62 ಬಾಲ್​ನಲ್ಲಿ 66 ರನ್​.. ನಂತರ ಒಂದೇ ಓವರ್​ನಲ್ಲಿ ಶತಕ ಬಾರಿಸಿದ ಪಾಂಡ್ಯ

ಬರೋಡಾ ಪರ ಆಡುತ್ತಿರುವ ಹಾರ್ದಿಕ್ ಪಾಂಡ್ಯ, ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ವಿರುದ್ಧ ಅದ್ಭುತ ಶತಕ ಗಳಿಸಿದರು. ಇದು ಹಾರ್ದಿಕ್ ಅವರ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಮೊದಲ ಶತಕವಾಗಿದೆ. ಪಾಂಡ್ಯ 62 ಎಸೆತಗಳಲ್ಲಿ 66 ರನ್ ಗಳಿಸಿ 39ನೇ ಓವರ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ತಲುಪಿದರು.

author-image
Ganesh Kerekuli
Hardik Pandya (13)
Advertisment

ಬರೋಡಾ ಪರ ಆಡುತ್ತಿರುವ ಹಾರ್ದಿಕ್ ಪಾಂಡ್ಯ, ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ವಿರುದ್ಧ ಅದ್ಭುತ ಶತಕ ಗಳಿಸಿದರು. ಇದು ಹಾರ್ದಿಕ್ ಅವರ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಮೊದಲ ಶತಕವಾಗಿದೆ. 

ಪಾಂಡ್ಯ 62 ಎಸೆತಗಳಲ್ಲಿ 66 ರನ್ ಗಳಿಸಿ 39ನೇ ಓವರ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ತಲುಪಿದರು. ಮೊದಲ ಐದು ಎಸೆತಗಳಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿ, ಆ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕ ಪೂರೈಸಿದರು.

ಪಾರ್ಥ್ ರೇಖಾಡೆ ಓವರ್‌ನಲ್ಲಿ ಪಾಂಡ್ಯ 5 ಸಿಕ್ಸರ್‌

38 ಓವರ್‌ಗಳ ನಂತರ ಬರೋಡಾ 7 ವಿಕೆಟ್‌ಗಳಿಗೆ 182 ರನ್ ಗಳಿಸಿತ್ತು. ಹಾರ್ದಿಕ್ ಪಾಂಡ್ಯ 62 ಎಸೆತಗಳಲ್ಲಿ 66 ರನ್ ಗಳಿಸಿ ಸ್ಟ್ರೈಕ್‌ನಲ್ಲಿದ್ದರು. ಸ್ಪಿನ್ನರ್ ಪಾರ್ಥ್ ರೇಖಾಡೆ 39ನೇ ಓವರ್ ಬೌಲಿಂಗ್ ಮಾಡಲು ಬಂದರು. ಈ ಓವರ್​​ನಲ್ಲಿ ಪಾಂಡ್ಯ ಸತತವಾಗಿ ಐದು ಸಿಕ್ಸರ್ ಬಾರಿಸಿದರು. ನಂತರ ಕೊನೆಯ ಬಾಲ್, ಸರಿಯಾಗಿ ಬ್ಯಾಟ್​​ಗೆ ತಾಗದಿದ್ದರೂ ಬೌಂಡರಿ ಹೋಯಿತು. ಆ ಮೂಲಕ ಪಾಂಡ್ಯ ಶತಕ ಪೂರೈಸಿದರು. 

ಪಾಂಡ್ಯ ಶತಕದೊಂದಿಗೆ ಬರೋಡಾ 9 ವಿಕೆಟ್ ಕಳೆದುಕೊಂಡು 293 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ವಿದರ್ಭ, ಕೇವಲ ಒಂದು ವಿಕೆಟ್ ಕಳೆದುಕೊಂಡು 50 ರನ್​ ಬಾಕಿ ಇರುವಾಗಲೇ 296 ರನ್​ಗಳಿಸಿ ಗೆಲುವಿನ ಗುರಿ ಮುಟ್ಟಿತು. 

ಇದನ್ನೂ ಓದಿ:ನ್ಯೂಜಿಲೆಂಡ್ ಸಿರೀಸ್​ನಲ್ಲಿ ಪಾಂಡ್ಯಗೆ ಯಾಕಿಲ್ಲ ಸ್ಥಾನ..? ಬಿಸಿಸಿಐ ನಿರ್ಧಾರದ ಹಿಂದೆ ಮಾಸ್ಟರ್​ ಪ್ಲಾನ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Hardik Pandya Vijay Hazare Trophy sports
Advertisment