/newsfirstlive-kannada/media/media_files/2025/08/12/rohit_kohli_wc-2025-08-12-11-18-22.jpg)
ರೋಹಿತ್, ಕೊಹ್ಲಿಯ ನಿವೃತ್ತಿ ಬಿಸಿಸಿಐ ಬಯಸ್ತಿದೆಯೇ?. ಟಿ20, ಟೆಸ್ಟ್​ನಿಂದ ನಿವೃತ್ತಿ ಪಡೆದ ರೋ-ಕೊ ಜೋಡಿ ಏಕದಿನ ಕ್ರಿಕೆಟ್​​ನಿಂದಲೂ ದೂರವಾಗ್ತಾರಾ?. 2027ರ ಏಕದಿನ ವಿಶ್ವಕಪ್ ಆಡುವ ಕನಸು ನನಸಾಗಲ್ವಾ?. ಭವಿಷ್ಯದ ತಂಡದ ಕಟ್ಟಲು ಮುಂದಾಗಿರುವ ಬಿಸಿಸಿಐ, 2027ರ ವಿಶ್ವಕಪ್​​ನಲ್ಲಿ ಈ ಇಬ್ಬರನ್ನು ಪರಿಗಣಿಸಬೇಕಾದ್ರೆ, ಕಂಡೀಷನ್ಸ್ ಹಾಕಿದೆ. ಆ ಕಂಡೀಷನ್ಸ್​ ಏನ್?.
ರೋಹಿತ್, ವಿರಾಟ್​ ವಿಶ್ವ ಕ್ರಿಕೆಟ್ ಲೋಕದ ಮೋಸ್ಟ್​ ಟ್ರೆಂಡಿಂಗ್ ಆ್ಯಂಡ್ ಹಾಟ್ ಟಾಪಿಕ್. ಟೀಮ್ ಇಂಡಿಯಾ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ, ವಿಶ್ವ ಕ್ರಿಕೆಟ್ ಲೋಕದ ಕಿಂಗ್ ಕೊಹ್ಲಿಯ ಭವಿಷ್ಯದ ಪ್ರಶ್ನೆ. ಈಗಾಗಲೇ ಟಿ20, ಟೆಸ್ಟ್​ನಿಂದ ದೂರ ಉಳಿದಿರುವ ಇವರು, 2027ರ ಏಕದಿನ ವಿಶ್ವಕಪ್ ಆಡ್ತಾರಾ?, ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯೇ ಕೊನೆಯಾಗುತ್ತಾ ಅನ್ನೋದೆ ಚಿಂತೆ. ಇದೀಗ ಈ ಬಗ್ಗೆ ಹೊಸ ಅಪ್​​ಡೇಟ್ ಹೊರ ಬಿದ್ದಿದೆ. ರೋಹಿತ್ ಶರ್ಮಾ ಹಾಗೂ ಕೊಹ್ಲಿ ಅಭಿಮಾನಿಗಳು ನಿಟ್ಟುಸಿರುವ ಬಿಡುವ ಸಿಹಿ ಸುದ್ದಿ ಸಿಕ್ಕಿದೆ.
ವಿರಾಟ್, ರೋಹಿತ್​​ಗೆ ಬಿಸಿಸಿಐ ಚಾನ್ಸ್​.! ಆದ್ರೆ, ಕಂಡೀಷನ್ಸ್​ ಅಪ್ಲೈ..!
ಟೆಸ್ಟ್, ಟಿ20ಯಿಂದ ದೂರವಾಗಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಆಡ್ತಾರಾ..? ಇಲ್ವಾ ಅನ್ನೋ ಚರ್ಚೆ. ಕಳೆದ ಐದಾರು ತಿಂಗಳಿಂದ ಚಾಲ್ತಿಯಲ್ಲಿದೆ. ಸದ್ಯ ವಿಶ್ವ ಕ್ರಿಕೆಟ್ ಲೋಕದ ವಿದ್ಯಾಮಾನಗಳನ್ನ ನೋಡಿದ್ರೆ, 2027ರ ತನಕ ರೋಹಿತ್ ಶರ್ಮಾ ಹಾಗೂ ಕೊಹ್ಲಿ ತಂಡದಲ್ಲಿರುವುದೇ ಅನುಮಾನ ಎನ್ನಲಾಗ್ತಿದೆ. ಭವಿಷ್ಯದತ್ತ ಗಮನ ಹರಿಸಿರುವ ಬಿಸಿಸಿಐ, ಆಸ್ಟ್ರೇಲಿಯಾ ಸರಣಿ ನಂತರ ಇಬ್ಬರಿಗೂ ಸೈಡ್​ಲೈನ್ ಮಾಡಿದರು ಅಚ್ಚರಿ ಇಲ್ಲ ಎಂಬ ಮಾತುಗಳು ಹರಿದಾಡ್ತಿವೆ. ಈ ನಡುವೆ ಗುಡ್​ನ್ಯೂಸ್ ಕೊಟ್ಟಿರುವ ಬಿಸಿಸಿಐ, ಅಂಥಹ ಯಾವುದೇ ಚಿಂತನೆ ಇಲ್ಲ ಎಂದಿದೆ. ಆದ್ರೆ, ಕೊಹ್ಲಿ, ರೋಹಿತ್ ಕನಸಿಗೆ ಕಂಡೀಷನ್​​ ಹಾಕಿದೆ.
ಆಸ್ಟ್ರೇಲಿಯಾ ಎ ಎದುರು ಕಣಕ್ಕಿಳಿಯಬೇಕಿದೆ ರೋಹಿತ್​​​, ಕೊಹ್ಲಿ...!
ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕದಿನ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಆಡೋದು ಬಹುತೇಕ ಕನ್ಫರ್ಮ್. ಆದ್ರೆ, ಈ ಸರಣಿಯ ಆರಂಭಕ್ಕೂ ಮುನ್ನ ಬಿಸಿಸಿಐ ಬಾಸ್​ಗಳು ರೋಹಿತ್ ಶರ್ಮಾ ಹಾಗೂ ವಿರಾಟ್​ ಕೊಹ್ಲಿಗೆ ಲಿಸ್ಟ್ A ಪಂದ್ಯಗಳನ್ನಾಡಲು ಸೂಚಿಸಿದೆ. ಪ್ರಮುಖವಾಗಿ ಆಸ್ಟ್ರೇಲಿಯಾ ಏಕದಿನ ಸರಣಿ ಮುನ್ನ ಭಾರತದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ A ಎದುರಿನ ಏಕದಿನ ಪಂದ್ಯಗಳನ್ನಾಡುವ ಆದೇಶ ನೀಡಿದೆ. ಆ ಮೂಲಕ ಅಕ್ಟೋಬರ್ 19ರಿಂದ ಆರಂಭವಾಗುವ ಕಾಂಗರೂ ಪ್ರವಾಸಕ್ಕೆ ಸಜ್ಜಾಗುವಂತೆ ತಿಳಿಸಿದೆ.
ಆಸಿಸ್, ಆಫ್ರಿಕಾ ಸರಣಿ ಬಳಿಕ ವಿಜಯ್ ಹಜಾರೆ ಆಡಬೇಕು..!
ಆಸ್ಟ್ರೇಲಿಯಾ ಪ್ರವಾಸಕ್ಕೆ ಹಾಜರಿರಲಿರುವ ರೋಹಿತ್, ವಿರಾಟ್, ನಂತರ ನವೆಂಬರ್​ 30ರಿಂದ ತವರಿನಲ್ಲಿ ಸೌತ್ ಆಫ್ರಿಕಾ ಸರಣಿಯನ್ನಾಡಲಿದ್ದಾರೆ. ಆದ್ರೆ, ಈ ಸರಣಿಗೂ ಮುನ್ನವೂ ವಿರಾಟ್​ ಆ್ಯಂಡ್ ರೋಹಿತ್ ಸುಮ್ಮನೆ ಕೂರುವಂತಿಲ್ಲ. ಆಫ್ರಿಕಾ ಎ ತಂಡದ ಎದುರಿನ ಕೆಲ ಪಂದ್ಯಗಳನ್ನಾಡಬೇಕಿದೆ. ಇದಾದ ಬೆನ್ನಲ್ಲೇ ಕಡ್ಡಾಯವಾಗಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾಗವಹಿಸಬೇಕಿದೆ. ಈ ಮಹತ್ವದ ಟೂರ್ನಿಯಲ್ಲಿ ರನ್​ಗಳಿಸೋದ್ರ ಜೊತೆಗೆ ಫಿಟ್‌ನೆಸ್, ಫಾರ್ಮ್ ಕಾಪಾಡಿಕೊಳ್ಳಬೇಕಿದೆ. ಇಲ್ಲ ರೋಹಿತ್, ವಿರಾಟ್ ಕೊಹ್ಲಿ ಸ್ಥಾನ ಅಂತತ್ರಕ್ಕೆ ಸಿಲುಕುವುದು ಗ್ಯಾರಂಟಿ. ಇದೇ ವಿಚಾರವಾಗಿಯೇ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.
ಏಕದಿನದಲ್ಲಿ ಉತ್ತಮ ದಾಖಲೆ ಇದೆ.!
ವಿರಾಟ್​​ ಕೊಹ್ಲಿಯ ಏಕದಿನ ದಾಖಲೆ ಅದ್ಭುತವಾಗಿದೆ. ರೋಹಿತ್ ಶರ್ಮಾ ಅವರದ್ದು ಚೆನ್ನಾಗಿದೆ. ಇಬ್ಬರೂ ವೈಟ್ ಬಾಲ್​​ನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಯಾರು ಉತ್ತಮವಾಗಿ ಪ್ರದರ್ಶನ ನೀಡುತ್ತಾರೋ ಅವರಿಗೆ ತಂಡದಲ್ಲಿ ಆಡುವ ಅವಕಾಶ ಸಿಗಲಿದೆ. ಇಬ್ಬರೂ ಉತ್ತಮ ಪ್ರದರ್ಶನ ನೀಡಿದರೆ ತಂಡದಲ್ಲಿ ಮುಂದುವರಿಯುತ್ತಾರೆ.
ಸೌರವ್ ಗಂಗೂಲಿ, ಮಾಜಿ ನಾಯಕ
ಸೌರವ್ ಗಂಗೂಲಿ ಹೇಳಿಕೆಯಂತೆ ವಿರಾಟ್​, ರೋಹಿತ್ ಏಕದಿನ ಕ್ರಿಕೆಟ್​ನಲ್ಲಿ ಅದ್ಬುತ ದಾಖಲೆ ಹೊಂದಿದ್ದಾರೆ. ಏಕದಿನ ಕ್ರಿಕೆಟ್​​ನಲ್ಲಿ ಸರ್ವಶ್ರೇಷ್ಠರಾಗಿರುವ ಅವರು, 2023 ರಿಂದಲೂ ಉತ್ತಮ ಲಯದಲ್ಲಿದ್ದಾರೆ.
2023ರಿಂದ ಏಕದಿನದಲ್ಲಿ ವಿರಾಟ್​, ರೋಹಿತ್
ರನ್ | ಸ್ಟ್ರೈಕ್​ರೇಟ್​ | ಸರಾಸರಿ | 50/100 | |
ವಿರಾಟ್​ ಕೊಹ್ಲಿ | 1710 | 61.07 | 95.85 | 10/7 |
ರೋಹಿತ್ ಶರ್ಮಾ | 1714 | 48.97 | 117.23 | 12/3 |
8 ಒಡಿಐ ಸಿರೀಸ್​... 24 ಪಂದ್ಯ.. ಫಾರ್ಮ್​-ಫಿಟ್ನೆಸ್ ಅತ್ಯಗತ್ಯ..!
ಚಾಂಪಿಯನ್ಸ್​ ಟ್ರೋಫಿ ಬಳಿಕ ಏಕದಿನ ಪಂದ್ಯಗಳನ್ನೇ ರೋಹಿತ್, ಕೊಹ್ಲಿ ಆಡಿಲ್ಲ. ಬರೋಬ್ಬರಿ 224 ದಿನಗಳ ಬಳಿಕ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದವರು ಬಿಟ್ರೆ, ಕೇವಲ ಏಕದಿನ ತಂಡದಲ್ಲಿ ಕಾಣಿಸಿಕೊಳ್ಳುವ ರೋಹಿತ್​​, ಕೊಹ್ಲಿ, ಕೇವಲ 8 ಏಕದಿನ ಸರಣಿಗಳಿಂದ 24 ಪಂದ್ಯಗಳನ್ನ ಅಷ್ಟೇ ಆಡ್ತಾರೆ. ದೀರ್ಘ ವಿರಾಮದಲ್ಲಿರುವ ರೋಹಿತ್, ಕೊಹ್ಲಿ ಫಿಟ್ನೆಸ್, ಫಾರ್ಮ್ ಉಳಿಸಿಕೊಳ್ತಾರಾ ಎಂಬ ಪ್ರಶ್ನೆ ಸಹಜವಾಗೇ ಹುಟ್ಟು ಹಾಕುತ್ತೆ. ಹೀಗಾಗಿ ಮುಂದಿನ ಏಕದಿನ ವಿಶ್ವಕಪ್​ ತನಕ ಫಿಟ್ನೆಸ್, ಫಾರ್ಮ್​ ಉಳಿಸಿಕೊಳ್ಳಬೇಕಾದ್ರೆ, ಲಿಸ್ಟ್ ಎ ಪಂದ್ಯಗಳನ್ನಾಡುವುದು ಅತ್ಯಗತ್ಯ ಅನ್ನೋದ್ರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ