/newsfirstlive-kannada/media/media_files/2025/09/24/abrar-ahmed-2025-09-24-08-42-56.jpg)
ಏಷ್ಯಾಕಪ್​​ನಲ್ಲಿ ನಿನ್ನೆ ಪಾಕಿಸ್ತಾನ ಹಾಗೂ ಶ್ರೀಲಂಕಾ (Pakistan vs Sri Lanka) ನಡುವೆ ಪಂದ್ಯ ನಡೆಯಿತು. ಪಾಕ್ ಆಟಗಾರ ಅಬ್ರಾರ್ ಅಹ್ಮದ್ (Abrar Ahmed) ಬೌಲಿಂಗ್‌ನಲ್ಲಿ ವನಿಂದು ಹಸರಂಗ (Wanindu Hasaranga) ಬೌಲ್ಡ್ ಆದರು. ವಿಕೆಟ್ ಪಡೆದ ನಂತರ ಅಬ್ರಾರ್, ಹಸರಂಗ ಅವರ ವಿಕೆಟ್ ಸೆಲೆಬ್ರೇಷನ್ ಅನುಕರಿಸಿದ.
ಔಟ್ ಆಗ್ತಿದ್ದಂತೆಯೇ ‘ಹಸರಂಗ ಟ್ರೇಡ್​ ಮಾರ್ಕ್ ಸೆಲೆಬ್ರೇಷನ್’ ನಕಲಿ ಮಾಡಿ ಗೇಲಿ ಮಾಡಿದ್ದ ಪಾಕಿಸ್ತಾನಿ ಅಬ್ರಾರ್​ ಅಹ್ಮದ್. ಪಾಕಿಸ್ತಾನಿಯ ಈ ಅಹಂಕಾರಕ್ಕೆ ಹಸರಂಗ ಅವರ ಭಾಷೆಯಲ್ಲೇ ಉತ್ತರ ಕೊಟ್ಟಿದ್ದಾರೆ. ಇದು ಅಬ್ರಾರ್ ಅಹ್ಮದ್​​ಗೆ ಮಾತ್ರವಲ್ಲ, ಇಡೀ ಪಾಕಿಸ್ತಾನಿ ತಂಡಕ್ಕೇ ಭಾರೀ ಮುಖಭಂಗವಾಗಿದೆ. ಆ್ಯಕ್ಷನ್ ಹಾಗೂ ರಿಯಾಕ್ಷನ್ ಸಖತ್ತಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.
ಇದನ್ನೂ ಓದಿ:ಸಾಕಿ ಬೆಳೆಸಿದ ಒಡೆಯನ ಕತ್ತು ಸೀಳಿದ ಹುಲಿ! ಆಘಾತಕಾರಿ ಸುದ್ದಿ
ಹಸರಂಗ ಔಟ್ ಆದಾಗ, ಅಬ್ರಾರ್​​ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಔಟ್ ಆಗ್ತಿದ್ದಂತೆಯೇ ಬೇಸರದಿಂದ ಪೆವಿಲಿಯನ್​ಗೆ ಬಂದರು. ಬೆನ್ನಲ್ಲೇ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆ ಸಮಯದಲ್ಲಿ ಹಸರಂಗ ಏನನ್ನೂ ಹೇಳದಿದ್ದರೂ, ಸಮಯ ಬಂದಾಗ ಸೇಡು ತೀರಿಸಿಕೊಂಡರು.
ಹಸರಂಗ ಬೌಲಿಂಗ್ ಮೂಲಕ ಪ್ರತೀಕಾರ ತೀರಿಸಿಕೊಂಡರು. ಫಖರ್ ಜಮಾನ್ ಅವರ ಅದ್ಭುತ ಕ್ಯಾಚ್ ಹಿಡಿದು ಪೆವಿಲಿಯನ್​​ಗೆ ಕಳುಹಿಸಿದರು. ಜೊತೆಗೆ ಸೈಮ್ ಅಯೂಬ್ ಮತ್ತು ಸಲ್ಮಾನ್ ಅಲಿ ಅಘಾ ವಿಕೆಟ್ ಪಡೆದರು. ಈ ಮೂರು ಬಾರಿಯೂ ಅಬ್ರಾರ್ ವಿಕೆಟ್ ಸೆಲೆಬ್ರೇಷನ್​​ ಅನ್ನು ನಕಲಿಸಿದ್ದಾರೆ. ಆಗ ಕ್ಯಾಮೆರಾ ನೇರವಾಗಿ ಅಬ್ರಾರ್ ಅವರ ಮುಖಕ್ಕೆ ತಿರುಗಿಸಲಾಗಿದೆ. ಅದರ ಹೊರತಾಗಿಯೂ ನಿನ್ನೆ ಶ್ರೀಲಂಕಾ ಸೋಲುವ ಮೂಲಕ, ಏಷ್ಯಾಕಪ್​ ಫೈನಲ್ ಕನಸನ್ನು ಕೈಬಿಟ್ಟಿದೆ. ಆದರೆ ಅಧಿಕೃತವಾಗಿ ಹೊರಬಿದ್ದಿಲ್ಲ.
ಕಳೆದ ಭಾನುವಾರ ಪಾಕಿಸ್ತಾನಿ ಆಟಗಾರರು ಮೈದಾನದಲ್ಲಿ ಭಾರತದ ವಿರುದ್ಧ ಕೆಟ್ಟದಾಗಿ ವರ್ತಿಸಿದರು. ತಮ್ಮ ಬಾಲೀಶ ಆಟವನ್ನು ಶ್ರೀಲಂಕ ವಿರುದ್ಧವೂ ಮುಂದುವರಿಸಿದರು. ಅದಕ್ಕೆ ಭಾರತೀಯ ಆಟಗಾರರಂತೆಯೇ, ಶ್ರೀಲಂಕಾದ ಆಟಗಾರರು ಬಲವಾಗಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ:ಈ ಒಂದು ಬಲವಾದ ಕಾರಣಕ್ಕಾಗಿ ಬಾಂಗ್ಲಾ ವಿರುದ್ಧ ಟೀಮ್ ಇಂಡಿಯಾ ಇಂದು ಗೆಲ್ಲಲೇಬೇಕಿದೆ..!
The wicket 🗿
— Sony Sports Network (@SonySportsNetwk) September 23, 2025
The celebration 🗿🗿🗿
Wanindu Hasaranga is giving it back with interest 🔥
Watch #PAKvSL LIVE NOW on the Sony Sports Network TV channels & Sony LIV.#SonySportsNetwork#DPWorldAsiaCup2025pic.twitter.com/sKVxNygeBK
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ