/newsfirstlive-kannada/media/media_files/2025/09/10/abhishek_sharma-4-2025-09-10-22-32-22.jpg)
ಟಿ20 ಏಷ್ಯಾ ಕಪ್ ಪಂದ್ಯದಲ್ಲಿ ಯುಎಇ ತಂಡದ ವಿರುದ್ಧ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಸುಲಭ ಜಯ ಸಾಧಿಸಿದೆ. ಕೇವಲ 4 ಓವರ್​ಗೆ 60 ರನ್​ ಬಾರಿಸೋ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ಪಡೆದಿದೆ.
ದುಬೈನ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆದ ಏಷ್ಯಾ ಕಪ್​ ಟೂರ್ನಿಯ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಟಾಸ್ ಗೆದ್ದು ಎದುರಾಳಿ ಯುಎಇ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಅದರಂತೆ ಬ್ಯಾಟಿಂಗ್​ಗೆ ಬಂದ ಯುಎಇ ತಂಡ ಓಪನರ್ಸ್ ಕೆಲ ಸಮಯ ಆಡಿದರು. ಓಪನರ್ಸ್​ ಅಲಿಶನ್ ಶರಾಫು 22, ನಾಯಕ ಮುಹಮ್ಮದ್ ವಸೀಮ್ 19 ರನ್​ಗೆ ಔಟ್​ ಆದರು.
/filters:format(webp)/newsfirstlive-kannada/media/media_files/2025/09/10/suryakumar_uae-2025-09-10-19-36-33.jpg)
ಒಪನರ್ಸ್​ ಅಷ್ಟೇ ತಂಡದಲ್ಲಿ ಹೆಚ್ಚು ರನ್​ ಬಾರಿಸಿದ ಬ್ಯಾಟ್ಸ್​ಮನ್​ಗಳು ಆಗಿದ್ದಾರೆ. ಉಳಿದೆಲ್ಲ ಬ್ಯಾಟ್ಸ್​ಮನ್​ಗಳು ಕೇವಲ 3 ರನ್​ಗಳ ಗಡಿ ಕೂಡ ದಾಟಲಿಲ್ಲ. ಒಬ್ಬರು ಡಕೌಟ್ ಆದರೆ, ಮೂವರು 1 ರನ್​ಗೆ ವಿಕೆಟ್ ಒಪ್ಪಿಸಿದ್ದಾರೆ. 4 ಬ್ಯಾಟರ್​ಗಳು 2 ರನ್​ಗೆ ಔಟ್ ಆದ್ರೆ, ರಾಹುಲ್ ಚೋಪ್ರಾ 3 ರನ್​​ಗೆ ಔಟ್ ಆಗಿದ್ದಾರೆ. ಹೀಗಾಗಿ ಯುಎಇ ತಂಡ ಕೇವಲ 13.1 ಓವರ್​ಗಳಲ್ಲಿ 57 ರನ್​ಗೆ ಆಟ ಮುಗಿಸಿತು.
ಈ ಅಲ್ಪ ಮೊತ್ತದ ಟಾರ್ಗೆಟ್ ಚೇಸ್ ಮಾಡಿದ ಟೀಮ್ ಇಂಡಿಯಾ ಸುಲಭವಾದ ಗೆಲುವು ದಾಖಲು ಮಾಡಿದೆ. ಓಪನರ್​ಗಳಾಗಿ ಕ್ರೀಸ್​ಗೆ ಆಗಮಿಸಿದ ಅಭಿಷೇಕ್ ಶರ್ಮಾ ಹಾಗೂ ಶುಭ್​ಮನ್ ಗಿಲ್​ ಬೌಂಡರಿ ಸಿಕ್ಸರ್​ಗಳ ಸುರಿಮಳೆಗೈದರು. ಅಭಿಷೇಕ್ ಶರ್ಮಾ 16 ಎಸೆತದಲ್ಲಿ 2 ಬೌಂಡರಿ, 3 ಸಿಕ್ಸರ್​ಗಳಿಂದ 30 ರನ್​ ಚಚ್ಚಿ ವಿಕೆಟ್ ಒಪ್ಪಿಸಿದರು. ಗಿಲ್​ 9 ಎಸೆತದಲ್ಲಿ 2 ಬೌಂಡರಿ, 1 ಸಿಕ್ಸರ್​ನಿಂದ 20 ರನ್​ ಹಾಗೂ ಸೂರ್ಯಕುಮಾರ್ 1 ಸಿಕ್ಸರ್​ನಿಂದ ಗೆಲುವಿನ ದಡ ಮುಟ್ಟಿದರು. ಯುಎಇ ವಿರುದ್ಧ ಟೀಮ್ ಇಂಡಿಯಾ 9 ವಿಕೆಟ್​ಗಳ ವಿಜಯ ಸಾಧಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us