ಟೀಮ್ ಇಂಡಿಯಾ ಪ್ಲೇಯರ್​​​ಗಳಿಗೆ​ ಯೋ, ಯೋ ಅಲ್ಲ.. ಬ್ರಾಂಕೊ ಟೆಸ್ಟ್ ಪಾಸ್ ಆಗಲೇಬೇಕು!

ಇಷ್ಟು ದಿನ ಟೀಮ್ ಇಂಡಿಯಾಕ್ಕೆ ಆಯ್ಕೆ ಮಾನದಂಡ ಯೋ ಯೋ ಫಿಟ್​ನೆಸ್ ಟೆಸ್ಟ್ ಆಗಿತ್ತು. ಈ ಟೆಸ್ಟ್​ನಲ್ಲಿ ಪಾಸಾದ ಆಟಗಾರರು ತಂಡಕ್ಕೆ ಆಯ್ಕೆ ಆಗುತ್ತಿದ್ದರು. ಆದರೆ ಈಗ ಯೋ ಯೋ​ ಬದಲಿಗೆ ಬ್ರಾಂಕೊ ಟೆಸ್ಟ್ ಪರಿಚಯಿಸಲಾಗಿದೆ.

author-image
Bhimappa
SURYA_KUMAR_TEAM
Advertisment

ಟೀಮ್ ಇಂಡಿಯಾದಲ್ಲಿ ಒಂದ್ಕಡೆ ಬದಲಾವಣೆ ಗಾಳಿ ಬೀಸ್ತಿದೆ. ಆದ್ರೆ, ಈ ಬದಲಾವಣೆ ಕೇವಲ ಟೀಮ್​​ನಲ್ಲಿ ಅಲ್ಲ, ಟೀಮ್ ಇಂಡಿಯಾ ಆಟಗಾರರ ಫಿಟ್ನೆಸ್​ ವಿಚಾರದಲ್ಲಿ  ಕ್ರಾಂತಿಕಾರಿಯ ನಿರ್ಣಯ ತೆಗೆದುಕೊಂಡಿದೆ. ಇನ್ಮುಂದೆ ಟೀಮ್ ಇಂಡಿಯಾ ಆಟಗಾರರು ಆಯ್ಕೆ ಆಗಬೇಕಾದ್ರೆ, ಯೋ, ಯೋ ಟೆಸ್ಟ್​ ಅಲ್ಲ. ಬ್ರಾಂಕೊ ಟೆಸ್ಟ್ ಪಾಸ್ ಆಗಲೇಬೇಕು. ಏನಿದು ಹೊಸ ಟೆಸ್ಟ್.

ಆಟಗಾರರ ಫಿಟ್ನೆಸ್ ವಿಚಾರದಲ್ಲಿ ಬಿಸಿಸಿಐ ಕ್ರಾಂತಿಕಾರಕ ಹೆಜ್ಜೆ..!

ಇಂಗ್ಲೆಂಡ್ ಟೆಸ್ಟ್​ ಮುಗಿಸಿರುವ ಟೀಮ್ ಇಂಡಿಯಾ, ಈಗ ಏಷ್ಯಾಕಪ್​ಗೆ ಸಜ್ಜಾಗ್ತಿದೆ. ಈ ನಿಟ್ಟಿನಲ್ಲಿ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಆದ್ರೆ, ಏಷ್ಯಾಕಪ್ ಆರಂಭಕ್ಕೂ ಮುನ್ನ ಬಿಸಿಸಿಐ ಹೊಸ ಫಿಟ್ನೆಸ್ ಟೆಸ್ಟ್​ ಪರಿಚಯಿಸಲು ಮುಂದಾಗಿದೆ. ಆಟಗಾರರ ಫಿಟ್ನೆಸ್ ವಿಚಾರದಲ್ಲಿ ರಾಜೀ ಮಾಡಿಕೊಳ್ಳದ ಬಿಸಿಸಿಐ, ಕ್ರಾಂತಿಕಾರಿ ಬದಲಾವಣೆಗೆ ನಿರ್ಧರಿಸಿದ್ದಾರೆ.

KOHLI_AXAR

ಇಷ್ಟು ದಿನ ಟೀಮ್ ಇಂಡಿಯಾ ಆಯ್ಕೆ ಮಾನದಂಡ ಯೋ ಯೋ ಫಿಟ್​ನೆಸ್ ಟೆಸ್ಟ್ ಆಗಿತ್ತು. ಯೋ ಯೋ ಟೆಸ್ಟ್​ನಲ್ಲಿ ಪಾಸಾದವರು ಟೀಮ್ ಇಂಡಿಯಾ ಆಯ್ಕೆಗೆ ಅರ್ಹರಾಗ್ತಿದ್ದರು. ಆದ್ರೀಗ ಯೋ ಯೋ ಟೆಸ್ಟ್​ ಬದಲಿಗೆ ಬ್ರಾಂಕೊ ಟೆಸ್ಟ್  ಪರಿಚಯಿಸ್ತಿದೆ. ಆಟಗಾರರ ಫಿಟ್ನೆಸ್ ಲೆವೆಲ್​ ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದಲೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 

ಏನಿದು ‘ಬ್ರಾಂಕೊ’..? ಹೇಗಿರುತ್ತೆ ಟೆಸ್ಟ್​..?

ಬ್ರಾಂಕೊ ಫಿಟ್ನೆಸ್ ಟೆಸ್ಟ್​.. ಇದು ರಗ್ಬಿ ಮಾದರಿ ಫಿಟ್ನೆಸ್ ಟೆಸ್ಟ್​ ಆಗಿದೆ. ನ್ಯೂಜಿಲೆಂಡ್​, ರಗ್ಬಿ ಆಟಗಾರರಿಗಾಗಿ ಪರಿಚಯಿಸಿದ್ದ ಈ ಫಿಟ್ನೆಸ್ ಟೆಸ್ಟ್​ ಅನ್ನೇ, ಈಗ ಕ್ರಿಕೆಟ್​​ನಲ್ಲೂ ಉಪಯೋಗಿಸ್ತಿದೆ. ಅಷ್ಟೇ ಅಲ್ಲ, ಫುಟ್ಬಾಲ್​​ ಆಟಗಾರರ ಫಿಟ್ನೆಸ್ ಟೆಸ್ಟ್​ಗೂ ಇದೇ ಬ್ರಾಂಕೊ ಟೆಸ್ಟ್​ ನಡೆಸಲಾಗುತ್ತೆ. ರನ್ನಿಂಗ್ ಮಾದರಿಯ ಈ ಬ್ರಾಂಕೊ ಟೆಸ್ಟ್​, ಸೇಮ್ ಟು ಸೇಮ್ ರಗ್ಬಿ ಆಟದಂತೆಯೇ ಇರುತ್ತೆ. ಆದ್ರೆ, ಈ ಫಿಟ್ನೆಸ್​ ಟೆಸ್ಟ್​ ಆಟಗಾರರಿಗೆ ಹೊಸ ಅಗ್ನಿಪರೀಕ್ಷೆಯೇ ಆಗಿದೆ.

ಬ್ರಾಂಕೊ ಟೆಸ್ಟ್​ ಹೇಗಿರುತ್ತೆ..?

  • ಒಂದು ಸೆಟ್​​ನಲ್ಲಿ 20 ಮೀಟರ್, 40 ಮೀಟರ್​, 60 ಮೀಟರ್​​​ ರನ್ನಿಂಗ್
  • ಶಟಲ್ ಮಾದರಿಯಲ್ಲಿ ಮೂರು ಅಂತರವನ್ನ ಆಟಗಾರ ಕ್ರಮಿಸಬೇಕು
  • ಒಂದು ಸೆಟ್ ಪೂರ್ಣಗೊಳಿಸಲು ಆಗುತ್ತೆ 240 ಮೀಟರ್ ದೂರ
  • ಒಂದು ಸೆಟ್​​ನ ಐದು ಬಾರಿ ಬ್ರೇಕ್​ ತೆಗೆದುಕೊಳ್ಳದೆ ಓಡಬೇಕು
  • 1,200 ಮೀಟರ್ ದೂರ 6 ನಿಮಿಷದಲ್ಲಿ ಪೂರ್ಣಗೊಳಿಸಬೇಕು

ಇದನ್ನೂ ಓದಿ:Asia Cup; ಭಾರತ- ಪಾಕ್​ ಪಂದ್ಯ ನಡೆಯುತ್ತೋ, ಇಲ್ವೋ; ಕ್ರೀಡಾ ಸಚಿವಾಲಯದ ನಿರ್ಧಾರ ಏನ್?

KOHLI (12)

ಹೊಸ ಫಿಟ್ನೆಸ್ ಟೆಸ್ಟ್​ಗೆ ಬೌಲರ್​ಗಳೇ ಆದ್ರಾ ಕಾರಣ..?

ಬಿಸಿಸಿಐನ ಸೆಂಟರ್ ಆಫ್ ಎಕ್ಸ್​ಲೆನ್ಸ್​, ಹೊಸ ಫಿಟ್ನೆಸ್ ಟೆಸ್ಟ್​ ಪರಿಚಯಿಸಲು ಕಾರಣ ಬೌಲರ್​ಗಳು ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ, ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಬೌಲರ್​ಗಳ ಫಿಟ್ನೆಸ್ ಕಳವಳವಾಗಿತ್ತು. ಸಿರಾಜ್ ಬಿಟ್ರೆ, ಜಸ್​ಪ್ರೀತ್ ಬೂಮ್ರಾ, ಆಕಾಶ್ ದೀಪ್ ವಿಶ್ರಾಂತಿಯ ಮೊರೆ ಹೋಗಿದ್ದರು. ಅಭ್ಯಾಸದ ವೇಳೆ ಅರ್ಷ್​ದೀಪ್ ಸಿಂಗ್ ಇಂಜುರಿಗೆ ತುತ್ತಾಗಿದ್ದರು. ಇದಕ್ಕೆ ಕಾರಣ ಟೀಮ್ ಇಂಡಿಯಾ ಬೌಲರ್​ಗಳು, ಕೇವಲ ಜಿಮ್‌ನಲ್ಲಿ ಹೆಚ್ಚು ಸಮಯ ಕಳೆಯುವುದಾಗಿದೆ. ರನ್ನಿಂಗ್​ನಿಂದ ದೂರ ಇರುವ ಬೌಲರ್​ಗಳು, ಮೈದಾನದಲ್ಲಿ ನಿರಂತರವಾಗಿ ಓಡಬೇಕಿರುತ್ತೆ. ಬೌಲಿಂಗ್ ಮಾಡಬೇಕಿರುತ್ತೆ. ಹೀಗಾಗಿ ಬ್ರಾಂಕೊ ಫಿಟ್ನೆಸ್​​ ಪರಿಚಯಿಸಿದ್ರೆ, ಬೌಲರ್​ಗಳು ದಣಿವಿಲ್ಲದೆ ಹೆಚ್ಚು ಕಾಲ ಇರಬಹುದು. ಬೌಲಿಂಗ್​ ವೇಗ ಕಾಯ್ದುಕೊಳ್ಳಬಹುದು ಅನ್ನೋದು ಬಿಗ್​ಬಾಸ್​ಗಳ ಲೆಕ್ಕಾಚಾರ.

ಯೋ ಯೋ ಟೆಸ್ಟ್​ಗೆ ಹೋಲಿಕೆ ಮಾಡಿದ್ರೆ, ವಿಭಿನ್ನವಾಗಿರುವ ಈ ಟೆಸ್ಟ್​, ಆಟಗಾರರ ಪಾಲಿಗೆ ಇನ್ಮುಂದೆ ಹೊಸ ಸವಾಲ್ ಆಗಲಿದ್ದು, ಎಷ್ಟರ ಮಟ್ಟಿಗೆ ಈ ಫಿಟ್ನೆಸ್ ಟೆಸ್ಟ್​ ಟೀಮ್ ಇಂಡಿಯಾ ಆಟಗಾರರ ಕಾರ್ಯಕ್ಷಮತೆ ಹೆಚ್ಚಿಸುತ್ತೆ ಎನ್ನುವುದು ಪ್ರಶ್ನೆ ಆಗಿದೆ. ಈ ಬಗ್ಗೆ ಕಾದು ನೋಡಬೇಕಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Cricket news in Kannada Asia Cup 2025 Indian cricket team news cricket players
Advertisment