/newsfirstlive-kannada/media/media_files/2025/09/10/surya_kumar_bumrha-2025-09-10-21-41-36.jpg)
ಏಷ್ಯಾಕಪ್ ಟೂರ್ನಿಯ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್​ ಮಾರಕ ದಾಳಿಗೆ ಯುಎಇ ತಂಡದ ಆಟಗಾರರು ಕೇವಲ 57 ರನ್​ಗೆ ಆಲೌಟ್ ಆಗಿ ಕೆಟ್ಟ ದಾಖಲೆ ಬರೆದಿದ್ದಾರೆ. ಭಾರತದ ಪರ ಕುಲ್​ದೀಪ್ ಯಾದವ್ ಅವರ ಸ್ಪಿನ್ ಮ್ಯಾಜಿಕ್​ ಹಾಗೂ ಶಿವಂ ದುಬೆಯ ಬೌಲಿಂಗ್​ ದಾಳಿಗೆ ಯುಎಇ ಆಟಗಾರರು ಪೆವಿಲಿಯನ್ ಪೆರೇಡ್ ನಡೆಸಿದರು.
ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಏಷ್ಯಾ ಕಪ್​ ಟೂರ್ನಿಯ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಯುಇಎ ಟೀಮ್ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿತ್ತು. ಅದರಂತೆ ಬ್ಯಾಟಿಂಗ್​ಗೆ ಬಂದ ಯುಎಇ ತಂಡ ಓಪನರ್ಸ್ ಕೆಲ ಸಮಯ ಆಡಿದರು.
/filters:format(webp)/newsfirstlive-kannada/media/media_files/2025/09/10/varun_chakravarty-2025-09-10-21-42-38.jpg)
ಓಪನರ್​ಗಳಾದ ಅಲಿಶನ್ ಶರಾಫು 22, ನಾಯಕ ಮುಹಮ್ಮದ್ ವಸೀಮ್ 19 ರನ್ ಗಳಿಸಿದರು. ಇವರಷ್ಟೇ ತಂಡದಲ್ಲಿ ಹೆಚ್ಚು ರನ್​ ಬಾರಿಸಿದ ಬ್ಯಾಟ್ಸ್​ಮನ್​ಗಳು ಆಗಿದ್ದಾರೆ. ಉಳಿದೆಲ್ಲ ಬ್ಯಾಟ್ಸ್​ಮನ್​ಗಳು ಕೇವಲ 3 ರನ್​ಗಳ ಗಡಿ ಕೂಡ ದಾಟಲಿಲ್ಲ. ಒಬ್ಬರು ಡಕೌಟ್ ಆದರೆ, ಮೂವರು 1 ರನ್​ಗೆ ವಿಕೆಟ್ ಒಪ್ಪಿಸಿದ್ದಾರೆ. 4 ಬ್ಯಾಟರ್​ಗಳು 2 ರನ್​ಗೆ ಔಟ್ ಆದ್ರೆ, ರಾಹುಲ್ ಚೋಪ್ರಾ 3 ರನ್​​ಗೆ ಔಟ್ ಆಗಿದ್ದಾರೆ. ಹೀಗಾಗಿ ಯುಎಇ ತಂಡ ಕೇವಲ 13.1 ಓವರ್​ಗಳಲ್ಲಿ 57 ರನ್​ಗೆ ಆಟ ಮುಗಿಸಿತು.
ಟೀಮ್ ಇಂಡಿಯಾ ಪರ ಸ್ಪಿನ್ ಮ್ಯಾಜಿಕ್ ಮಾಡಿದ ಕುಲ್​ದೀಪ್ ಯಾದವ್ ಹಾಗೂ ವೇಗಿ ಶಿವಂ ದುಬೆ ವಿಕೆಟ್​ಗಳನ್ನು ಪಡೆದು ಸಂಭ್ರಮಿಸಿದರು. ಕುಲ್​ದೀಪ್ ಯಾದವ್ 4 ಹಾಗೂ ಶಿವಂ ದುಬೆ 3 ವಿಕೆಟ್​ ಕಬಳಿಸಿದ್ದಾರೆ. ಉಳಿದಂತೆ ಬೂಮ್ರಾ, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್​ ಪಡೆದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us