ಕೆಲವೇ ಹೊತ್ತಲ್ಲಿ ಡಚ್ಚರ ವಿರುದ್ಧ ಕಾಳಗ.. ಸೂರ್ಯಪಡೆಯ ಲೆಕ್ಕಾಚಾರ ಹೆಂಗಿದೆ..?

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣ ಭಾರತ-ನದರ್​ಲೆಂಡ್ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿದೆ. ಈಗಾಗಲೇ ಸೂಪರ್ 8 ಹಂತಕ್ಕೆ ಎಂಟ್ರಿ ಕೊಟ್ಟಿರುವ ಸೂರ್ಯಕುಮಾರ್ ಯಾದವ್ ಪಡೆ ವಿಶ್ವಕಪ್​ನಲ್ಲಿ ಗೆಲುವಿನ ಓಟ ಮುಂದುವರೆಸಲು ಹೊರಟಿದೆ.

author-image
Ganesh Kerekuli
team india (22)
Advertisment
  • ಡಚ್ಚರಿಗೆ ಡಿಚ್ಚಿ ಕೊಡ್ತಾರಾ ಅಭಿಷೇಕ್​ ಶರ್ಮಾ..?
  • ಇಶಾನ್ ಕಿಶನ್ ಅಬ್ಬರ ಮುಂದುವರೆಯುತ್ತಾ..?
  • ಟೀಮ್ ಇಂಡಿಯಾಕ್ಕಿದೆ ಬಲಿಷ್ಟ ಮಿಡಲ್ ಆರ್ಡರ್..!

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣ ಭಾರತ-ನದರ್​ಲೆಂಡ್ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿದೆ. ಈಗಾಗಲೇ ಸೂಪರ್ 8 ಹಂತಕ್ಕೆ ಎಂಟ್ರಿ ಕೊಟ್ಟಿರುವ ಸೂರ್ಯಕುಮಾರ್ ಯಾದವ್ ಪಡೆ ವಿಶ್ವಕಪ್​ನಲ್ಲಿ ಗೆಲುವಿನ ಓಟ ಮುಂದುವರೆಸಲು ಹೊರಟಿದೆ. ಮತ್ತೊಂದೆಡೆ ಡಚ್ ತಂಡ, ಬಲಿಷ್ಟ ಟೀಮ್ ಇಂಡಿಯಾಕ್ಕೆ ಟಫ್ ಫೈಟ್ ನೀಡುವ ಲೆಕ್ಕಾಚಾರದಲ್ಲಿದೆ. 

ಪಾಕಿಸ್ತಾನ ಮತ್ತು ನಮೀಬಿಯಾ ತಂಡಗಳಿಗೆ ಟಫ್ ಫೈಟ್ ನೀಡಿರುವ ನದರ್​ಲೆಂಡ್, ಇಂದು ನಮೋ ಮೈದಾನದಲ್ಲಿ ಬಲಿಷ್ಟ ಟೀಮ್ ಇಂಡಿಯಾ ವಿರುದ್ಧ ಸೆಣಸಲಿದೆ. ಟೂರ್ನಿಯಲ್ಲಿ ಆಡಿರೋ 3 ಪಂದ್ಯಗಳಲ್ಲಿ ಒಂದೇ ಒಂದು ಸೋಲು ಕಾಣದ ಸೂರ್ಯಕುಮಾರ್ ಯಾದವ್ ಪಡೆ ನೆದರ್​ಲೆಂಡ್ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದೆ. 

ಇದನ್ನೂ ಓದಿ: ಭಾರತಕ್ಕೆ ಯಾವಾಗ ಬರುತ್ತೇನೆ ಎಂದು ಹೇಳುವ ಸ್ಥಿತಿಯಲ್ಲಿಲ್ಲ- ಬಾಂಬೆ ಹೈಕೋರ್ಟ್ ಗೆ ತಿಳಿಸಿದ ಉದ್ಯಮಿ ವಿಜಯ ಮಲ್ಯ

ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್.. ಮೂರೂ ವಿಭಾಗಗಳಲ್ಲೂ ಸ್ಟ್ರಾಂಗ್ ಆಗಿರುವ ಟೀಮ್ ಇಂಡಿಯಾ, ಸೂಪರ್ 8 ಹಂತಕ್ಕೂ ಮುನ್ನ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಬೇಕಿದೆ. ಅದಕ್ಕೇ ಇಂದಿನ ಪಂದ್ಯದಲ್ಲೇ ಪ್ರಿಪರೇಶನ್​ಗೆ ಅವಕಾಶವಾಗಿದೆ​!

ಡಚ್ಚರಿಗೆ ಡಿಚ್ಚಿ ಕೊಡ್ತಾರಾ ಅಭಿಷೇಕ್​ ಶರ್ಮಾ?

ಪಾಕ್ ವಿರುದ್ಧ ಅಭಿಷೇಕ್ ಶರ್ಮಾ ಮಂಕಾದ್ರು. ಮೊದಲ ಓವರ್​ನಲ್ಲೇ ವಿಕೆಟ್ ಒಪ್ಪಿಸಿದ ಅಭಿಷೇಕ್, ರನ್ ಅಕೌಟ್ ಓಪನ್ ಮಾಡ್ಲೇ ಇಲ್ಲ. ಆದ್ರೆ ಇಂದು ಅಹ್ಮದಾಬದ್​ನಲ್ಲಿ ಡಚ್ಚರಿಗೆ ಡಿಚ್ಚಿ ಕೊಡಲು ರೆಡಿಯಾಗಿದ್ದಾರೆ.

ಆರಂಭಿಕ ಇಶಾನ್ ಕಿಶನ್, ಸದ್ಯ ಸಾಲಿಡ್ ಫಾರ್ಮ್​ನಲ್ಲಿ ಬ್ಯಾಟಿಂಗ್ ನಡೆಸ್ತಿದ್ದಾರೆ. ನಮೀಬಿಯಾ ಮತ್ತು ಪಾಕ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿರುವ ಕಿಶನ್, ನದರ್​ಲೆಂಡ್ ವಿರುದ್ಧವೂ ಅಬ್ಬರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆಯನ್ನ ಒಳಗೊಂಡ ಟೀಮ್ ಇಂಡಿಯಾ ಮಿಡಲ್ ಆರ್ಡರ್ ಬ್ಯಾಟಿಂಗ್, ಸಖತ್ ಸ್ಟ್ರಾಂಗ್ ಆಗಿದೆ. ಪ್ರತಿ ಪಂದ್ಯದಲ್ಲೂ ಒಬ್ಬರಲ್ಲ ಒಬ್ಬರು, ಕಾಂಟ್ರಿಬ್ಯೂಟ್ ಮಾಡ್ತಿದ್ದಾರೆ. ಇದೇ ಸ್ಕೈ ಪಡೆಯ ಬ್ಯಾಟಿಂಗ್ ಬಲ ಹೆಚ್ಚಿಸಿರೋದು.
ಟೀಮ್ ಇಂಡಿಯಾ ಬೌಲಿಂಗ್ ಅಟ್ಯಾಕ್, ಎಕ್ಸ್ಟ್ರಾರ್ಡಿನರಿಯಾಗಿದೆ. ಜಸ್ಪ್ರೀತ್ ಬೂಮ್ರಾ ಸಾರಥ್ಯದ ಬೌಲಿಂಗ್ ವಿಭಾಗದಲ್ಲಿ ಸದ್ಯ ಅಂತದ್ದೇನು ಲೂಪ್ ಹೋಲ್ಸ್​ ಕಾಣ್ತಿಲ್ಲ. ಇದು ನಾಯಕ ಸೂರ್ಯ ಟನ್ಶನ್ ಕಡಿಮೆ ಮಾಡಿದೆ. ಆದ್ರೂ ಸೂಪರ್​ 8​ಗೂ ಮುನ್ನ, ಸಣ್ಣಪುಟ್ಟ ತಪ್ಪುಗಳನ್ನ ಸರಿ ಪಡಿಸಿಕೊಳ್ಳಬೇಕಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿರಿಯಾನಿ ತಿನ್ನುವ ಮುನ್ನ ಹುಷಾರ್‌- ಸ್ಟಾರ್‌ ಅಂಬೂರ್ ಧಮ್ ಬಿರಿಯಾನಿ ಹೋಟೇಲ್ ನಲ್ಲಿ ಕೊಳೆತ ಚಿಕನ್ ಪತ್ತೆ!!

ನೆದರ್​ಲೆಂಡ್ ತಂಡವನ್ನ ಟೀಮ್ ಇಂಡಿಯಾ ಲಘುವಾಗಿ ಪರಿಗಣಿಸಿಲ್ಲ. ಡಚ್ಚರ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿರುವ ಟೀಮ್ ಇಂಡಿಯಾ, ಸೂಪರ್​ 8 ಎಂಟ್ರಿಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಹಾಗಾಗಿ ಗೆಲುವಿನೊಂದಿಗೆ ಮಹತ್ವದ ಘಟಕ್ಕೆ ಎಂಟ್ರಿ ಕೊಡಲು ಸೂರ್ಯಕುಮಾರ್ ಯಾದವ್ ಪಡೆ ಮುಂದಾಗಿದೆ.

ಡಚ್ ತಂಡ ಅಂದುಕೊಂಡಂತೆ ದುರ್ಬಲವಾಗಿಲ್ಲ. ತಂಡದಲ್ಲಿ ಕ್ವಾಲಿಟಿ ಆಲ್​ರೌಂಡರ್ಸ್​ ಮತ್ತು ಬಿಗ್ ಮ್ಯಾಚ್​ ವಿನ್ನರ್​ಗಳಿದ್ದಾರೆ. ಬಾಸ್ ಡಿ ಲೀಡ್, ಕಾಲಿನ್ ಆಕರ್​ಮೆನ್, ಸ್ಕಾಟ್ ಎಡ್ವರ್ಡ್ಸ್​, ವ್ಯಾಂಡರ್ ಮರ್ವ್​ರಂತಹ ಟಿ-20 ಸ್ಪೆಷಲಿಸ್ಟ್​ಗಳ ಬಲ ಡಚ್​ ತಂಡಕ್ಕಿದೆ. ಒಟ್ನಲ್ಲಿ.. ಪ್ರಸಕ್ತ ಟಿ-20 ವಿಶ್ವಕಪ್​ನಲ್ಲಿ ಐಸಿಸಿ ಅಸೋಸಿಯೇಟ್​ ನೇಷನ್ಸ್ ಬಲಿಷ್ಟ ತಂಡಗಳಿಗೆ ಟಫ್ ಫೈಟ್​​ ನೀಡಿವೆ. ಹಾಗಾಗಿ ಡಚ್ ತಂಡ ಇಂದು ಟೀಮ್ ಇಂಡಿಯಾಗೆ ಟಫ್ ಫೈಟ್​​​​​​​​​​​​​ ನೀಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ಸಾಮಾಜಿಕ ಮನ್ನಣೆಯ ಒತ್ತಡಕ್ಕಾಗಿ ಮದುವೆಯಾದೆ- ನಟಿ ನೀನಾ ಗುಪ್ತಾರಿಂದ ಪ್ರಾಮಾಣಿಕ ಹೇಳಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

T20 world cup India vs Netherlands
Advertisment