/newsfirstlive-kannada/media/media_files/2025/10/13/vaibhav_suryavanshi-2025-10-13-21-43-58.jpg)
ವೈಭವ್ ಸೂರ್ಯವಂಶಿ ಸದ್ಯ ಭಾರತದ ಕ್ರಿಕೆಟ್​ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಸದ್ದು ಮಾಡುತ್ತಿರುವ ಹೆಸರು ಆಗಿದೆ. ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಇಳಿದರೆ ವೈಭವ್ ಸೂರ್ಯವಂಶಿ ಬೌಂಡರಿ, ಸಿಕ್ಸರ್​ಗಳನ್ನೇ ಬಾರಿಸೋ ಯುವ ಬ್ಯಾಟರ್. ಸದ್ಯ ಇಂತಹ ಯಂಗ್ ಆ್ಯಂಡ್ ಎನರ್ಜಿಟಿಕ್​ ಬ್ಯಾಟರ್​ನನ್ನು ಬಿಹಾರದ ರಣಜಿ ಟ್ರೋಫಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಮಹತ್ವದ ಸ್ಥಾನವನ್ನು ನೀಡಿರುವುದು ವಿಶೇಷ ಎನಿಸಿದೆ.
2025ರ ರಣಜಿ ಟ್ರೋಫಿಗೆ ಬಿಹಾರ ಟೀಮ್​ನ ಆಟಗಾರರ ಹೆಸರನ್ನು ಘೋಷಣೆ ಮಾಡಲಾಗಿದೆ. ಸಕಿಬುಲ್​ ಗನಿ ನೇತೃತ್ವದಲ್ಲಿ ಬಿಹಾರ ತಂಡ ಮುನ್ನಡೆಯಲಿದ್ದು ಇದರಲ್ಲಿ ವೈಭವ್ ಸೂರ್ಯವಂಶಿಗೆ ಮೊದಲ ಎರಡು ಪಂದ್ಯಗಳಿಗಾಗಿ ಉಪನಾಯಕನ ಪಟ್ಟ ಕಟ್ಟಲಾಗಿದೆ. ರಣಜಿ ಟ್ರೋಫಿ ಇತಿಹಾಸದಲ್ಲಿ ಉಪನಾಯಕನಾಗಿ ಆಯ್ಕೆ ಆದ ಅತ್ಯಂತ ಕಿರಿಯ ಆಟಗಾರ ಎನ್ನುವ ಖ್ಯಾತಿಗೆ ಯಂಗ್ ಗನ್​ ಸೂರ್ಯವಂಶಿ ಪಾತ್ರರಾಗಿದ್ದಾರೆ.
ಇದನ್ನೂ ಓದಿ:IND vs WI; ಮ್ಯಾಚ್ ನೋಡುವಾಗ ಯುವಕನ ಕೆನ್ನೆ..ಕೆನ್ನೆಗೆ ಬಾರಿಸಿದ ಪ್ರಿಯತಮೆ.. ಅಸಲಿಗೆ ಆಗಿದ್ದೇನು?
ರಣಜಿ ಟ್ರೋಫಿ ಸೀಸನ್​ ಬುಧವಾರದಿಂದ ಆರಂಭವಾಗಲಿದ್ದು ಬಿಹಾರ ತಂಡ ಮೊದಲ ಪಂದ್ಯದಲ್ಲಿ ಅರುಣಾಚಲ ಪ್ರದೇಶ ಟೀಮ್ ಅನ್ನು ಎದುರಿಸಲಿದೆ. ಬಿಹಾರದ ಮೊಯಿನ್-ಉಲ್-ಹಕ್ ಸ್ಟೇಡಿಯಂನಲ್ಲಿ ಈ ಪಂದ್ಯ ಅಕ್ಟೋಬರ್​ 15 ರಿಂದ ಆರಂಭವಾಗಲಿದೆ. ಹೀಗಾಗಿ ಬಿಹಾರ್ ಕ್ರಿಕೆಟ್ ಅಸೋಶಿಯೇಷನ್ ತಂಡವನ್ನು ಪ್ರಕಟ ಮಾಡಿ ಸೂರ್ಯವಂಶಿಗೆ ಜವಾಬ್ದಾರಿಯನ್ನು ನೀಡಿದೆ.
2023-24ರಲ್ಲಿ ವೈಭವ್ ಸೂರ್ಯವಂಶಿ ತಮ್ಮ 12ನೇ ವಯಸ್ಸಿನಲ್ಲಿ ರಣಜಿ ಟ್ರೋಫಿಗೆ ಪಾದರ್ಪಣೆ ಮಾಡಿದ್ದರು. ಇದಾದ ಒಂದು ವರ್ಷದ ನಂತರ ಅಂದರೆ 13ನೇ ವಯಸ್ಸಿಗೆ ಸೂರ್ಯವಂಶಿ ಐಪಿಎಲ್​ಗೆ ಎಂಟ್ರಿಕೊಟ್ಟು ಅತ್ಯಂತ ಕಿರಿಯ ಪ್ಲೇಯರ್ ಎಂದು ಹೆಗ್ಗಳಿಕೆ ಪಡೆದಿದ್ದರು. ರಾಜಸ್ಥಾನ್ ಟೀಮ್​ನಲ್ಲಿದ್ದ ವೈಭವ್ ಅತಿ ವೇಗದ ಶತಕ ಸಿಡಿಸಿ ಎಲ್ಲರಿಗೂ ಪರಿಚಿತ ಎನಿಸಿದರು. ಇದಾದ ಮೇಲೆ ಟೀಮ್ ಇಂಡಿಯಾದ ಅಂಡರ್​-19 ತಂಡಕ್ಕೂ ಆಯ್ಕೆ ಆಗಿ ಅಬ್ಬರಿಸಿದ್ದರು. ಇದರ ಬಳಿಕ ಬಿಹಾರ ತಂಡದ ಉಪನಾಯಕ ಆಗಿ ಬಡ್ತಿ ಪಡೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ