿದ ಎರಡು ಇನ್ನಿಂಗ್ಸ್‌ಗಳಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ಮಿಂಚಿದ್ದರೆ, ಇನ್ನೊಂದು ಪಂದ್ಯದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದಾರೆ. ಈ ಅಂಕಿ-ಅಂಶವೇ ಅವರು 'ಕನ್ಸಿಸ್ಟೆನ್ಸಿ' (ಸಾತ್ಯತ್ಯ) ಕಾಪಾಡಿಕೊಳ್ಳಲು ಎಷ್ಟು ಪರದಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ.

ಇದನ್ನೂ ಓದಿ: ಚೆಕ್ ಬೌನ್ಸ್ ಕೇಸ್ ನಲ್ಲಿ ತಿಹಾರ್ ಜೈಲು ಸೇರಿದ ಬಾಲಿವುಡ್ ನಟ ರಾಜ್ ಪಾಲ್ ಯಾದವ್‌: ನೆರವಿಗೆ ಬಾರದ ಬಾಲಿವುಡ್‌!

abhishek sharma (8)

ಟಿ20 ವಿಶ್ವಕಪ್‌ನಲ್ಲಿ ಯುಎಸ್‌ಎ (USA) ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ಆದರೆ, ಅಮೆರಿಕ ಬೌಲರ್‌ಗಳ ತಂತ್ರಕ್ಕೆ ಅಭಿಷೇಕ್ ಸುಲಭವಾಗಿ ಬಲಿಯಾದರು. ತಮ್ಮ ಟ್ರೇಡ್ ಮಾರ್ಕ್ ಶಾಟ್ ಬಾರಿಸಲು ಹೋಗಿ ಡೀಪ್ ಕವರ್ಸ್‌ನಲ್ಲಿ ಕ್ಯಾಚ್ ನೀಡಿ ಹೊರನಡೆದರು. ಅಮೆರಿಕನ್ನರ ರಣತಂತ್ರಕ್ಕೆ ಅಭಿಷೇಕ್ ತತ್ತರಿಸಿದ್ದು ಸುಳ್ಳಲ್ಲ.

ಅತಿಯಾದ ಆಕ್ರೋಶವೇ ಮುಳುವಾಯ್ತಾ?

ಟಿ20 ಕ್ರಿಕೆಟ್ ಅಂದರೆ ಆಕ್ರೋಶದ ಆಟ ನಿಜ. ಆದರೆ, ಪ್ರತಿ ಎಸೆತವನ್ನೂ ದಂಡಿಸಲು ಹೋಗುವುದು ಎಷ್ಟರಮಟ್ಟಿಗೆ ಸರಿ? ಓವರ್ ಅಗ್ರೆಸಿವ್ (Over Aggressive) ಮನಸ್ಥಿತಿಯೇ ಅಭಿಷೇಕ್ ಅವರ ವೈಫಲ್ಯಕ್ಕೆ ಕಾರಣವಾಗುತ್ತಿದೆಯೇ ಎಂಬ ಚರ್ಚೆ ಶುರುವಾಗಿದೆ. ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸುವ ಬದಲು, ಎಲ್ಲದಕ್ಕೂ ಒಂದೇ ಮಂತ್ರ ಜಪಿಸುವುದು ವರ್ಕ್ ಆಗುತ್ತಿಲ್ಲ.

ಏನೇ ಆದರೂ, ಅಭಿಷೇಕ್ ಶರ್ಮಾ ಒಬ್ಬ ಮ್ಯಾಚ್ ವಿನ್ನರ್ ಎಂಬುದರಲ್ಲಿ ಎರಡು ಮಾತಿಲ್ಲ. ಒಂದೆರಡು ವೈಫಲ್ಯಗಳು ಸಹಜ. ಅವರು ತಮ್ಮ ನೈಸರ್ಗಿಕ ಆಟವನ್ನು ಬಿಡದೆ, ಕೊಂಚ ಎಚ್ಚರಿಕೆಯ ಹೆಜ್ಜೆ ಇಟ್ಟರೆ ಟೀಮ್ ಇಂಡಿಯಾಗೆ ದೊಡ್ಡ ಆಸ್ತಿಯಾಗಬಲ್ಲರು.

ಇದನ್ನೂ ಓದಿ: ಆರ್​​ಸಿಬಿ ಖರೀದಿಗೆ ಮುಗಿಬಿದ್ದ ಮಿಲಿಯನೇರ್.. ಸಾವಿರ ಸಾವಿರ ಕೋಟಿ ಕೋಟ್​ ಮಾಡಿದ ಕಂಪನಿಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Abhishek Sharma
Advertisment