/newsfirstlive-kannada/media/media_files/2025/09/24/team-india-16-2025-09-24-09-32-33.jpg)
ಏಷ್ಯಾಕಪ್​​ನಲ್ಲಿ ಇವತ್ತು ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿ ಆಗಲಿವೆ. ಇವತ್ತಿನ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ. ವಿಜೇತ ತಂಡಕ್ಕೆ ಫೈನಲ್ ತಲುಪುವ ಅವಕಾಶವಿದೆ. ಹೀಗಿರುವಾಗ ಬಾಂಗ್ಲಾದೇಶಕ್ಕೆ ಪಂದ್ಯಕ್ಕೂ ಮುನ್ನವೇ ದೊಡ್ಡ ಹಿನ್ನಡೆ ಆಗಿದೆ.
ಬಾಂಗ್ಲಾದೇಶ ತಂಡದ ನಾಯಕ ಲಿಟನ್ ದಾಸ್ (Litton Das) ಗಾಯಗೊಂಡಿದ್ದಾರೆ. ಐಸಿಸಿ ಅಕಾಡೆಮಿ ಮೈದಾನದಲ್ಲಿ ಪ್ರ್ಯಾಕ್ಟಿಸ್ ಮಾಡ್ತಿದ್ದಾಗ ಗಾಯಗೊಂಡಿದ್ದಾರೆ. ಬ್ಯಾಟಿಂಗ್ ವೇಳೆ ಸ್ನಾಯು ನೋವಿನಿಂದ ಕುಸಿದು ಬಿದ್ದಿದ್ದಾರೆ. ನಂತರ ಅಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ವಾಪಸ್ ಆಗಿದ್ದಾರೆ.
ಇವತ್ತು ಆಡ್ತಾರಾ?
ಲಿಟನ್ ದಾಸ್ ಗಾಯದ ತೀವ್ರತೆ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಭಾರತದ ವಿರುದ್ಧದ ಪಂದ್ಯದಲ್ಲಿ ಲಿಟನ್ ದಾಸ್ ಆಡಲು ಸಾಧ್ಯವಾಗುತ್ತದೆಯೇ? ಎಂಬ ಪ್ರಶ್ನೆ ಇತ್ತು. ಮುಂದಿನ ಪಂದ್ಯಕ್ಕೆ ಲಿಟನ್ ದಾಸ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಬಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಏಷ್ಯಾ ಕಪ್‌ನಲ್ಲಿ ಲಿಟನ್ ದಾಸ್ 29.75 ರ ಸರಾಸರಿಯಲ್ಲಿ 119 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 129.34. ಅವರು ಬಾಂಗ್ಲಾ ತಂಡಕ್ಕೆ ನಾಯಕ ಮತ್ತು ವಿಕೆಟ್ ಕೀಪರ್ ಆಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ