/newsfirstlive-kannada/media/media_files/2025/09/01/ipl_teams-2025-09-01-14-21-24.jpg)
ಐಪಿಎಲ್ಗೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಸಿದ್ಧತೆ ಜೋರಾಗಿದೆ. ಒಂದ್ಕಡೆ ಆಟಗಾರರನ್ನು ಸೆಳೆಯುವ ಯತ್ನದಲ್ಲಿರುವ ಕೊಲ್ಕತ್ತಾ ನೈಟ್ ರೈಸರ್ಸ್ ತಂಡದಲ್ಲಿ, ಈಗ ಮುಂದಿನ ಹೆಡ್ ಕೋಚ್ ಯಾರು ಆಗುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕಾಗಿ ಇಬ್ಬರ ನಡುವೆ ಟಫ್ ಫೈಟ್ ನಡೀತಿದೆ.
ಸೀಸನ್-19ರ ಐಪಿಎಲ್ಗೆ ಈಗಿನಿಂದಲೇ ಅಖಾಡಕ್ಕಿಳಿದಿರುವ ಕೊಲ್ಕತ್ತಾ ನೈಟ್ ರೈಡರ್ಸ್, ಹೆಡ್ ಕೋಚ್ ಚಂದ್ರಕಾಂತ್ ಪಂಡಿತ್ಗೆ ಕೊಕ್ ಕೊಟ್ಟು ದಿನಗಳೇ ಕಳೆದಿವೆ. ಆದ್ರೀಗ ಹೊಸ ಹೆಡ್ ಕೋಚ್ ಹುಡುಕಾಟದಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್, ಇಬ್ಬರಲ್ಲಿ ಒಬ್ಬರಿಗೆ ಹೆಡ್ ಕೋಚ್ ಪಟ್ಟ ಕಟ್ಟುವ ಲೆಕ್ಕಾಚಾರದಲ್ಲಿದೆ.
ಯಾರ್ ಆಗ್ತಾರೆ ಕೊಲ್ಕತ್ತಾ ನೈಟ್ ರೈಡರ್ಸ್ ಹೆಡ್ ಕೋಚ್..?
ರಾಜಸ್ಥಾನ್ ರಾಯಲ್ಸ್ನ ತೊರೆಯಲು ಮುಂದಾಗಿರೋ ಸಂಗಾಕ್ಕರ ಕೊಲ್ಕತ್ತಾ ನೈಟ್ ರೈಡರ್ಸ್ ಸೇರ್ತಾರೆ ಎಂಬ ಸುದ್ದಿ ಹರಿದಾಡ್ತಿದೆ. ಕೆಲ ದಿನಗಳ ಹಿಂದಷ್ಟೇ ಚಂದ್ರಕಾಂತ್ ಪಂಡಿತ್ಗೆ ಕೊಕ್ ನೀಡಿರುವ ಕೆಕೆಆರ್ ಹೊಸ ಹೆಡ್ಕೋಚ್ಗಾಗಿ ಹುಡುಕಾಟ ನಡೆಸ್ತಿದೆ. ಶಾರೂಖ್ ಖಾನ್ ಫ್ರಾಂಚೈಸಿಯ ಕಣ್ಣು ಸಂಗಾಕ್ಕರ ಮೇಲೆ ಬಿದ್ದಿದ್ದು, ಈಗಾಗಲೇ ಅಪ್ರೋಚ್ ಮಾಡಲಾಗಿದೆ ಎನ್ನಲಾಗ್ತಿದೆ. ಆದ್ರೆ, ಇತ್ತ ಕೋಚಿಂಗ್ ಟೀಮ್ನಲ್ಲಿ ಅಭಿಷೇಕ್ ನಾಯರ್ ಇದ್ದಾರೆ. ಹೀಗಾಗಿ ಇಬ್ಬರಲ್ಲಿ ಯಾರಿಗೆ ಕೊಲ್ಕತ್ತಾ ಮಣೆಹಾಕುತ್ತೆ ಎಂಬ ಕ್ಯೂರಿಯಾಸಿಟಿ ಎಲ್ಲರಲ್ಲೂ ಮಾಡಿದೆ.
ಕೊಲ್ಕತ್ತಾ ಸಕ್ಸಸ್ನಲ್ಲಿ ಅಭಿಷೇಕ್ ನಾಯರ್ ಪಾತ್ರ ಅಪಾರ..!
ಕೊಲ್ಕತ್ತಾ ನೈಟ್ ರೈಡರ್ಸ್.. ಇಂಡಿಯನ್ ಪ್ರೀಮಿಯರ್ ಲೀಗ್ನ ಸಕ್ಸಸ್ ಫುಲ್ ಟೀಮ್ನಲ್ಲಿ ಒಂದು. ಆದ್ರೆ, ಇದೇ ಫ್ರಾಂಚೈಸಿ ಪರ 2018ರಿಂದ ದುಡಿಯುತ್ತಿದ್ದಾರೆ. 2021ರಲ್ಲಿ ರನ್ನರ ಆಫ್ ಆಗಿದ್ದು, 2024ರಲ್ಲಿ ಕೊಲ್ಕತ್ತಾ ಚಾಂಪಿಯನ್ ಆಗಿ ಮರೆದಾಡಿದ ಹಿಂದೆ ಅಭಿಷೇಕ್ ನಾಯರ್ ಪಾತ್ರವಿದೆ.
ಅಭಿಷೇಕ್ ನಾಯರ್ ಅನುಭವ ಏನು..?
- ದೇಶಿ ಕ್ರಿಕೆಟ್‌ನ ಸಕ್ಸಸ್ಫುಲ್ ಆಲ್ರೌಂಡರ್ ಅಭಿಷೇಕ್
- ಮುಂಬೈ 2 ಬಾರಿ ರಣಜಿ ಗೆಲುವಿನಲ್ಲಿ ಮಹತ್ವದ ಪಾತ್ರ
- IPLನಲ್ಲಿ ಮುಂಬೈ, ಪಂಜಾಬ್, ರಾಜಸ್ಥಾನ್, ಪುಣೆ ಪರ ಆಟ
- 2018ರಿಂದ 24 ತನಕ ಕೆಕೆಆರ್ ಸಹಾಯಕ ಕೋಚ್ ಆಗಿ ಕೆಲಸ
- ಕೆರಿಬಿಯನ್ ಲೀಗ್ನಲ್ಲಿ ಟ್ರಿಬ್ಯಾಗೋ ನೈಟ್ ರೈಡರ್ಸ್ ಪರ ಕಾರ್ಯ
- ಕೆಕೆಆರ್ ಯುವ ಆಟಗಾರರ ಯಶಸ್ಸಿನಲ್ಲಿ ಪ್ರಮುಖ ಪಾತ್ರ
- ಟೀಮ್ ಇಂಡಿಯಾ ಸಹಾಯಕ ಕೋಚ್ ಆಗಿ ಕಾರ್ಯ
- ಕೊಲ್ಕತ್ತಾದ ಸಹಾಯಕ ಕೋಚ್ ಆಗಿ ಮತ್ತೆ ಸೇರ್ಪಡೆ
- ಕೊಲ್ಕತ್ತಾ ಆಟಗಾರರ ಜೊತೆ ಉತ್ತಮ ಅನುಬಂಧ
ಲೆಜೆಂಡರಿ ಕುಮಾರ ಸಂಗಕ್ಕಾರಗೆ ಕಟ್ಟುತ್ತಾ ಪಟ್ಟ..?
ಅಭಿಷೇಕ್ ನಾಯರ್ ಕನಸಿಗೆ ಕುಮಾರ ಸಂಗಕ್ಕಾರ ಮುಳ್ಳಾದರು ಅಚ್ಚರಿ ಇಲ್ಲ. ಯಾಕಂದ್ರೆ, ಈಗಾಗಲೇ ಆರ್ಆರ್ ತೊರೆಯಲು ಸಜ್ಜಾಗಿರುವ ಕುಮಾರ ಸಂಗಕ್ಕಾರ, ಲೆಜೆಂಡರಿ ಕ್ರಿಕೆಟರ್. ಅಪಾರ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅನುಭವದ ಜೊತೆ ಆರ್ಆರ್ ತಂಡದ ಕೋಚ್ ಆಗಿ ಯಶಸ್ಸು ಕಂಡಿದ್ದಾರೆ. ಹೀಗಾಗಿ ಲಂಕಾ ಲೆಜೆಂಡ್ ಹೆಡ್ ಕೋಚ್ ಹುದ್ದೆಯ ಫೇವರಿಟ್ ಅನ್ನೋದ್ರಲ್ಲಿ ಡೌಟೇ ಇಲ್ಲ.
ಇದನ್ನೂ ಓದಿ:ಭಾರತ ತಂಡದ ಓಪನರ್ ಸ್ಲಾಟ್ಗೆ ಬಿಗ್ ರೇಸ್.. ಏಷ್ಯಾಕಪ್ನಲ್ಲಿ ಆ ಅದೃಷ್ಟ ಸಿಗೋದು ಯಾರಿಗೆ?
ಕುಮಾರ ಸಂಗಕ್ಕಾರ ಅನುಭವ ಏನು..?
- ಅಪಾರ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವ
- 2021ರಿಂದ ಆರ್ಆರ್ ಕೋಚ್ & ಡೈರೆಕ್ಟರ್ ಆಗಿ ಕಾರ್ಯ
- 2022ರ ಐಪಿಎಲ್ನಲ್ಲಿ ರಾಜಸ್ಥಾನ್ ರನ್ನರ್ ಆಪ್
- ಸ್ಟ್ರಾಂಗ್ ಕಮ್ಯುನಿಕೇಟರ್ & ಆಟಗಾರರಿಗೆ ಪ್ರೋತ್ಸಾಹ
- ಸ್ಟ್ರಾಟೆಜಿಸ್ಟ್, ವರ್ಕ್ ಎಥಿಕ್ಸ್ ಹೊಂದಿರುವ ಸಂಗಕ್ಕಾರ
- ಲೀಡರ್ಶಿಫ್ & ಮ್ಯಾನ್ ಮ್ಯಾನೇಜ್ಮೆಂಟ್ ಸ್ಕಿಲ್ಸ್
ಹೀಗಾಗಿ ಕುಮಾರ ಸಂಗಕ್ಕಾರ, ಅಭಿಷೇಕ್ ನಾಯರ್ನ ಹಿಂದಿಕ್ಕಿದರು ಅಚ್ಚರಿ ಇಲ್ಲ. ಆದ್ರೆ, ಕಳೆದ ಕೆಲ ವರ್ಷಗಳಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಂಬಿಕಸ್ಥ ಬಂಟನಾಗಿರುವ ಅಭಿಷೇಕ್ ನಾಯರ್, ತಂಡಕ್ಕಾಗಿ ದುಡಿದಿದ್ದಾರೆ. ಆಪ್ತರೂ ಆಗಿದ್ದಾರೆ. ಈ ಕಾರಣಕ್ಕೆ ಲಂಕಾ ಲೆಜೆಂಡ್ ಸಂಗಕ್ಕಾರರನ್ನ ಕರೆತಂದು ಪಟ್ಟ ಕಟ್ಟೋದಾ..? ಇಲ್ಲ ತಂಡದಲ್ಲೇ ಇರುವ ಅಭಿಷೇಕ್ ನಾಯರ್ಗೆ ಬಡ್ತಿ ನೀಡುವುದಾ..? ಅನ್ನೋದು ಕೊಲ್ಕತ್ತಾ ಮುಂದಿರುವ ಬಿಗೆಸ್ಟ್ ಕ್ವಷನ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ