Advertisment

‘ಭದ್ರ ಕೋಟೆ’ಯಲ್ಲೂ ಘರ್ಜಿಸದ ಕಿಂಗ್​ ಕೊಹ್ಲಿ.. ಭಾರತ ತಂಡದಲ್ಲಿ ಹೆಚ್ಚು ಡಕೌಟ್ ಆದ ಪ್ಲೇಯರ್​?

ಕೊಹ್ಲಿ ಪೆವಿಲಿಯನ್​ಗೆ ಸುಮ್ನೆ ಹೋಗಲಿಲ್ಲ. ಬೌಂಡರಿ ಗೆರೆ ದಾಟೋಕೂ ಮುನ್ನ ಸ್ಟ್ತಾಂಡ್​ನಲ್ಲಿದ್ದ ಫ್ಯಾನ್ಸ್​ ಕಡೆಗೆ ಕೈ ತೋರಿಸಿ ಸನ್ನೆಯಲ್ಲೇ ಧನ್ಯವಾದ ಹೇಳಿದರು. ಇದು ರಿಟೈರ್​ಮೆಂಟ್​ ವಿಚಾರದಲ್ಲಿ ಕೊಹ್ಲಿ ನೀಡಿದ ಮುನ್ಸೂಚನೆ ಎಂದು ಫ್ಯಾನ್ಸ್​ ಹೇಳ್ತಿದ್ದಾರೆ.

author-image
Bhimappa
VIRAT_KOHLI_AUS (1)
Advertisment

ಇಂಡೋ-ಆಸಿಸ್​​ 2ನೇ ಏಕದಿನ ಅಂತ್ಯದೊಂದಿಗೆ ವಿರಾಟ್​ ಕೊಹ್ಲಿಯ ಕ್ರಿಕೆಟ್​ ಕರಿಯರ್​​ ಅಂತ್ಯ ಆಯ್ತಾ ಎಂಬ ಪ್ರಶ್ನೆ ಹುಟ್ಟಿದೆ. ಕೊಹ್ಲಿ ಡಕೌಟ್​ ಆಗಿದ್ದಕ್ಕಲ್ಲ, ಔಟ್​ ಆದ ಬಳಿಕ ವಿರಾಟ್​ ನಡೆದುಕೊಂಡ ರೀತಿ ಇದಕ್ಕೆಲ್ಲಾ ಕಾರಣ. ಹಾಗಾದ್ರೆ, ನಿಜಕ್ಕೂ ಕೊಹ್ಲಿ ಕರಿಯರ್​​​ ಅಂತ್ಯಕ್ಕೆ ಬಂದು ನಿಂತಿದ್ಯಾ?, ಆಸ್ಟ್ರೇಲಿಯಾ ಪ್ರವಾಸದಲ್ಲೇ ಕೊಹ್ಲಿ ಗುಡ್​ ಬೈ ಹೇಳ್ತಾರಾ?.

Advertisment

ಇಂಡೋ-ಆಸಿಸ್​ ನಡುವಿನ ರಿಸಲ್ಟ್​ಗಿಂತ ಹೆಚ್ಚು ಸದ್ದು ಮಾಡ್ತಿರೋದು ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಹೆಸರು. ಅಡಿಲೇಡ್​ ಪಂದ್ಯದ ಅಂತ್ಯದ ಬೆನ್ನಲ್ಲೇ ಕೊಹ್ಲಿ ಕರಿಯರ್​ ಅಂತ್ಯದ ಚರ್ಚೆಗಳು ತಾರಕ್ಕೇರಿವೆ. ಸೌತ್​ ಆಫ್ರಿಕಾದಲ್ಲಿ ನಡೆಯೋ 2027ರ ವಿಶ್ವಕಪ್​  ಟೂರ್ನಿಯಲ್ಲ, ಆಸ್ಟ್ರೇಲಿಯದಲ್ಲಿ ನಡೀತಿದ್ಯಲ್ಲ, ಏಕದಿನ ಸರಣಿ ಇದೇ ಕೊಹ್ಲಿ ಪಾಲಿನ ಕೊನೆಯ ಸರಣಿಯಾಗೋ ಸಾಧ್ಯತೆ ಎದುರಾಗಿದೆ. 

KOHLI_00

ಅಡಿಲೇಡ್​ ಓವಲ್​ನಲ್ಲೂ ಸೊನ್ನೆ ಸುತ್ತಿದ ವಿರಾಟ್​.!

ಅಡಿಲೇಡ್​ ಓವಲ್ ಸ್ಟೇಡಿಯಂ ಭಾರತದ ವಿರಾಟ್​ ಕೊಹ್ಲಿ ಪಾಲಿನ​ ಭದ್ರಕೋಟೆ ಅಂತಾನೇ ಫೇಮಸ್​. ಈ ಸ್ಟೇಡಿಯಂ​ನಲ್ಲಿ ಮೂರೂ ಫಾರ್ಮೆಟ್​ನಲ್ಲಿ 50+ ಸರಾಸರಿ ಕೊಹ್ಲಿ ಹೊಂದಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟರ್​​ಗಳೇ ಮಾಡದ ಸಾಧನೆಯನ್ನ ಕೊಹ್ಲಿ ಮಾಡಿದ್ರಿಂದ 2ನೇ ಏಕದಿನದಲ್ಲಿ ಕಮ್​​ಬ್ಯಾಕ್​ ಮಾಡ್ತಾರೆ ಅನ್ನೋ ನಿರೀಕ್ಷೆಯಿತ್ತು. ಆದ್ರೆ. ನಿರೀಕ್ಷೆ ನಿರಾಸೆಯಲ್ಲಿ ಅಂತ್ಯವಾಯ್ತು. 

ಅಡಿಲೇಡ್​​​ ಅಂಗಳದಲ್ಲಿ ಆರಂಭದಿಂದಲೇ ಸ್ಟ್ರಗಲ್​ ಮಾಡಿದ ಕೊಹ್ಲಿ, 4 ಎಸೆತಕ್ಕೆ ಆಟ ಅಂತ್ಯಗೊಳಿಸಿದ್ರು. 2ನೇ ಏಕದಿನದಲ್ಲೂ ಕೊಹ್ಲಿ ಡಕೌಟ್​ ಆದ್ರು. ಷೇವಿಯರ್​ ಬಾರ್ಟ್ಲೆಟ್​​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದು ವಿರಾಟ್​ ಕೊಹ್ಲಿ ಪೆವಿಲಿಯನ್​ ಸೇರಿದರು.

Advertisment

ರಿಟೈರ್​ಮೆಂಟ್​ನ ಮುನ್ಸೂಚನೆ ನೀಡಿದ್ರಾ ಕೊಹ್ಲಿ.?

ಡಕೌಟ್​ ಆದ ಕೊಹ್ಲಿ ಪೆವಿಲಿಯನ್​ಗೆ ಸುಮ್ನೆ ಹೋಗಲಿಲ್ಲ. ಬೌಂಡರಿ ಗೆರೆ ದಾಟೋಕೂ ಮುನ್ನ ಸ್ಟ್ತಾಂಡ್​ನಲ್ಲಿದ್ದ ಫ್ಯಾನ್ಸ್​ ಕಡೆಗೆ ಕೈ ತೋರಿಸಿ ಸನ್ನೆಯಲ್ಲೇ ಧನ್ಯವಾದ ಹೇಳಿದರು. ಇದು ರಿಟೈರ್​ಮೆಂಟ್​ ವಿಚಾರದಲ್ಲಿ ಕೊಹ್ಲಿ ನೀಡಿದ ಮುನ್ಸೂಚನೆ ಎಂದು ಫ್ಯಾನ್ಸ್​ ಹೇಳ್ತಿದ್ದಾರೆ. ಕೊಹ್ಲಿ ಕೈ ಎತ್ತಿ ಧನ್ಯವಾದ ಹೇಳಿರೋದ್ರಿಂದ ಅಡಿಲೇಡ್​ ಓವಲ್​ ಪಂದ್ಯವೇ ಕೊಹ್ಲಿ ಕರಿಯರ್​ನ ಕೊನೆ ಅಂತರಾಷ್ಟ್ರೀಯ ಪಂದ್ಯ ಎಂಬ ಚರ್ಚೆ ನಡೀತಿದೆ. 

ಔಟಾದ ಬಳಿಕ ಕ್ಯಾಮರಾ ಕಣ್ಣಿಗೂ ಕಾಣದ ಕೊಹ್ಲಿ.!

ಔಟಾದ ಬಳಿಕ ಪೆವಿಲಿಯನ್​ಗೆ ವಾಪಾಸ್ಸಾದ ಕೊಹ್ಲಿ ಟೀಮ್​ ಇಂಡಿಯಾ ಬ್ಯಾಟಿಂಗ್​ ಮುಗಿಯೋವರೆಗೂ ಯಾರ ಕಣ್ಣಿಗೂ ಕಾಣಲೇ ಇಲ್ಲ. ಡ್ರೆಸ್ಸಿಂಗ್​ ರೂಮ್​, ಡಗೌಟ್​​ ಎಲ್ಲೂ ಕೂಡ ಕೊಹ್ಲಿ ಕಾಣಿಸಲೇ ಇಲ್ಲ. ಎಲ್ಲರಿಂದ ಅಂತರ ಕಾಯ್ದುಕೊಂಡು ಕೊಹ್ಲಿ ಒಂಟಿಯಾಗಿ ದೂರ ಉಳಿದಿದ್ದು ರಿಟೈರ್​​ಮೆಂಟ್​ನ ರೂಮರ್ಸ್​ಗೆ ಮತ್ತಷ್ಟು ಪುಷ್ಟಿಕೊಟ್ಟಿದೆ. 

ಪರ್ತ್​​ನಲ್ಲೂ ವಿರಾಟ್​ ಕೊಹ್ಲಿ ಶೂನ್ಯ ಸಾಧನೆ.!

ಮೊದಲ ಏಕದಿನ ಪಂದ್ಯದಲ್ಲೂ ಕೊಹ್ಲಿ ಸಾಧನೆ ಶೂನ್ಯ. ಪರ್ತ್​​​ನಲ್ಲಿ ಔಟ್​ ಸೈಡ್​ ಆಫ್​​ ಸ್ಟಂಪ್​ ಎಸೆತವನ್ನ ಕೆಣಕಿ ಕೈ ಸುಟ್ಟುಕೊಂಡಿದ್ರು. ಎಡಗೈ ವೇಗಿ ಮಿಚೆಲ್​ ಸ್ಟಾರ್ಕ್​ ಬೌಲಿಂಗ್​ನಲ್ಲಿ ಕೊಪರ್​​​ ಕನೊಲಿಗೆ ಕ್ಯಾಚ್​ ನೀಡಿ ಕೊಹ್ಲಿ ಔಟಾಗಿದ್ದರು.  

Advertisment

ಕರಿಯರ್​ನಲ್ಲೇ ಮೊದಲ ಬಾರಿಗೆ ಸತತ 2 ಡಕೌಟ್​.!

ಆಸಿಸ್​ ಸರಣಿಯ ಮೊದಲ 2 ಪಂದ್ಯಗಳಲ್ಲಿ ಡಕೌಟ್​ ಆಗಿರುವ ವಿರಾಟ್​​ ಕೊಹ್ಲಿ ಕರಿಯರ್​​ನ​​ಲ್ಲಿ ಅನಗತ್ಯ ಸಾಧನೆ ಮಾಡಿದ್ದಾರೆ. ಕರಿಯರ್​ನಲ್ಲಿ ಇದೇ ಮೊದಲ ಬಾರಿ ಸತತವಾಗಿ 2 ಬಾರಿ ಡಕೌಟ್​ ಆದ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಇಷ್ಟೇ ಅಲ್ಲ, ಟೀಮ್​ ಇಂಡಿಯಾ ಪರ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರರ ಪಟ್ಟಿಯಲ್ಲೂ 2ನೇ ಸ್ಥಾನಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ಕೆಟ್ಟ ಬ್ಯಾಟಿಂಗ್​​, ಕಳಪೆ ಫೀಲ್ಡಿಂಗ್.. ಟೀಮ್ ಇಂಡಿಯಾಗೆ 2ನೇ ಸೋಲಿನ ಜೊತೆ ಕೈ ತಪ್ಪಿದ ಸರಣಿ

VIRAT_KOHLI_NEW

ಟೀಮ್​ ಇಂಡಿಯಾ ಪರ ಹೆಚ್ಚು ಡಕೌಟ್​ 

ಜಹೀರ್​ ಖಾನ್43
ಇಶಾಂತ್​ ಶರ್ಮಾ40
ವಿರಾಟ್​ ಕೊಹ್ಲಿ40
ಹರ್ಭಜನ್​ ಸಿಂಗ್ 37

ಟೀಮ್​ ಮ್ಯಾನೇಜ್​ಮೆಂಟ್​ ಸೈಲೆಂಟಾಗೇ ಕೊಹ್ಲಿಯನ್ನ ಕೈ ಬಿಡೋಕೆ ಪ್ಲಾನ್​ ರೂಪಿಸ್ತಿದೆ. ಇದ್ರ ನಡುವೆ ವಿರಾಟ್ ಕೊಹ್ಲಿ ಸತತ 2 ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದಾರೆ. ಈ 2 ಪಂದ್ಯಗಳ ವೈಫಲ್ಯ ಕೊಹ್ಲಿ ಕರಿಯರ್​​ಗೆ ಕೊನೆ ಮೊಳೆಯನ್ನ ಜಡಿದರೂ ಅಚ್ಚರಿಪಡಬೇಕಿಲ್ಲ. 

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

IND vs AUS Virat Kohli
Advertisment
Advertisment
Advertisment