Advertisment

2025ರಲ್ಲಿ ಬದಲಾಯ್ತು ಹಲವು ತಂಡಗಳ ಹಣೆಬರಹ.. ಸೋಲು, ನಿರಾಸೆ, ನೋವು ಮೆಟ್ಟಿನಿಂತ ತಂಡಗಳು

ಕ್ರಿಕೆಟ್​​ ಲೋಕದಲ್ಲಿ ಈ ವರ್ಷ ಹೊಸ ಮನ್ವಂತರ ಸೃಷ್ಟಿಯಾಗಿದೆ. ಪ್ರತಿ ಟೂರ್ನಿಗಳಲ್ಲಿ ಸೋಲು, ಹತಾಶೆ, ನಿರಾಸೆ, ನೋವು ಕಂಡಿದ್ದ ತಂಡಗಳು ಗೆಲುವಿನ ರುಚಿಯನ್ನ ನೋಡಿದ ವರ್ಷವಿದು. 18 ವರ್ಷಗಳ ಸತತ ಸೋಲು ಮೆಟ್ಟಿನಿಂತು ಚೊಚ್ಚಲ ಐಪಿಎಲ್​ ಗೆದ್ದ ಆರ್​​ಸಿಬಿಯಿಂದ ಹಿಡಿದು ವಿಶ್ವಕಪ್​ ಗೆದ್ದು ಇತಿಹಾಸ ರಚಿಸಿದೆ.

author-image
Ganesh Kerekuli
rcb cares
Advertisment
  • ಚೊಚ್ಚಲ ಏಕದಿನ ವಿಶ್ವಕಪ್​ ಗೆದ್ದ ವೀರ ವನಿತೆಯರು
  • ವಿಶ್ವಕಪ್​ನ ಸುದೀರ್ಘ 47 ವರ್ಷಗಳ ಕೊರಗು ಅಂತ್ಯ
  • 18 ವರ್ಷಗಳ ಕಾಯುವಿಕೆ ಅಂತ್ಯ.. ಕಪ್​ ಗೆದ್ದ RCB

ಕ್ರಿಕೆಟ್​​ ಲೋಕದಲ್ಲಿ ಈ ವರ್ಷ ಹೊಸ ಮನ್ವಂತರವೇ ಸೃಷ್ಟಿಯಾಗಿದೆ. ಪ್ರತಿ ಟೂರ್ನಿಗಳಲ್ಲಿ ಸೋಲು, ಹತಾಶೆ, ನಿರಾಸೆ, ನೋವನ್ನೇ ಕಂಡಿದ್ದ ಹಲವು ತಂಡಗಳು ಗೆಲುವಿನ ರುಚಿಯನ್ನ ನೋಡಿದ ವರ್ಷವಿದು. 18 ವರ್ಷಗಳ ಸತತ ಸೋಲು ಮೆಟ್ಟಿನಿಂತು ಚೊಚ್ಚಲ ಐಪಿಎಲ್​ ಗೆದ್ದ ಆರ್​​ಸಿಬಿಯಿಂದ ಹಿಡಿದು ವಿಶ್ವಕಪ್​ ಗೆದ್ದು ಇತಿಹಾಸ ರಚಿಸಿದ ಮಹಿಳಾ ಏಕದಿನ ತಂಡದವರೆಗೆ.. ಈ ವರ್ಷ ಕ್ರಿಕೆಟ್​ ಲೋಕದಲ್ಲಿ ಹೊಸ ಇತಿಹಾಸವೇ ರಚನೆಯಾಗಿದೆ.
 
ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ವನಿತೆಯರು ಇತಿಹಾಸ ರಚಿಸಿದ್ದಾರೆ. ಚೊಚ್ಚಲ ಏಕದಿನ ವಿಶ್ವಕಪ್​ ಟ್ರೋಫಿ ಗೆದ್ದು ಕಾಲದ ಕೊರಗಿಗೆ ಅಂತ್ಯ ಹಾಡಿದ್ದಾರೆ. ಭಾರತೀಯ ನಾರಿಯರು ವಿಶ್ವ ಗೆದ್ದ ಸಂಭ್ರಮ ಇಡೀ ದೇಶವನ್ನ, ಅಭಿಮಾನಿಗಳನ್ನ ಆವರಿಸಿದೆ. ಕ್ರಿಕೆಟ್​ ತಂಡಗಳ ಪಾಲಿಗೆ ಈ 2025 ಒಂತರಾ ಲಕ್ಕಿ ವರ್ಷ. ಬಹುಕಾಲದಿಂದ ಸೋಲು, ಅವಮಾನ, ಹತಾಶೆ, ನಿರಾಸೆ ಅನುಭವಿಸಿದ ತಂಡಗಳೆಲ್ಲಾ ಈಗ ಚಾಂಪಿಯನ್​ಗಳಾಗಿವೆ. 

Advertisment

ಚೊಚ್ಚಲ ಏಕದಿನ ವಿಶ್ವಕಪ್​ ಗೆದ್ದ ವೀರ ವನಿತೆಯರು

ಮಹಿಳಾ ಏಕದಿನ ವಿಶ್ವಕಪ್​ ಟೂರ್ನಿಯ 1973ರಲ್ಲಿ ಆರಂಭವಾದಾಗಿನಿಂದಲೂ ಟೀಮ್​ ಇಂಡಿಯಾ ಟೂರ್ನಿಯ ಭಾಗವಾಗಿದೆ. ಆದ್ರೆ, ಒಂದು ಬಾರಿ ಕೂಡ ಚಾಂಪಿಯನ್​ ಪಟ್ಟವೇರಿರಲಿಲ್ಲ. 2005, 2017ರಲ್ಲಿ ಫೈನಲ್​ಗೆ ಹೋದ್ರೂ ಹಾರ್ಟ್​ಬ್ರೇಕ್​ನೊಂದಿಗೆ ಎಲ್ಲಾ ಅಂತ್ಯವಾಗಿತ್ತು. ಈ ಬಾರಿ ತವರಿನಲ್ಲೇ ನಡೆದ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡಿ ವೀರ ವನಿತೆಯರು ಚೊಚ್ಚಲ ಟ್ರೋಫಿ ಗೆಲ್ಲಿಸಿದ್ದಾರೆ. 47 ವರ್ಷಗಳ ಕೊರಗಿಗೆ ಅಂತ್ಯ ಹಾಡಿದ್ದಾರೆ. 

ಇದನ್ನೂ ಓದಿ: KSCA ಚುನಾವಣೆಗೆ ಬ್ರಿಜೇಶ್ ಪಟೇಲ್ ಬಣ ರೆಡಿ..! ಚುನಾವಣಾ ಅಖಾಡಕ್ಕೆ ಪತ್ರಕರ್ತ KN ಶಾಂತಕುಮಾರ್ ಎಂಟ್ರಿ

INDIAN WOMEN TEAM WON WORLD CUP

ಕಪ್​ ಗೆದ್ದ RCB

2025.. ಯಾರು ಮರೆತ್ರೂ ಆರ್​​ಸಿಬಿ ಅಭಿಮಾನಿಗಳು ಈ ವರ್ಷವನ್ನ ಮರೆಯೋಕೆ ಸಾಧ್ಯಾನೆ ಇಲ್ಲ. ಒಂದಲ.. ಎರಡಲ್ಲ.. 18 ವರ್ಷಗಳ ಕೊರಗು ಈಡೇರಿದ ವರ್ಷವಿದು. 2008ರಿಂದ ಐಪಿಎಲ್​ ಟ್ರೋಫಿಗಾಗಿ ಪರಿತಪಿಸಿದ್ದ ರೆಡ್​ ಆರ್ಮಿ ಕೊನೆಗೂ ಈ ವರ್ಷ ಟ್ರೋಫಿಗೆ ಮುತ್ತಿಕ್ಕಿತು. ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್​ ಪಡೆಯನ್ನ ಮಣಿಸಿದ ಆರ್​​ಸಿಬಿ, ಕೋಟ್ಯಂತರ ಅಭಿಮಾನಿಗಳ ಕನಸನ್ನ ನನಸಾಗಿಸಿತು. 

Advertisment

RCB_WIN (1)

ಸೌತ್​ ಆಫ್ರಿಕಾಗೆ ಟೆಸ್ಟ್​ ಚಾಂಪಿಯನ್​ಶಿಪ್​ ಕಿರೀಟ

ಈ ವರ್ಷ ಸೌತ್​ ಆಫ್ರಿಕಾ ಕೂಡ ತಂಡಕ್ಕಂಟಿದ್ದ ಚೋಕರ್ಸ್​ ಪಟ್ಟವನ್ನ ಕಿತ್ತು ಬಿಸಾಡಿದೆ. ಐಸಿಸಿ ಟೂರ್ನಿಗಳಲ್ಲಿ ಸತತ ಸೋಲುಂಡಿದ್ದ ಸೌತ್​ ಆಫ್ರಿಕಾ ಕೊನೆಗೂ ಟ್ರೋಫಿ ಗೆದ್ದು ಬೀಗಿದ ವರ್ಷವಿದು. ಕ್ರಿಕೆಟ್​ ಕಾಶಿ ಲಾರ್ಡ್ಸ್​ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನ ಭೇಟೆಯಾಡಿದ ಹರಿಣಗಳ ಪಡೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಗೆದ್ದು ಬೀಗಿತು. 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಇಡೀ ಸೌತ್​​ ಆಫ್ರಿಕಾನೇ ತೇಲಾಡಿತ್ತು. 

27 ವರ್ಷದ ಬಳಿಕ ಹರಿಣಗಳಿಗೆ ICC ಕಪ್​​​; ಪ್ಲೇಯರ್ಸ್​, ಫ್ಯಾನ್ಸ್​ ಕಣ್ಣೀರು.. ನೀಗಿತು ಆಫ್ರಿಕಾದ ಟ್ರೋಫಿ ಬರ!

ಮೊದಲ ಬಿಗ್​ಬ್ಯಾಷ್​ ಟ್ರೋಫಿ ಗೆದ್ದ ಹೊಬಾರ್ಟ್​ ಹರಿಕೇನ್ಸ್

ಆಸ್ಟ್ರೇಲಿಯಾದ ಬಿಗ್​ಬ್ಯಾಷ್​ ಲೀಗ್​ನಲ್ಲೂ ಈ ವರ್ಷ ಇತಿಹಾಸ ನಿರ್ಮಾಣವಾಗಿದೆ. 2011ರಿಂದಲೂ ಸತತವಾಗಿ ಹತಾಶೆ ಅನುಭವಿಸಿದ್ದ ಹೊಬಾರ್ಟ್​ ಹರಿಕೇನ್ಸ್​ ಈ ಬಾರಿ ಚಾಂಪಿಯನ್​ ಪಟ್ಟವೇರಿತು. ಸಿಡ್ನಿ ಥಂಡರ್​ ತಂಡವನ್ನ 7 ವಿಕೆಟ್​ಗಳಿಂದ ಮಣಿಸಿ ಹೊಬಾರ್ಟ್​ ತಂಡ ಚೊಚ್ಚಲ ಟ್ರೋಫಿ ಗೆದ್ದು ಬೀಗಿತು. 

ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿಗೂ ಈ ವರ್ಷ ಮೊದಲ ಟ್ರೋಫಿ

ಐಪಿಎಲ್​ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಕೂಡ 2025ರಲ್ಲಿ ಚೊಚ್ಚಲ ಟಿ20 ಟ್ರೋಫಿ ಗೆಲ್ತು. 18 ವರ್ಷಗಳಿಂದ ಐಪಿಎಲ್ ಸೇರಿದಂತೆ ವಿಶ್ವದ ಉಳಿದ ಲೀಗ್​ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಪಾಲಿಗೆ ಚಾಂಪಿಯನ್​ ಪಟ್ಟ ಮರೀಚಿಕೆಯಾಗಿತ್ತು. ಅಂತಿಮವಾಗಿ ಈ ವರ್ಷ ಇಂಟರ್​ನ್ಯಾಷನಲ್​ ಲೀಗ್​ ಟಿ20ಯಲ್ಲಿ ದುಬೈ ಕ್ಯಾಪಿಟಲ್ಸ್​, ಡಸೆರ್ಟ್​ ವಿಸ್ಪರ್ಸ್​ನ ಮಣಿಸೋದ್ರೊಂದಿಗೆ ಮೊಟ್ಟ ಮೊದಲ ಟ್ರೋಫಿ ಡೆಲ್ಲಿ ಕ್ಯಾಪಿಟಲ್ಸ್​​ ಫ್ರಾಂಚೈಸಿಯ ಮುಡಿಗೇರಿತು. 

Advertisment

2013ರ ಬಳಿಕ ಚಾಂಪಿಯನ್ಸ್​ ಟ್ರೋಫಿಯಲ್ಲಿ ಹಿನ್ನಡೆ ಅನುಭವಿಸಿದ್ದ ಟೀಮ್​ ಇಂಡಿಯಾ ಕೂಡ ಚಾಂಪಿಯನ್​ ಆಗಿ ಹೊರಹೊಮ್ಮಿದ್ದು ಈ ವರ್ಷವೇ. ನ್ಯೂಜಿಲೆಂಡ್​ ತಂಡವನ್ನ ಮಣಿಸಿ ದುಬೈ ತಂಡ 12 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆದ್ದು ಬೀಗಿತು. 

ಇದನ್ನೂ ಓದಿ:RCB ಯಾರನ್ನೆಲ್ಲಾ ಉಳಿಸಿಕೊಂಡಿದೆ? ಕನ್ನಡತಿಯನ್ನು ಕೈಬಿಡದ ಡೆಲ್ಲಿ ಕ್ಯಾಪಿಟಲ್ಸ್..!

ಒಟ್ಟಿನಲ್ಲಿ 2025ರಲ್ಲಿ ಟ್ರೋಫಿ ಗೆಲ್ಲಲಾಗದೇ ಸತತ ಹಿನ್ನಡೆ ಅನುಭವಿಸಿದ್ದ ತಂಡಗಳು ಚಾಂಪಿಯನ್​ಗಳಾಗಿ ಮೆರೆದಾಡಿವೆ. ಹಲವು ತಂಡಗಳ ಹಣೆಬರಹವೇ ಬದಲಾಗಿದೆ. ಹೀಗಾಗಿಯೇ ಹೇಳಿದ್ದು 2025ರ ಕ್ರಿಕೆಟ್​ ತಂಡಗಳ ಪಾಲಿನ ಲಕ್ಕಿ ವರ್ಷ ಅಂತಾ.

Advertisment

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cricket news in Kannada
Advertisment
Advertisment
Advertisment