/newsfirstlive-kannada/media/media_files/2026/02/07/abhishek-sharma-7-2026-02-07-14-43-35.jpg)
ಟಿ20 ವಿಶ್ವಕಪ್​ ಟೂರ್ನಿಯ ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾ ಯಂಗ್​ ಬ್ಯಾಟರ್​ ಅಭಿಷೇಕ್​ ಶರ್ಮಾ ಫೇಲ್​ ಆದ್ರು. ಯುಎಸ್​​ಎ ಗೋಲ್ಡನ್​ ಡಕ್​ ಆಗಿ ನಿರ್ಗಮಿಸಿದ ಅಭಿಷೇಕ್​ ಶರ್ಮಾರಲ್ಲಿ ಇದೀಗ ಕಿಚ್ಚು ಹೆಚ್ಚಾಗಿದೆ. ವೈಫಲ್ಯ ಕಂಡ ಅಭಿಷೇಕ್​ ಇದೀಗ ರೈಟ್​ ಟ್ರ್ಯಾಕ್​ಗೆ ಬರೋಕೆ ಪಣ ತೊಟ್ಟಿದ್ದಾರೆ. ಡೆಲ್ಲಿಯಲ್ಲಿ ಭರ್ಜರಿ ಅಭ್ಯಾಸ ನಡೆಸಿ ಸಜ್ಜಾಗಿರೋ ಪಂಜಾಬ್​ ಪುತ್ತರ್​​, ನಮೀಬಿಯಾ ದಾಳಿಯನ್ನ ಚಿಂದಿ ಉಡಾಯಿಸೋಕೆ ಸಜ್ಜಾಗಿದ್ದಾರೆ.
3 ಟಾರ್ಗೆಟ್​ಗಳ ಬೆನ್ನು ಬಿದ್ದ ಅಭಿಷೇಕ್ ಶರ್ಮಾ
25 ವರ್ಷದ ಅಭಿಷೇಕ್​ ಶರ್ಮಾ ಪಾಲಿಗಿದು ಚೊಚ್ಚಲ ವಿಶ್ವಕಪ್​ ಪಂದ್ಯ. ಈ ಚೊಚ್ಚಲ ವಿಶ್ವಕಪ್​ನಲ್ಲೇ 3 ಮಹಾ ಕನಸುಗಳನ್ನ ನನಸು ಮಾಡಿಕೊಳ್ಳೋಕೆ ಅಭಿಷೇಕ್​ ಶರ್ಮಾ ಪಣತೊಟ್ಟಿದ್ದಾರೆ. ಅಭಿಷೇಕ್​ ಶರ್ಮಾ ಕೈಯಲ್ಲಿ ಒಂದು ಟ್ಯಾಟೂ ಇರೋದು ನಿಮಗೆ ಗೊತ್ತಿರಬಹುದು. it will happen..ಅಂತಾ ತಮ್ಮ ಕೈ ಮೇಲೆ ಅಭಿಷೇಕ್​ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಸೀಕ್ರೆಟ್​ ಏನು ಗೊತ್ತಾ? ಈ ಮೂರು ಸಾಧನೆ.
ಇದನ್ನೂ ಓದಿ: ಅಪ್ಪ-ಅಮ್ಮನಿಗೆ ಚೂರಿ ಹಾಕಿ ಜೀವ ತೆಗೆದ ಸಾಫ್ಟ್‌ವೇರ್ ಇಂಜಿನಿಯರ್..!
ಗುರುವಿನ ದಾಖಲೆ ಮೇಲೆ ಅಭಿ ಕಣ್ಣು!
ಅಭಿಷೇಕ್​ ಬೆಳೆದಿದ್ದು, ಕಲಿತಿದ್ದು ಎಲ್ಲಾ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್​ ಗರಡಿಯಲ್ಲಿ. ಯುವ ಗರಿಡಿಯಲ್ಲಿ ಬ್ಯಾಟಿಂಗ್​ ಪಾಠ ಕಲಿತು ಇಂಟರ್​ನ್ಯಾಷನಲ್​ ಕ್ರಿಕೆಟ್​ಗೆ ಕಾಲಿಟ್ಟ ಅಭಿಷೇಕ್​ ಥೇಟ್​ ಯುವಿಯಂತೆ ಟಿ20 ಕ್ರಿಕೆಟ್​ನಲ್ಲಿ ಅಬ್ಬರಿಸಿ ಬೊಬ್ಬಿರಿದ್ದಾರೆ. ಮೊದಲಿನಿಂದಲೂ ಅಭಿಷೇಕ್​ ಶರ್ಮಾಗೆ ಗುರು ಯುವರಾಜ್ ಸಿಂಗ್​ ಸಾರ್ವಕಾಲಿಕ ದಾಖಲೆಯ ಮೇಲೆ ಕಣ್ಣಿದೆ. 2007 ಟಿ20 ವಿಶ್ವಕಪ್​ನಲ್ಲಿ ಕೇವಲ 12 ಎಸೆತಕ್ಕೆ ಹಾಫ್​ ಸೆಂಚುರಿ ಸಿಡಿಸಿದ್ದ ಯುವಿ ದಾಖಲೆಯನ್ನ ಉಡೀಸ್​ ಮಾಡೋಕೆ ಅಭಿ ಪಣತೊಟ್ಟಿದ್ದಾರೆ.
ಪಂಜಾಬ್​ ಪುತ್ತರ್​ಗೆ ವೇಗದ ಶತಕ ಸಿಡಿಸೋ ಮಹದಾಸೆ
ವೇಗದ ಹಾಫ್​​ ಸೆಂಚುರಿ ಮಾತ್ರವಲ್ಲ. ಚುಟುಕು ಕ್ರಿಕೆಟ್​ನಲ್ಲಿ ಫಾಸ್ಟೆಸ್ಟ್​​ ಹಂಡ್ರೆಡ್​ ಕೂಡ ನನ್ನದಾಗಬೇಕು ಅನ್ನೋ ಮಹದಾಸೆ ಅಭಿಷೇಕ್​ ಶರ್ಮಾಗಿದೆ. T20 ವಿಶ್ವಕಪ್​ನಲ್ಲಿ ವೇಗದ ಶತಕ ಸಿಡಿಸಿದ ದಾಖಲೆ ಯುನಿವರ್ಸೆಲ್​ ಬಾಸ್​ ಕ್ರಿಸ್​ಗೇಲ್​ ಹೆಸರಲ್ಲಿದೆ. 2016ರಲ್ಲಿ ಭಾರತದಲ್ಲೇ ನಡೆದ ವಿಶ್ವಕಪ್​ನಲ್ಲಿ ಕೇವಲ 47 ಎಸೆತಕ್ಕೆ ಗೇಲ್​ ಶತಕ ಸಿಡಿಸಿದ್ರು. ಗೇಲ್​ನ ಹಿಂದಿಕ್ಕಿ ಫಾಸ್ಟೆಸ್ಟ್​​ ಸೆಂಚೂರಿಯನ್​ ಅನಿಸಿಕೊಳ್ಳಬೇಕು ಅನ್ನೋದು ಅಭಿಷೇಕ್​ ಮಹಾಕನಸಾಗಿದೆ.
ಇದನ್ನೂ ಓದಿ: ಡೆಲ್ಲಿಯಲ್ಲಿ ಇವತ್ತು ಭಾರತಕ್ಕೆ ನಮೀಬಿಯಾ ಸವಾಲ್.. ಟೀಂ ಇಂಡಿಯಾ ಪ್ಲಾನ್ ಏನು..?
ಭಾರತಕ್ಕೆ ಟಿ20 ವಿಶ್ವಕಪ್​ ಗೆಲ್ಲಿಸಬೇಕು ಅನ್ನೋದು ಅಭಿಷೇಕ್​ ಶರ್ಮಾ ಅಲ್ಟಿಮೇಟ್​​ ಡ್ರೀಮ್. ಹಾಲಿ ಚಾಂಪಿಯನ್​ ಪಟ್ಟವನ್ನ ಡಿಫೆಂಡ್​ ಮಾಡಿಕೊಳ್ಳೋಕೆ ಈ ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಹೋರಾಟಕ್ಕಿಳಿದಿದೆ. ಈ ಹೋರಾಟದಲ್ಲಿ ವೀರ ಸೈನಿಕನಂತೆ ಹೋರಾಡಿ ಟ್ರೋಫಿ ಗೆಲ್ಲಿಸೋ ಕನಸು ಅಭಿಷೇಕ್​ ಶರ್ಮಾದ್ದಾಗಿದೆ. ಮುಂದಿನ ಪಂದ್ಯಗಳಲ್ಲಿ ಅಭಿಷೇಕ್​ ಶರ್ಮಾ ವಿಸ್ಪೋಟಕ ಓಪನಿಂಗ್​ ನೀಡಿದ್ರೆ ಟೀಮ್​ ಇಂಡಿಯಾ ಗೆಲುವಿನ ಓಟ ಮುಂದುವರೆಯೋದ್ರಲ್ಲಿ ಯಾವ ಅನುಮಾನವೂ ಇಲ್ಲ.
ಅಭಿಷೇಕ್​ ಶರ್ಮಾ ಅಬ್ಬಿರಿಸಿದ್ರೆ ಎದುರಾಳಿ ಪಡೆ ಫುಲ್​ ನರ್ವಸ್​ ಆಗುತ್ತೆ. ಗುಡ್​ ಸ್ಟಾರ್ಟ್​ ನೀಡಿದ್ರೆ ಟೀಮ್​ ಇಂಡಿಯಾ ಕಾನ್ಫಿಡೆಂಟ್​ ಹೆಚ್ಚಾಗುತ್ತೆ. ಡೇರ್​​ಡೆವಿಲ್​ ಬ್ಯಾಟರ್​ ಅಭಿಷೇಕ್​ ಶರ್ಮಾ ಸದ್ಯ ಟೀಮ್ ಇಂಡಿಯಾದ ರಿಯಲ್​ ಗೇಮ್​ ಚೇಂಜರ್​. ಮೊದಲ ಪಂದ್ಯದಲ್ಲಿ ಫೇಲ್ ಆಗಿರೋ ಅಭಿಷೇಕ್​, ಮುಂದಿನ ಪಂದ್ಯಗಳಲ್ಲಿ ರೈಟ್​​ ಟ್ರ್ಯಾಕ್​ಗೆ ಮರಳಲಿ. ಮೂರು ಮಹಾಕನಸುಗಳನ್ನ ನನಸು ಮಾಡಿಕೊಳ್ಳಲಿ. ಭಾರತ ಮತ್ತೆ ಚಾಂಪಿಯನ್​ ಆಗಲಿ ಅನ್ನೋದೇ ಅಭಿಮಾನಿಗಳ ಪ್ರಾರ್ಥನೆ.
ಇದನ್ನೂ ಓದಿ: ಭಾರತ್ ಬಂದ್​ಗೆ ನೀರಸ ಪ್ರತಿಕ್ರಿಯೆ; ಕಾರ್ಮಿಕ ಸಂಘಟನೆಗಳ 11 ಬೇಡಿಕೆಗಳೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us