/newsfirstlive-kannada/media/media_files/2025/08/28/rcb-cares-2025-08-28-15-27-04.jpg)
ಐಪಿಎಲ್ -2026 (IPL 2026) ಮಿನಿ ಹರಾಜಿಗೆ ಡೇಟ್ ಬಹುತೇಕ ಫಿಕ್ಸ್ ಆಗಿದ್ದು, ಡಿಸೆಂಬರ್ ಎರಡನೇ ಅಥವಾ ಮೂರನೇ ವಾರದಲ್ಲಿ ನಡೆಯಲಿದೆ. ಅಂದರೆ ಡಿಸೆಂಬರ್ 13 ರಿಂದ 15 ಒಳಗೆ ನಡೆಸಲು ಪ್ಲಾನ್ ಮಾಡಲಾಗುತ್ತಿದೆ ಎಂಬ ವರದಿಯಾಗಿದೆ.
ಈ ಬಗ್ಗೆ ಬಿಸಿಸಿಐ ಮತ್ತು ಫ್ರಾಂಚೈಸಿ ನಡುವೆ ಮಾತುಕತೆ ನಡೆದಿದೆ. ಶೀಘ್ರದಲ್ಲೇ ಐಪಿಎಲ್ ಹರಾಜಿಗೆ (IPL auction) ಸಂಬಂಧಿಸಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಈ ಬಾರಿ ಹರಾಜು ಪ್ರಕ್ರಿಯೆ ಎಲ್ಲಿ ನಡೆಸಬೇಕು ಅನ್ನೋದ್ರ ಬಗ್ಗೆ ಸ್ಪಷ್ಟತೆ ಇಲ್ಲ.
ಇದನ್ನೂ ಓದಿ:ಗಿಲ್​ ಕ್ರೇಜ್​.. ಕೊಹ್ಲಿ ನಂತರ ಚಮತ್ಕಾರ ಸೃಷ್ಟಿಸಿದ ಪ್ರಿನ್ಸ್
ಕಳೆದ ಎರಡು ಸೀಸನ್​​ಗಳಿಗೆ ಹರಾಜು ವಿದೇಶದಲ್ಲಿ ನಡೆದಿತ್ತು. 2023ರಲ್ಲಿ ದುಬೈನಲ್ಲಿ , 2024ರಲ್ಲಿ ಸೌದಿ ಅರೇಬಿಯಾದಲ್ಲಿ ನಡೆದಿತ್ತು. ಈ ಬಾರಿ ಭಾರತದಲ್ಲೇ ಮಿನಿ ಹರಾಜು ನಡೆಸಲು ಬಿಸಿಸಿಐ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಇನ್ನು ಫ್ರಾಂಚೈಸಿಗೆ ಡೆಡ್​ಲೈನ್ ನೀಡಲಾಗಿದೆ. ನವೆಂಬರ್ 15ರೊಳಗೆ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ರಿಲೀಸ್ ಮಾಡುವ ಆಟಗಾರರ ಹೆಸರನ್ನು ರಿವೀಲ್ ಮಾಡಬೇಕಿದೆ. ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್​​ನಲ್ಲಿ ಭಾರೀ ಬದಲಾವಣೆಯ ನಿರೀಕ್ಷೆ ಮಾಡಲಾಗಿದೆ.
ಇನ್ನು, ಚಾಂಪಿಯನ್ ಆರ್​​ಸಿಬಿಯಿಂದ ಐದು ಆಟಗಾರರಿಗೆ ಗೇಟ್​ಪಾಸ್ ನೀಡುವ ಸಾಧ್ಯತೆ ಇದೆ. ಲಿಯಾಮ್ ಲಿವಿಂಗ್​ಸ್ಟೋನ್, ಸುಯೇಶ್ ಶರ್ಮಾ, ಯಶ್ ದಯಾಳ್, ರಸಿಕ್ ಧರ್​​ ಹಾಗೂ ಮಯಾಂಕ್, ಪಡಿಕ್ಕಲ್​ ಇವರಲ್ಲಿ ಒಬ್ಬರನ್ನ ರಿಲೀಸ್ ಮಾಡುವ ನಿರೀಕ್ಷೆ ಇದೆ.
ಇದನ್ನೂ ಓದಿ: ಘಟಾನುಘಟಿ ಸ್ಟಾರ್​ಗಳಿಗೆ RCB ಗೇಟ್​ಪಾಸ್.. ಯಾರನ್ನೆಲ್ಲ ರಿಲೀಸ್ ಮಾಡುತ್ತೆ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ