WPL Final 2026: ಕಿರೀಟಕ್ಕಾಗಿ ಆರ್​​ಸಿಬಿಗೆ ಇವತ್ತು ಡೆಲ್ಲಿ ಸವಾಲ್.. ‘ಕಪ್ ನಮ್ದೇ’ ಎಂದ ಫ್ಯಾನ್ಸ್​..!

ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಆವೃತ್ತಿಯ ಫೈನಲ್ ಮ್ಯಾಚ್ ಇವತ್ತು ನಡೆಯಲಿದೆ. ಇಡೀ ಟೂರ್ನಿಯಲ್ಲಿ ಅಬ್ಬರಿಸಿದ್ದ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ಪ್ರಶಸ್ತಿಗಾಗಿ ಸೆಣಸಾಡಲಿವೆ.

author-image
Ganesh Kerekuli
RCB vs DC
Advertisment

ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಆವೃತ್ತಿಯ ಫೈನಲ್ ಮ್ಯಾಚ್ ಇವತ್ತು ನಡೆಯಲಿದೆ. ಇಡೀ ಟೂರ್ನಿಯಲ್ಲಿ ಅಬ್ಬರಿಸಿದ್ದ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ಪ್ರಶಸ್ತಿಗಾಗಿ ಸೆಣಸಾಡಲಿವೆ. 

ಇದನ್ನೂ ಓದಿ: RCB ಸೇಲ್​ಗೆ ಫೈನಲ್ ರೇಟ್ ಫಿಕ್ಸ್.. ಓನರ್​ ಪಟ್ಟದ ಮೇಲೆ ಅನುಷ್ಕಾ ಶರ್ಮಾ ಕಣ್ಣು..!

ಈ ಹೈವೋಲ್ಟೇಜ್ ಫೈನಲ್ ಪಂದ್ಯದ ದಿನಾಂಕ, ಸಮಯ ಮತ್ತು ವೀಕ್ಷಣೆಯ ವಿವರಗಳು ಇಲ್ಲಿದೆ. 

  • ಪಂದ್ಯದ ದಿನಾಂಕ ಮತ್ತು ಸ್ಥಳ
  • ದಿನಾಂಕ: ಫೆಬ್ರವರಿ 5, 2026 (ಇವತ್ತು)
  • ಸ್ಥಳ: ಬಿ.ಸಿ.ಎ ಸ್ಟೇಡಿಯಂ (ಕೋಟಂಬಿ), ವಡೋದರಾ.
  • ಸಮಯ: ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, ಸಂಜೆ 7:00 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ
  • ನೇರ ಪ್ರಸಾರ ಎಲ್ಲಿ ವೀಕ್ಷಿಸಬಹುದು?: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ (Star Sports Network).
  • ಲೈವ್ ಸ್ಟ್ರೀಮಿಂಗ್: ಜಿಯೋಹಾಟ್‌ಸ್ಟಾರ್ (JioHotstar) ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರಲಿದೆ.

ತಂಡಗಳ ಹಾದಿ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಇನ್ನೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಫೈನಲ್‌ ಪ್ರವೇಶಿಸಿದೆ.

ಆರ್‌ಸಿಬಿಗೆ 2ನೇ ಪ್ರಶಸ್ತಿಯ ಕನಸು

ಎರಡನೇ ಸೀಸನ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆರ್‌ಸಿಬಿ ತಂಡವು ಈ ಬಾರಿ ಕೂಡ ಭರ್ಜರಿ ಫಾರ್ಮ್‌ನಲ್ಲಿದೆ. ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಅವರಂತಹ ಆಟಗಾರ್ತಿಯರು ತಂಡದ ಬಲವಾಗಿದ್ದಾರೆ. ಮತ್ತೊಂದೆಡೆ ಮೂರು ಬಾರಿ ಫೈನಲ್ ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬಾರಿಗೆ ಟ್ರೋಫಿ ಗೆಲ್ಲುವ ತವಕದಲ್ಲಿದೆ. ಒಟ್ಟಿನಲ್ಲಿ ವಡೋದರಾದಲ್ಲಿ ನಡೆಯಲಿರುವ ಈ ಫೈನಲ್ ಪಂದ್ಯವು ಕೋಟಿಗಟ್ಟಲೆ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. 'ಈ ಸಲವೂ ಕಪ್ ನಮ್ದೇ' ಎನ್ನುತ್ತಿರುವ ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಗೆಲುವಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿನನ್ನ ಉಳಿಸಲು ಹೋಗಿ ಅಣ್ಣ ಬಲಿಯಾದ -ಕಮಲಾಕರ್ ಭಟ್ ಕೇಸ್​ನಲ್ಲಿ ಸಂತ್ರಸ್ತ ಕಣ್ಣೀರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WPL 2026 rcb vs dc
Advertisment