Advertisment

ಕೆಲಸದಲ್ಲಿ ಒತ್ತಡ.. ನಿರಾಸೆ.. ಇವತ್ತು ನಿಮ್ಮ ಭವಿಷ್ಯ ಹೇಗಿದೆ..?

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಆರಿದ್ರಾ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ

Advertisment

ಇದನ್ನೂ ಓದಿ:ನ್ಯಾಯಾಂಗ ಭ್ರಷ್ಟಾಚಾರ ವಿವಾದ: ತಲೆಗಳು ಉರುಳಬೇಕು ಎಂದ ಸುಪ್ರೀಂಕೋರ್ಟ್, ನ್ಯಾಯಾಂಗ ನಿಂದನೆ ನೋಟೀಸ್ ನೀಡಿಕೆ

ಮೇಷ

  • ನಿಮ್ಮ ಮನೆಯವರಿಗೆ ನಿಮ್ಮ ಬಗ್ಗೆ ಋಣಾತ್ಮಕ ಅಭಿಪ್ರಾಯಗಳು ಹೆಚ್ಚು
  • ನಿಮಗಿರುವ ಅನುಕೂಲವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಿ
  • ಅವಕಾಶ ಮಾಡಿಕೊಂಡು ಧ್ಯಾನ-ಯೋಗ ಮಾಡಿ ಆಲಸ್ಯ ಬೇಡ
  • ಕೆಲಸದ ಒತ್ತಡದಿಂದ ನಿಮಗೆ ನಿರಾಶೆಯಾಗಬಹುದು
  • ಎಣ್ಣೆಯಿಂದ ಕರಿದ ಪದಾರ್ಥಗಳನ್ನು ಸಿದ್ಧ ಆಹಾರಗಳನ್ನು ತ್ಯಜಿಸುವುದು ಒಳಿತು
  • ನಿಮ್ಮ ಕುಲದೇವರನ್ನು ಆರಾಧನೆ ಮಾಡಿ

ವೃಷಭ

  • ಸಣ್ಣ ಸಣ್ಣ ವಿಚಾರಗಳಿಗೆ ಜಗಳವಾಗಬಹುದು ತಾಳ್ಮೆಯಿರಲಿ
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ನಿಮ್ಮ ಮನಸ್ಸಿನ ಚಂಚಲತೆ ನಿಗ್ರಹಮಾಡಿ
  • ಕಾರ್ಯಕ್ಷೇತ್ರ, ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮನ್ನು ಅಲ್ಪರನ್ನಾಗಿ ಕಾಣಬಹುದು
  • ನಿಮ್ಮ ಕುಲದೇವತೆ ಹಾಗೂ ಗುರುವನ್ನು ಪ್ರಾರ್ಥನೆ ಮಾಡಿ
Advertisment

ಮಿಥುನ 

  • ಮುಖ್ಯ ಕೆಲಸಗಳ ಬಗ್ಗೆ ನಿರ್ಲಕ್ಷ್ಯ ತೋರುವ ಸಾಧ್ಯತೆ
  • ನಿಮ್ಮಿಂದ ಬೇರೆಯವರಿಗೆ ಸಹಾಯವಾಗುತ್ತದೆ 
  • ಇಂದು ಅವಕಾಶ, ಅನುಕೂಲ ಕೈ ತಪ್ಪುವ ಸಾಧ್ಯತೆ ಹೆಚ್ಚು
  • ಮಕ್ಕಳಿಂದ, ಚಿಕ್ಕವರಿಂದ ಬೆಂಬಲ ಪ್ರೋತ್ಸಾಹ ಸಿಗುತ್ತದೆ
  • ‘ಆದರೆ ಅವರು ನಿಮ್ಮನ್ನ ಮರೆಯುವ ಸಾಧ್ಯತೆ ಹೆಚ್ಚು
  • ‘ಶ್ರೀ ಲಕ್ಷ್ಮೀ ದೇವಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಪಿತ್ರಾರ್ಜಿತ ಆಸ್ತಿಯಿಂದ ಹಣ ಬರುವ ಸಾಧ್ಯತೆ
  • ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡ ಶಿಸ್ತನ್ನು ಬೇರೆಯವರ ಮೇಲೆ ಹೇರಬೇಡಿ
  • ಇಂದು ನಿಮ್ಮ ಮಾತು, ನಡೆನುಡಿ ಬಹಳ ವಿನಯದಿಂದ ಇರಲಿ
  • ವ್ಯಾಪಾರದಾರರಿಗೆ ಇಂದು ಹೆಚ್ಚು ಲಾಭ
  • ಸ್ಥಿರಾಸ್ತಿಯನ್ನು ಖರೀದಿಸುವ ಯೋಚನೆ ಬರುತ್ತದೆ
  • ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಸಂದರ್ಭ ಬರುತ್ತದೆ
  • ವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ: 

  • ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ
  • ಶರೀರ ಭಾಗದಲ್ಲಿ ಇದಕ್ಕಿದ್ದಂತೆ ನೋವು ಕಾಣಿಸಬಹುದು
  • ಇವತ್ತು ದೂರದ ಪ್ರಯಾಣ ಮುಂದೂಡುವುದು ಒಳ್ಳೆಯದು
  • ಹಳೆಯ ಸಾಲ ಅಥವಾ ಬಾಕಿಯಿಂದ ತೊಂದರೆ ಅವಮಾನ ಸಾಧ್ಯತೆ
  • ಇಂದು ಯಾರಿಗೂ ಯಾವುದೇ ಭರವಸೆ ನೀಡಬೇಡಿ
  • ಇಂದು ತುಂಬಾ ಆಲಸ್ಯ ಕಾಡುವ ದಿನ
  • ಧನ್ವಂತರಿಯನ್ನ ಪ್ರಾರ್ಥನೆ ಮಾಡಿ
Advertisment

ಕನ್ಯಾ

  • ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ
  • ಸಮಾಜದಲ್ಲಿ ಗೌರವ, ಪ್ರಶಸ್ತಿಗಳು ದೊರೆಯುವ ದಿನ
  • ಹೊಸ ಕೆಲಸಗಳನ್ನು ಆರಂಭಿಸಲು ಬಹಳ ಉತ್ತಮ ದಿನ
  • ವ್ಯಾಪಾರ-ವ್ಯವಹಾರಗಳಲ್ಲಿ ತುಂಬಾ ಅನುಕೂಲವಾಗುವ ದಿನ
  • ಹಳೆಯ ಆಸೆಗಳು ಇಂದು ಈಡೇರುತ್ತವೆ
  • ನಿಮ್ಮ ಕುಲದೇವತೆ ಆರಾಧನೆ ಮಾಡಿ

ತುಲಾ

  • ಧಾರ್ಮಿಕ ಕಾರ್ಯಗಳ ಬಗ್ಗೆ ಸಂಕಲ್ಪ ಮಾಡುವ ಮುನ್ನ ಹೆಚ್ಚು ಎಚ್ಚರವಹಿಸಿ
  • ಸಂಕಲ್ಪ, ಹರಕೆ ತೀರಿಸುವುದಕ್ಕೆ ಆಗದೆ ತೊಂದರೆ ಆಗುವ ಸಾಧ್ಯತೆ
  • ಬಹಳ ಯೋಚನೆ ಮಾಡಿ ಕೊಡಿ ಅನಾನುಕೂಲವಾಗುವ ಸಾಧ್ಯತೆ ಇದೆ
  • ಜನರು ನಿಮ್ಮ ಮಾತನ್ನು ತಪ್ಪಾಗಿ ತಿಳಿಯುವ ಸಾಧ್ಯತೆ ಇದ್ದು ಮಿತವಾಗಿ ಮಾತನಾಡಿ
  • ಸಂಬಂಧಿಕರು-ಸ್ನೇಹಿತರು ಹಣವನ್ನು ಅಥವಾ ವಸ್ತುವನ್ನು ಸಾಲವಾಗಿ ಕೇಳಬಹುದು
  • ಕಾರ್ತವೀರಾರ್ಜುನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಉತ್ತಮ ಸಾಧನೆಗೆ ಅವಕಾಶವಿದೆ
  • ತುಂಬಾ ಅಗತ್ಯವಿದ್ದರೆ ರಾಹುಕಾಲದ ನಂತರ ಪ್ರಯಾಣ ಮಾಡಬಹುದು
  • ವ್ಯಾಪಾರ-ವ್ಯವಹಾರದಾರರಿಗೆ ಲಾಭದ ದಿನ
  • ಹಣಕಾಸಿನ ವ್ಯವಹಾರವಿದ್ದರೆ ಮಧ್ಯಾಹ್ನದ ನಂತರ ಮಾಡಬಹುದು
  • ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಸ್ವಲ್ಪ ಮಟ್ಟಿಗೆ ಕಡಿಮೆ
  • ಹೊಸ ಸ್ನೇಹಿತರು ಸಿಗಬಹುದು
  • ಪ್ರಯಾಣವನ್ನು ನಾಳೆಗೆ ಮುಂದೂಡುವುದು ಒಳ್ಳೆಯದು
  • ಶ್ರೀ ಲಕ್ಷ್ಮಿನಾರಯಣನನ್ನು ಪ್ರಾರ್ಥನೆ ಮಾಡಿ
Advertisment

ಧನುಸ್ಸು

  • ಇವತ್ತು ವಾಹನ ಚಾಲನೆ ಮಾಡದೆ ಇದ್ದರೆ ಒಳ್ಳೆಯದು
  • ವ್ಯವಹಾರದ ದೃಷ್ಟಿಯಿಂದ ಈ ದಿನ ಚೆನ್ನಾಗಿಲ್ಲ
  • ಮಾನಸಿಕ ಬೇಸರ, ಅಸಮಾಧಾನ ಸಾಧ್ಯತೆ 
  • ಪ್ರಮುಖ ಉಪಕರಣ ಅಥವಾ ವಾಹನಕ್ಕೆ ಹಾನಿ ಸಂಭವ
  • ದುರ್ಗಾದೇವಿಯ ಪ್ರಾರ್ಥನೆ ಮಾಡಿ

ಮಕರ

  • ಈ ರಾಶಿಯವರಿಗೆ ಕೋಪ ಹೆಚ್ಚಿರುವ ಸಾಧ್ಯತೆ
  • ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡುವ ಸಂದರ್ಭ 
  • ತಮ್ಮ ಕೋಪವನ್ನು ಸ್ನೇಹಿತರ ಮನೆಯವರ ಮೇಲೆ ತೀರಿಸಬಾರದು
  • ಕಾಲಿನ ಭಾಗದಲ್ಲಿ ನೋವು ಕಾಣಿಸುವ ಸಾಧ್ಯತೆ
  • ಸಂಗಾತಿಯೊಂದಿಗೆ ಉತ್ತಮ ನಡುವಳಿಕೆಯೊಂದಿಗೆ ಇರಬೇಕು 
  • ಮೃತ್ಯುಂಜಯನನ್ನು ಪ್ರಾರ್ಥಿಸುವುದು ಒಳ್ಳೆಯದು

ಕುಂಭ

  • ಸರ್ಕಾರಿ ಕೆಲಸಗಳಲ್ಲಿ ಅಡಚಣೆ ಆಗಬಹುದು
  • ಹವಾಮಾನ ಬದಲಾವಣೆಯಿಂದ ತಲೆನೋವು ಆಲಸ್ಯ 
  • ಅಧ್ಯಯನ-ಧ್ಯಾನಕ್ಕೆ ಶರೀರ ಅನುಮತಿ ಕೊಡುವುದಿಲ್ಲ
  • ಪ್ರೇಮಿಗಳು ಉತ್ಸುಕರಾಗಿರುವ ದಿನ
  • ವಿದ್ಯಾರ್ಥಿಗಳು ಬಲವಂತವಾಗಿ ಅಭ್ಯಾಸ ಮಾಡಬೇಕಾದ ದಿನ
  • ಸರಸ್ವತಿಯ ಪ್ರಾರ್ಥನೆ ಮಾಡಬೇಕು
Advertisment

ಮೀನ

  • ಸ್ವಂತ ಕೆಲಸಗಳಿದ್ದರೆ ಅದನ್ನು ಮಾಡಿಕೊಳ್ಳಬಹುದು
  • ಇಂದು ಮನೆಗೆ ದಿಢೀರಂತ ಅತಿಥಿಗಳ ಆಗಮನ ಸಾಧ್ಯತೆ  
  • ಮೇಲಾಧಿಕಾರಿಗಳಿಂದ ಉದ್ಯೋಗಿಗಳಿಗೆ ಒತ್ತಡ ಇರುವುದಿಲ್ಲ
  • ಇಂದು ನಿಮ್ಮ ಜವಾಬ್ದಾರಿಗಳಿಗೆ ಬದ್ಧರಾಗಿರಬೇಕು
  • ಹಿರಿಯರ ಆಶೀರ್ವಾದ ಮಾರ್ಗದರ್ಶನ ಪಡೆಯುತ್ತೀರಿ
  • ಟುಂಬದ ಸದಸ್ಯರೊಂದಿಗೆ ಸಂತೋಷದ ಸಮಯ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಇದನ್ನೂ ಓದಿ:ತೆಲಂಗಾಣದಲ್ಲಿ ಸರ್ಕಾರಿ ಇಂಜಿನಿಯರ್ ಗಳಿಗೆ ತಿಂಗಳಿಗೆ 7 ಲಕ್ಷ ರೂ. ಸಂಬಳ, ಸ್ವಿಪರ್ ಗಳಿಗೆ ತಿಂಗಳಿಗೆ 2 ಲಕ್ಷ ಸಂಬಳ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Horoscope Rashi Bhavishya
Advertisment
Advertisment
Advertisment