Advertisment

ಟೀಮ್ ಇಂಡಿಯಾಗೆ ಕುಲಾಯಿಸಿದ ಅದೃಷ್ಟ.. ಸೂರ್ಯಕುಮಾರ್ ಪಡೆಯಲ್ಲಿ ಭಾರೀ ಬದಲಾವಣೆ..!

ಗಿಲ್ ಪರ್ಫಾಮೆನ್ಸ್​ ಮತ್ತಷ್ಟು ಕುಂದುತ್ತಿದೆ ಹೊರತು ಟಿ20ಯಲ್ಲಿ ಬ್ಯಾಟಿಂಗ್ ಪ್ರಬಲವಾಗುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಬದಲಿಗೆ ವಿಕೆಟ್​ ಕೀಪರ್ ಜಿತೇಶ್​ ಶರ್ಮಾಗೆ ಅವಕಾಶ ನೀಡಲಾಗಿದೆ.

author-image
Bhimappa
SURYA_KUMAR (3)
Advertisment

5 ಪಂದ್ಯಗಳ ಟಿ20 ಸರಣಿಯಲ್ಲಿ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಕ್ಯಾಪ್ಟನ್​ ಸೂರ್ಯಕುಮಾರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. 

Advertisment

ಹೋಬಾರ್ಟ್​ನ ಬೆಲ್ಲೆರಿವ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್​ ಟಾಸ್ ಸೋತಿದ್ದಾರೆ. ಸದ್ಯ ಟಾಸ್ ಗೆದ್ದಿರುವ ಭಾರತದ ನಾಯಕ ಸೂರ್ಯಕುಮಾರ್ ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ. ಇದರಿಂದ ಆಸ್ಟ್ರೇಲಿಯಾ ಮೊದಲ ಬ್ಯಾಟಿಂಗ್ ಮಾಡಲಿದೆ. 

ಸೂರ್ಯಕುಮಾರ್ ನೇತೃತ್ವದಲ್ಲಿ ಟೀಮ್ ಇಂಡಿಯಾವನ್ನು ಕಣಕ್ಕೆ ಇಳಿಯುತ್ತಿದ್ದು ಎಲ್ಲರೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಬೇಕಿದೆ. ಸೂರ್ಯಕುಮಾರ್ ಅವರ ಬ್ಯಾಟಿಂಗ್ ಸುಧಾರಿಸಿಕೊಳ್ಳಬೇಕಿದೆ. ಮೊದಲ ಪಂದ್ಯದಲ್ಲಿ ಚೆನ್ನಾಗಿ ಬ್ಯಾಟ್ ಬೀಸಿದ್ದ ಕ್ಯಾಪ್ಟನ್ 2ನೇ ಮ್ಯಾಚ್​ನಲ್ಲಿ ಕೇವಲ 1 ರನ್​ಗೆ ಆಟ ಮುಗಿಸಿದ್ದರು. ಇದು ಕ್ರಿಕೆಟ್​ ಅಭಿಮಾನಿಗಳಿಗೆ ಬೇಸರ ತರಿಸಿತ್ತು. 

ಇದನ್ನೂ ಓದಿ:2025ರ ಮಹಿಳಾ ವಿಶ್ವಕಪ್; ಅತಿ ಹೆಚ್ಚು ರನ್​ ಗಳಿಸಿದವರು ಯಾರು.. ಸ್ಮೃತಿ ಮಂದಾನ ಸ್ಥಾನ?

Advertisment

TILAK_VARMA (2)

ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್ ಓಪನರ್ ಆಗಿ ಕ್ರೀಸ್​ಗೆ ಆಗಮಿಸಲಿದ್ದಾರೆ. ಗಿಲ್ ಪರ್ಫಾಮೆನ್ಸ್​ ಮತ್ತಷ್ಟು ಕುಂದುತ್ತಿದೆ ಹೊರತು ಟಿ20ಯಲ್ಲಿ ಬ್ಯಾಟಿಂಗ್ ಪ್ರಬಲವಾಗುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಬದಲಿಗೆ ವಿಕೆಟ್​ ಕೀಪರ್ ಜಿತೇಶ್​ ಶರ್ಮಾಗೆ ಅವಕಾಶ ನೀಡಲಾಗಿದೆ. ತಿಲಕ್ ವರ್ಮಾ ಸಿಡಿದೇಳಬೇಕಿದೆ. ಇವರು ಮಧ್ಯಮ ಕ್ರಮಾಂಕದಲ್ಲಿ​ ಬ್ಯಾಟಿಂಗ್​ಗೆ ಬೆಂಬಲ ಆಗಬಲ್ಲರು. 

ಶಿವಂ ದುಬೆ, ಅಕ್ಷರ್ ಪಟೇಲ್​ ಆಲ್​ರೌಂಡರ್ಸ್​ ಮೈದಾನಕ್ಕೆ ಇಳಿಯಲಿದ್ದಾರೆ. ಬೌಲಿಂಗ್​ನಲ್ಲಿ ಸ್ಟಾರ್ ಬೌಲರ್​ ಬುಮ್ರಾ ಬೌಲಿಂಗ್ ಪಡೆಯ ಮುಖ್ಯ ಬೆನ್ನೆಲುಬು ಆಗಿದ್ದು ಹರ್ಷಿತ್ ರಾಣಾ ಬದಲಿಗೆ ಅರ್ಷ್​ದೀಪ್ ಸಿಂಗ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಸ್ಪಿನ್ ಬೌಲಿಂಗ್​ನಲ್ಲಿ ವರುಣ್ ಚಕ್ರವರ್ತಿ ಒಬ್ಬರೇ ಇದ್ದಾರೆ. ಇವರಿಗೆ ಆಲ್​​ರೌಂಡರ್​ಗಳಾದ ಶಿವಂ ದುಬೆ, ಅಕ್ಷರ್ ಪಟೇಲ್ ಸಾಥ್ ಕೊಡಲಿದ್ದಾರೆ.   

ಟೀಮ್ ಇಂಡಿಯಾದ ಪ್ಲೇಯಿಂಗ್- 11

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭ್​​ಮನ್ ಗಿಲ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಅರ್ಷ್​ದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Surya kumar Yadav IND vs AUS
Advertisment
Advertisment
Advertisment