/newsfirstlive-kannada/media/media_files/2025/10/10/yashasvi-jaiswal-2025-10-10-13-49-49.jpg)
India vs West Indies: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ನಲ್ಲಿ ಭಾರತ ತಂಡವು ವೆಸ್ಟ್​ ವಿಂಡೀಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡ್ತಿದೆ. ಯಂಗ್ ಬ್ಯಾಟ್ಸಮನ್​​ ಯಶಸ್ವಿ ಜೈಸ್ವಾಲ್ (Yashasvi Jaiswal) ಅಮೋಘ ಶತಕ ಬಾರಿಸಿದ್ದು, ಟೀಂ ಇಂಡಿಯಾ ಸರಣಿ ಗೆಲುವಿಗಾಗಿ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಟಾಸ್​ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರರಾದ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ (KL Rahul) ಅದ್ಭುತ ಪ್ರದರ್ಶನ ನೀಡಿದರು. ಆದರೆ ರಾಹುಲ್ ಅವರು 54 ಬಾಲ್​ನಲ್ಲಿ 38 ರನ್​ಗಳಿಸಿ ಆಟ ಮುಗಿಸಿದರು.
ಕೊನೆಗೆ ಬಂದ ಸಾಯಿ ಸುದರ್ಶನ್ (Sai Sudharsan) ಜೈಸ್ವಾಲ್​ಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. 106 ಬಾಲ್​ನಲ್ಲಿ 58 ರನ್​ಗಳಿಸಿ ಸುದರ್ಶನ್ ಮಿಂಚಿನ ಆಟ ಆಡ್ತಿದ್ದಾರೆ. ಇತ್ತ ಅಮೋಘ ಪ್ರದರ್ಶನ ನೀಡುತ್ತಿರುವ ಜೈಸ್ವಾಲ್ 146 ಬಾಲ್​ನಲ್ಲಿ 102 ರನ್​ಗಳಿಸಿದ್ದಾರೆ. 69.86 ಸ್ಟ್ರೈಕ್​​ರೇಟ್​​ನಲ್ಲಿ ಬ್ಯಾಟ್ ಬೀಸಿರುವ ಜೈಸ್ವಾಲ್, 16 ಬೌಂಡರಿ ಬಾರಿಸಿದ್ದಾರೆ. ಸದ್ಯ ಒಂದು ವಿಕೆಟ್ ಕಳೆದುಕೊಂಡಿರುವ ಭಾರತ 198 ರನ್​ಗಳಿಸಿ ಆಡುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ