ವೈಭವ್ ಸೂರ್ಯವಂಶಿನ ಬೆಂಗಳೂರಿಗೆ ಕರೆಸಿಕೊಂಡಿದ್ದು ಯಾಕೆ.. ಇದರ ಹಿಂದಿದೆ ಬಿಗ್ ಪ್ಲಾನ್!

ವೈಭವ್ ಸೂರ್ಯವಂಶಿ, ವಿಶ್ವ ಕ್ರಿಕೆಟ್‌ ಲೋಕದಲ್ಲಿ ಸೂರ್ಯನಂತೆ ಪ್ರಜ್ವಲಿಸುತ್ತಿರುವ ಹೆಸರು. ವಯಸ್ಸು ಹದಿನಾಲ್ಕು ಆದರೂ, ಈತನ ಬ್ಯಾಟಿಂಗ್ ಮೆಚ್ಯುರಿಟಿ, ಫಿಯರ್ ಲೆಸ್ ಆಟ ಮಾತ್ರ ನೆಕ್ಟ್​ ಲೆವೆಲ್​.

author-image
Bhimappa
Vaibhav_Suryavanshi_Batting
Advertisment

ಒಂದ್ಕಡೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯ ಭವಿಷ್ಯ ಅಂತತ್ರದಲ್ಲಿದೆ. ಇದೇ ವೇಳೆ ಬಿಸಿಸಿಐ ನೆಕ್ಸ್ಟ್​ ಜನರೇಷನ್ ಕ್ರಿಕೆಟ್​​​ರ್ಸ್​ನ ರೆಡಿ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲೇ ವೈಭವ್ ಸೂರ್ಯವಂಶಿಗೆ ಸ್ಪೆಷಲ್ ಟ್ರೈನಿಂಗ್ ನೀಡ್ತಿದೆ. ಆದ್ರೆ, ಇದೇ ಸ್ಪೆಷಲ್ ಟ್ರೈನಿಂಗ್, ರೋಹಿತ್ ಹಾಗೂ ಕೊಹ್ಲಿಗೆ ಪರ್ಯಾಯವಾಗಿ ಬೆಳೆಸುವ ಉದ್ದೇಶವಾ ಎಂಬ ಪ್ರಶ್ನೆ ಹುಟ್ಟಿಹಾಕಿದೆ. ಅದ್ಯಾಕೆ.

ವೈಭವ್ ಸೂರ್ಯವಂಶಿ, ವಿಶ್ವ ಕ್ರಿಕೆಟ್‌ ಲೋಕದಲ್ಲಿ ಸೂರ್ಯನಂತೆ ಪ್ರಜ್ವಲಿಸುತ್ತಿರುವ ಹೆಸರು. ವಯಸ್ಸು ಹದಿನಾಲ್ಕಾದ್ರೂ, ಈತನ ಬ್ಯಾಟಿಂಗ್ ಮೆಚ್ಯುರಿಟಿ, ಫಿಯರ್ ಲೆಸ್ ಆಟ ಮಾತ್ರ ನೆಕ್ಟ್​ ಲೆವೆಲ್​. ಈತವ ವಯಸ್ಸಿಗೂ ಈತನ ಆಟಕ್ಕೂ ಹೋಲಿಕೆಯೇ ಇಲ್ಲ. ಅಬ್ಬರಿಸಿ ಬೊಬ್ಬಿರಿಯೋ ವೈಭವ್ ಸೂರ್ಯವಂಶಿ, ಟೀಮ್ ಇಂಡಿಯಾ ಎಂಟ್ರಿಗೆ ರೆಡಿಯಾಗ್ತಿದ್ದಾರೆ. 

Vaibhav_Suryavanshi (1)

ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ವೈಭವ್ ಸ್ಪೆಷಲ್​​ ಟ್ರೈನಿಂಗ್..!

ಡೊಮೆಸ್ಟಿಕ್ ಕ್ರಿಕೆಟ್, ಐಪಿಎಲ್​, ಅಂಡರ್-19.. ಇಂಗ್ಲೆಂಡ್​​ ಅಂಡರ್​-19 ಟೂರ್​ನಲ್ಲಿ ಸೂರ್ಯವಂಶಿ ಮಿಂಚಿದ್ದಾರೆ. ಸಿಕ್ಕ ಅವಕಾಶಗಳಲ್ಲಿ ತಾನೇನು ಅನ್ನೋದನ್ನು  ಫ್ರೂವ್ ಮಾಡಿರುವ ವೈಭವ್ ಸೂರ್ಯವಂಶಿ, ಈಗ ಆಸ್ಟ್ರೇಲಿಯಾ ಎ ಪ್ರವಾಸಕ್ಕೂ ಆಯ್ಕೆ ಆಗಿದ್ದಾರೆ. ಈ ಪ್ರವಾಸದ ಆರಂಭಕ್ಕೂ ಮುನ್ನ ಬಿಸಿಸಿಐ ಯುವ ಆಟಗಾರನನ್ನ ಎನ್​ಸಿಎಗೆ ಕರೆಸಿಕೊಂಡಿದೆ. ಇಲ್ಲಿ ವೈಭವ್ ಸೂರ್ಯವಂಶಿಗೆ ಕೆಲ ನಿರ್ದಿಷ್ಟ ತರಬೇತಿ ನೀಡಲಾಗ್ತಿದೆ. ಸ್ಪೆಷಲ್ ಟ್ರೈನಿಂಗ್ ನೀಡ್ತಿರುವ ಬಿಸಿಸಿಐ, ಟೆಕ್ನಿಕಲಿ ಮತ್ತಷ್ಟು ಸಜ್ಜುಗೊಳಿಸುತ್ತಿದೆ. ವೈಭವ್ ಸೂರ್ಯವಂಶಿಯನ್ನ ಬೆಂಗಳೂರಿಗೆ ಕರೆಸಿಕೊಂಡು ಹೀಗೆ ಟ್ರೈನ್​ ಮಾಡ್ತಿರೋದ್ರ ಹಿಂದೆ ಭಾರೀ ಲೆಕ್ಕಾಚಾರವೇ ಅಡಗಿದೆ. 

ಬಿಸಿಸಿಐ & ಸೆಲೆಕ್ಟರ್ಸ್ ಪ್ಲಾನ್ ಏನು..?

  • ಟೀಮ್ ಇಂಡಿಯಾ ಭವಿಷ್ಯದತ್ತ ಬಿಸಿಸಿಐ & ಸೆಲೆಕ್ಟರ್ಸ್ ಚಿತ್ತ 
  • ನಿವೃತ್ತಿಯ ಅಂಚಿನಲ್ಲಿದ್ದಾರೆ ಹಿರಿಯ ಆಟಗಾರರು
  • ಹಿರಿಯರಿಗೆ ಪರ್ಯಾಯವಾಗಿ ಬೆಳಸುವ ಲೆಕ್ಕಾಚಾರ
  • ಹಿರಿಯರ ನಿವೃತ್ತಿ ವೇಳೆಗೆ ಯುವ ಪಡೆಯನ್ನ ಕಟ್ಟುವುದು
  • ಯುವ ಆಟಗಾರರ ಕೌಶಲ್ಯ, ಫಿಟ್ನೆಸ್​​ ಹೆಚ್ಚಿಸುವುದು
  • ಇಂಟರ್​​ನ್ಯಾಷನಲ್​ ಲೆವೆಲ್​​ಗೆ ಸಜ್ಜುಗೊಳಿಸುವುದು
  • ಹಿರಿಯರ ಅನುಪಸ್ಥಿತಿ ಕಾಡದಂತೆ ನೋಡುಕೊಳ್ಳುವುದು

ಇದೇ ವಿಚಾರವಾಗಿಯೇ ವೈಭವ್ ಸೂರ್ಯವಂಶಿ ಬಾಲ್ಯದ ಕೋಚ್ ಮನೀಶ್ ಓಜಾ ಮಾತನಾಡಿದ್ದಾರೆ. ಈ ಕ್ಯಾಂಪ್​ನಿಂದ ವೈಭವ್ ಸೂರ್ಯವಂಶಿಗೆ ಯಾವ ರೀತಿಯ ಲಾಭವಾಗುತ್ತೆ ಅನ್ನೋದನ್ನ ವಿವರಿಸಿದ್ದಾರೆ. 

ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಹಾಯ

ವೈಭವ್ ಸೂರ್ಯವಂಶಿ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವಾಡುವ ಆಟಗಾರ. ಇದು ಟಿ20 ಕ್ರಿಕೆಟ್‌, ಏಕದಿನ ಕ್ರಿಕೆಟ್​​ಗೆ ಉತ್ತಮ. ಅವರ ಬ್ಯಾಟಿಂಗ್‌ ನಾವೆಲ್ಲಾ ಐಪಿಎಲ್‌, ಅಂಡರ್-19, ವಿಜಯ್ ಹಜಾರೆ ಟೂರ್ನಿಯಲ್ಲಿ ನೋಡಿದ್ದೇವೆ. ಲಾಂಗರ್ ಫಾರ್ಮೆಟ್‌ಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಈ ಕ್ಯಾಂಪ್‌ನ ಗುರಿಗಳಲ್ಲೊಂದು. ವೈಭವ್, ತಮ್ಮ ವೃತ್ತಿ ಬದುಕಿನ ನಿರ್ಣಾಯಕ ಘಟ್ಟದಲ್ಲಿದ್ದು, ಸ್ಥಿರ ಪ್ರದರ್ಶನದತ್ತ ಗಮನ ಹರಿಸಬೇಕಿದೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಬೇಕಾದ ಸಿದ್ಧತೆ, ಮಾಡಿಕೊಳ್ಳಲು ಈ ಕ್ಯಾಂಪ್ ಸಹಾಯಕವಾಗಲಿದೆ.

ಮನೀಶ್ ಓಜಾ, ವೈಭವ್ ಬಾಲ್ಯದ ಕೋಚ್

ಟೀಮ್ ಇಂಡಿಯಾದಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ‌ಸಿಗುತ್ತಾ..?

ಸದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುತ್ತೋ ಇಲ್ವೋ.. ಆದ್ರೆ, ಖಂಡಿತ ಟೀಮ್ ಇಂಡಿಯಾ ಫ್ಯೂಚರ್​ ಎಂಬ ಸಂದೇಶವನ್ನ ವೈಭವ್ ನೀಡಿದ್ದಾರೆ. ಐಪಿಎಲ್​​ನಲ್ಲಿ ಘಟಾನುಘಟಿ ಬೌಲರ್​ಗಳನ್ನ ಬೆಂಡೆತ್ತಿದ್ದ ವೈಭವ್ ಸೂರ್ಯವಂಶಿ, ಇಂಗ್ಲೆಂಡ್​ನಂಥ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಟ್ರ್ಯಾಕ್​​ನಲ್ಲೂ ವಿಸ್ಪೋಟಕ ಬ್ಯಾಟಿಂಗ್ ನಡೆಸಿದ್ದಾರೆ. ಬೌಂಡರಿ, ಸಿಕ್ಸರ್​ಗಳ ಸುರಿಮಳೆ ಗೈದಿದ್ದಾರೆ. ಆ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ನಾನು ಆಡಬಲ್ಲೆ ಅನ್ನೋದನ್ನ ತೋರಿಸಿದ್ದಾರೆ. ಹೀಗಾಗಿಯೇ ವೈಭವ್ ಮೇಲೆ ವಿಶೇಷ ಒಲವು ಹೊಂದಿರುವ ಬಿಸಿಸಿಐ, ಅಂತರಾಷ್ಟ್ರೀಯ ಕ್ರಿಕೆಟ್ ಲೆವೆಲ್​​ಗೆ ಸಜ್ಜುಗೊಳಿಸ್ತಿದೆ.

ಇದನ್ನೂ ಓದಿ:ಪಾಕ್ ಜೊತೆ ಭಾರತ ಕ್ರಿಕೆಟ್ ಆಡಬಾರದು.. ರಕ್ತ, ನೀರು ಒಟ್ಟಿಗೆ ಹರಿಯಲ್ಲ, ದೇಶ ಮೊದಲು- ಮಾಜಿ ಆಟಗಾರ!

Suryavanshi

T20 ವಿಶ್ವಕಪ್​​​ಗೆ ವೈಭವ್ ಸೂರ್ಯವಂಶಿನಾ ರೆಡಿ ಮಾಡ್ತಿದ್ದಾರಾ..?

ಟಿ20 ಫಾರ್ಮೆಟ್​ಗೆ ವೈಭವ್ ಸೂರ್ಯವಂಶಿ ಪರ್ಫೆಕ್ಟ್​ ಪ್ಲೇಯರ್. ಆರಂಭಿಕನಾಗಿ ಆರಂಭದಿಂದಲೇ ಹೊಡಿಬಡಿ ಆಟವಾಡುವ ಆತ, ನಿರ್ಧಯವಾಗಿ ದಂಡಿಸುವ ಕಲೆಗಾರಿಕೆ ಇದೆ. ಈತನನ್ನ ಈಗಿನಿಂದಲೇ ಸಜ್ಜುಗೊಳಿಸಿದ್ರೆ. 2026ರ ಟಿ20 ವಿಶ್ವಕಪ್​​ ವೇಳೆಗೆ ಮತ್ತಷ್ಟು ಪ್ರಬುದ್ಧರಾಗ್ತಾರೆ. ಮುಂದಿನ ವಿಶ್ವಕಪ್​​ ಟೂರ್ನಿಗೇ ಅಲ್ದಿದ್ರೂ, ಆ ನಂತರದ ಸರಣಿಗಳಲ್ಲಿ, ಟೂರ್ನಿಗಳಲ್ಲಿ ಆಡುವ ಪಕ್ವತೆ ಹೊಂದುವ ನಿಟ್ಟಿನಲ್ಲೇ ವೈಭವ್ ಸೂರ್ಯವಂಶಿಯನ್ನು ರೆಡಿ ಮಾಡ್ತಿದ್ದಾರೆ.

ರೋಹಿತ್, ಕೊಹ್ಲಿ ಸ್ಥಾನ ತುಂಬಲು ಸೂರ್ಯವಂಶಿ ಸೂಕ್ತ ಆಟಗಾರನಾ?

ವೈಭವ್ ಸೂರ್ಯವಂಶಿ ಮೇಲೆ ವಿಶೇಷ ಆಸಕ್ತಿಗೆ ಕಾರಣ, ರೋಹಿತ್ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಆಗಿದ್ದಾರೆ. ಈಗಾಗಲೇ ಟಿ20ಯಿಂದ ದೂರವಾಗಿರುವ ಇವರಿಬ್ಬರು, ಶೀಘ್ರವೇ ಏಕದಿನದಿಂದ ಮರೆಯಾಗ್ತಾರೆ ಎಂಬ ಸುದ್ದಿ ಇದೆ. ಇದೇ ವೇಳೆ ವೈಭವ್​ಗೆ ಸ್ಪೆಷಲ್ ಟ್ರೈನಿಂಗ್​ ನೀಡ್ತಿದೆ. ವೈಭವ್ ಸೂರ್ಯವಂಶಿ ಬ್ಯಾಟಿಂಗ್​​​ನಲ್ಲಿ ರೋಹಿತ್ ಶರ್ಮಾರ ಅಗ್ರೆಸ್ಸಿವ್ ಬ್ಯಾಟಿಂಗ್ ಇದೆ. ಕೊಹ್ಲಿಯಲ್ಲಿದ್ದ ಕನ್ಸಿಸ್ಟೆನ್ಸಿಯೂ ಇದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ಇಂಗ್ಲೆಂಡ್ ಎ ಪ್ರವಾಸ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿ ವೈಭವ್​​ಗೆ ಬ್ಯಾಕ್ ಮಾಡಿದ್ರೆ, ವಿಶ್ವ ಕ್ರಿಕೆಟ್​​ನಲ್ಲಿ ವಿಜೃಂಭಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

KL Rahul Asia Cup 2025 Vaibhav Suryavanshi
Advertisment