ಕಿಂಗ್ ಕೊಹ್ಲಿ ಫ್ಯಾನ್ಸ್​ಗೆ ಗುಡ್ ನ್ಯೂಸ್.. ಒಂದೇ ಒಂದು ಲೈಕ್,​ ಬಿಗ್ ಮೆಸೇಜ್ ಕೊಟ್ಟ ವಿರಾಟ್!

ಏಕದಿನ ಕ್ರಿಕೆಟ್​ನಿಂದ ದೂರವಾಗ್ತಾರೆ ಎಂಬ ಮಾತುಗಳು ಇವೆ. ಬಿಸಿಸಿಐ ಕೊಹ್ಲಿಯನ್ನು ಸೈಡ್ ಲೈನ್​ ಮಾಡುತ್ತಿದೆ ಎಂಬ ಟಾಕ್​ಗಳು ಕೂಡ ಕೇಳಿ ಬರುತ್ತಿವೆ. ಇದೆಲ್ಲದರ ನಡುವೆ ವಿರಾಟ್​, ಅಭಿಮಾನಿಗಳಿಗೆ ಗುಡ್​ ನ್ಯೂಸ್ ಕೊಟ್ಟಿದ್ದಾರೆ.

author-image
Bhimappa
ವಿರಾಟ್​ ಕೊಹ್ಲಿಗೆ ಸಿಕ್ಕ ಹೊಸ ಫ್ರೆಂಡ್‌.. ಯಾರು ಈ ಲೆಜೆಂಡರಿ ಪ್ಲೇಯರ್‌? ಇವರಿಬ್ಬರ ಗೆಳೆತನವೇ ಸೂಪರ್!
Advertisment

ಕಿರೀಟ ಇಲ್ಲದಿದ್ರೂ ರಾಜ, ಸೈನ್ಯ ಇಲ್ಲದಿದ್ರೂ ದೊರೆ ಯಾರು ಅಂದ್ರೆ, ಅದು ಒನ್ ಆ್ಯಂಡ್ ಒನ್ಲಿ ವಿರಾಟ್ ಕೊಹ್ಲಿ. ಇವತ್ತಿಗೆ ವಿರಾಟ್​ ಕೊಹ್ಲಿ ಏಕದಿನ ಕ್ರಿಕೆಟ್​ಗೆ ಕಾಲಿಟ್ಟು 17 ವರ್ಷ ಪೂರೈಸಿದ್ದಾರೆ. ಈ ಸ್ಪೆಷಲ್ ಡೇಯಂದೇ ವಿರಾಟ್​, ಫ್ಯಾನ್ಸ್​ಗೆ ಗುಡ್​ ನ್ಯೂಸ್ ನೀಡಿದ್ದಾರೆ. 

ಕ್ರಿಕೆಟ್​ ಜಗತ್ತಿಗೆ ವಿರಾಟ್​​ ಕೊಹ್ಲಿ ಕಾಲಿಟ್ಟು 17 ವರ್ಷ ಕಂಪ್ಲೀಟ್​ ಆಗಿದೆ. ಶೂನ್ಯದಿಂದಲೇ ಕರಿಯರ್ ಶುರುಮಾಡಿ ಗ್ರೇಟೆಸ್ಟ್​​​ ಕ್ರಿಕೆಟರ್ ಆಗಿ ಹೊರಹೊಮ್ಮಿದ್ದಾರೆ. ದಿ ಲೆಜೆಂಡ್​​​​, ರೋಲ್​​ಮಾಡೆಲ್​​​​ ಆಗಿ ಲೆಕ್ಕ ಇಲ್ಲದಷ್ಟು ದಾಖಲೆಗಳು ಬರೆದಿದ್ದಾರೆ. 17 ವರ್ಷಗಳಿಂದ ಕಿಂಗ್ ಆಗಿ ವಿಶ್ವ ಕ್ರಿಕೆಟ್​​ ಲೋಕವನ್ನೇ ಆಳಿರುವ ವಿರಾಟ್​, ಸ್ಪೆಷಲ್ ಡೇ ದಿನ ಫ್ಯಾನ್ಸ್​ಗೆ ಗುಡ್ ನ್ಯೂಸ್ ನೀಡಿದ್ದಾರೆ.

Virat Kohli: ಕೊಹ್ಲಿ ಅಂದ್ರೆ ನಿದ್ದೆಯಲ್ಲೂ ಕನವರಿಸ್ತಿದೆ ಪಾಕ್​! ನಾಳೆಯ ವಿರಾಟ ಪರ್ವಕ್ಕೆ ಕಾಯುತ್ತಿದ್ದಾರೆ ಫ್ಯಾನ್ಸ್​

ಒಂದು ಲೈಕ್.. ‘17ರ ಶುಭದಿನ’ ಕೊಟ್ರಾ ಆ ಹಿಂಟ್..?

2008 ಆಗಸ್ಟ್​ 18ರಂದು ವಿರಾಟ್​, ಅಂತರಾಷ್ಟ್ರೀಯ ಕ್ರಿಕೆಟ್​​ಗೆ ಕಾಲಿಟ್ಟ ದಿನ. ಅಂದಿನಿಂದ ಇದುವರೆಗೆ ವಿರಾಟ್​, ವೃತ್ತಿ ಜೀವನದಲ್ಲಿ ಸೋಲು ಗೆಲುವನ್ನ ಕಂಡಿದ್ದಾರೆ. ಬ್ಯಾಟಿಂಗ್​ನಲ್ಲಿ ವೈಫಲ್ಯದ ದಿನಗಳನ್ನು ಕಂಡಿದ್ದಿದೆ. ಟೀಕೆ ಎದುರಿಸಿದ್ದಿದೆ. ಅಪಮಾನಕ್ಕೆ ಗುರಿಯಾಗಿದ್ದಿದೆ. ಇದೆಲ್ಲದರ ನಡುವೆ ಕ್ರಿಕೆಟ್ ಲೋಕದ ಕಿಂಗ್ ಆಗಿ ಮರೆಯುತ್ತಿರುವ ವಿರಾಟ್​, ಶೀಘ್ರವೇ ಏಕದಿನ ಕ್ರಿಕೆಟ್​ನಿಂದ ದೂರವಾಗ್ತಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಅಷ್ಟೇ ಅಲ್ಲ, ಬಿಸಿಸಿಐ ಕೊಹ್ಲಿಯನ್ನು ಸೈಡ್ ಲೈನ್​ ಮಾಡ್ತಿದೆ ಎಂಬ ಟಾಕ್​ಗಳು ನಡೀತಿವೆ. ಇದೆಲ್ಲದರ ನಡುವೆ ವಿರಾಟ್​, ಅಭಿಮಾನಿಗಳಿಗೆ ಗುಡ್​ ನ್ಯೂಸ್ ಕೊಟ್ಟಿದ್ದಾರೆ.

ಸದ್ಯ ಲಂಡನ್​​ನಲ್ಲಿ ವಿಶ್ರಾಂತಿಯ ಸಮಯ ಕಳೆಯುತ್ತಿರುವ ವಿರಾಟ್, ಆಸ್ಟ್ರೇಲಿಯಾ ಸರಣಿ ಆಡ್ತಾರಾ ಇಲ್ವಾ ಎಂಬ ಗೊಂದಲ ಇದೆ. ಇದೇ ವೇಳೆ ವಿರಾಟ್​, ಫ್ಯಾನ್ಸ್​ ಫೇಜ್​​ವೊಂದರ ಫೋಸ್ಟ್​ಗೆ ಲೈಕ್​ ಮಾಡಿದ್ದಾರೆ. ಅದ್ಯಾವುದೋ ಪೋಸ್ಟ್​ಗೆ ಲೈಕ್ ಮಾಡಿದ್ರೆ, ಇಷ್ಟು ಸುದ್ದಿಯಾಗ್ತಿರಲಿಲ್ಲ. ಆದ್ರೆ, ವಿರಾಟ್ ಲೈಕ್ ಮಾಡಿರುವ ಪೋಸ್ಟ್​, ಆಸ್ಟ್ರೇಲಿಯಾ ಏಕದಿನ ಸರಣಿಗೆ ಕೊಹ್ಲಿ ಅಭ್ಯಾಸ ನಡೆಸ್ತಿದ್ದಾರೆ ಎಂಬುವುದಾಗಿದೆ. ಈ ಲೈಕ್​ ಮೂಲಕ ವಿರಾಟ್ ಆಸ್ಟ್ರೇಲಿಯಾ ಸರಣಿಯನ್ನಾಡುವ ಹಿಂಟ್ ನೀಡಿದ್ರು ಅನ್ನೋದು ಫ್ಯಾನ್ಸ್​​ ಮಾತಾಗಿದೆ.

ಆಸಿಸ್​ ಸರಣಿ ಆಡುವ ಸಂದೇಶ ನೀಡಿದ್ರಾ ಕಿಂಗ್ ಕೊಹ್ಲಿ..?

ಸದ್ಯ ವಿಶ್ವ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ, ಏಕದಿನ ಭವಿಷ್ಯದ ಪ್ರಶ್ನೆ ಉದ್ಬವಿಸಿದೆ. ಬಿಸಿಸಿಐ ಬಿಗ್​ಬಾಸ್​ಗಳ ಭವಿಷ್ಯದ ಲೆಕ್ಕಾಚಾರಕ್ಕೆ ವಿರಾಟ್​, ಏಕದಿನ ಕ್ರಿಕೆಟ್ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಇಂಗ್ಲೆಂಡ್ ಟೆಸ್ಟ್​ ಸರಣಿಗೂ ಮುನ್ನ ರೆಡ್​ಬಾಲ್ ಕ್ರಿಕೆಟ್​​​ಗೆ ಟಾಟಾ ಹೇಳಿದ್ದ ಕೊಹ್ಲಿ, ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಏಕದಿನ ಕ್ರಿಕೆಟ್​​​ಗೆ ಗುಡ್​ ಬೈ ಹೇಳ್ತಾರಾ ಎಂಬ ಪ್ರಶ್ನೆ ಇತ್ತು. ಈ ಪ್ರಶ್ನೆಗೆ ಈಗ ಲೈಕ್ ಮೂಲಕ ಏಕದಿನ ಸರಣಿಯನ್ನಾಡುವ ಸಂದೇಶ ನೀಡಿದ್ದಾರೆ. 

ಇದನ್ನೂ ಓದಿ:ಕ್ರಿಕೆಟರ್ಸ್ ಪ್ರಸಿದ್ಧ ಮಹಾಕಾಳೇಶ್ವರನ ಮೊರೆ ಹೋಗುವುದು ಯಾಕೆ​..? ಸನ್ನಿಧಿಯಲ್ಲಿ ಹೆಡ್​ ಕೋಚ್!

Virat Kohli: ಇಂದು ಬ್ಯಾಟ್​ ಹಿಡಿಯೋ ಕೊಹ್ಲಿ ಕೈಯಲ್ಲಿ ಅಂದಿತ್ತು ಹೊಲಿಗೆ ಯಂತ್ರ! ವಿರಾಟ್​​ಗೆ ಈ ಡ್ರೆಸ್​​ ಫೇವರಿಟ್​ ಅಂತೆ

ಶ್ರೇಷ್ಠ ಆಟಗಾರ 2027ರ ವಿಶ್ವಕಪ್ ಆಡಲಿ ಎಂಬುವುದೇ ಆಶಯ.!

ಮಾಡ್ರನ್ ಡೇ ಕ್ರಿಕೆಟ್​ನಲ್ಲಿ ದಿಗ್ಗಜರಾಗಿ ಕರೆಸಿಕೊಂಡ ಹಲವರಿದ್ದಾರೆ. ಆದ್ರೆ, ಅವರಿಗೆಲ್ಲರಿಗಿಂತ ಸ್ಪೆಷಲ್ ವಿರಾಟ್ ಕೊಹ್ಲಿ. ಯಾಕಂದ್ರೆ, 2025ರ ತನಕ 3 ಫಾರ್ಮೆಟ್​ನಲ್ಲಿ ಅಬ್ಬರಿಸಿದ ವಿರಾಟ್, 2008ರಿಂದ ಇದುವರೆಗೆ ಅತಿ ಹೆಚ್ಚು ರನ್, ಶತಕ ಸಿಡಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಏಕದಿನ ನಾಯಕನಾಗಿ ಅಪರಿಮಿತ ಸಾಧನೆ ಮಾಡಿದ್ದಾರೆ. ನಾಯಕನಾಗಿ ಟ್ರೋಫಿ ಗೆಲ್ಲದ ಕೊರಗು ಬಿಟ್ರೆ, ಟೀಮ್ ಇಂಡಿಯಾಗಾಗಿ ಎಲ್ಲವನ್ನು ಮಾಡಿದ ಶ್ರೇಷ್ಠ ಆಟಗಾರ ವಿರಾಟ್​ ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೆ, ಇಂಥಹ ಶ್ರೇಷ್ಠ ಆಟಗಾರನ 2027ರ ಏಕದಿನ ವಿಶ್ವಕಪ್ ಭವಿಷ್ಯ ಅಂತತ್ರಕ್ಕೆ ಸಿಲುಕಿದೆ.

ಈಗಾಗಲೇ ಟಿ20, ಟೆಸ್ಟ್​​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ 36 ವರ್ಷದ ಕೊಹ್ಲಿ, 2027ರ ವೇಳೆಗೆ 38 ವರ್ಷ ವಯಸ್ಸಾಗಿರುತ್ತೆ. 40ರ ಅಸುಪಾಸಿನಲ್ಲಿರುವ ಆಟಗಾರರಿಗೆ ಕೊಕ್ ನೀಡುವ ಉದ್ದೇಶ ಹೊಂದಿರುವ ಬಿಸಿಸಿಐ, ಸೈಡ್ ಲೈನ್ ಮಾಡುವ ಕೆಲಸ ಮಾಡ್ತಿದೆ. ಆದ್ರೆ, ಟೀಮ್ ಇಂಡಿಯಾದ ಯಶಸ್ಸಿಗಾಗಿ ಅಪರಿಮಿತವಾಗಿ ಶ್ರಮಿಸಿರುವ ವಿರಾಟ್​ ಕೊಹ್ಲಿಗೆ, ಕೊನೆಯದಾಗಿ 2027ರ ವಿಶ್ವಕಪ್ ಆಡುವ ಭಾಗ್ಯ ಸಿಗಲಿ ಅನ್ನೋದೆ ಕೋಟ್ಯಾಂತರ ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Rohith Sharma Virat Kohli Virat Kohli beard Asia Cup 2025
Advertisment