Advertisment

ಘಟಾನುಘಟಿ ಸ್ಟಾರ್​ಗಳಿಗೆ RCB ಗೇಟ್​ಪಾಸ್.. ಯಾರನ್ನೆಲ್ಲ ರಿಲೀಸ್ ಮಾಡುತ್ತೆ..?

ಸೀಸನ್​-18 ಐಪಿಎಲ್​ ಗೆದ್ದ RCB ಮುಂದಿನ ಸೀಸನ್​ಗೆ ಸಿದ್ಧತೆ ಅರಭಿಸಿದೆ. ಈ ನಿಟ್ಟಿನಲ್ಲಿ ಅಖಾಡಕ್ಕಿಳಿದಿರುವ ಟೀಮ್ ಮ್ಯಾನೇಜ್​ಮೆಂಟ್​, ಕೆಲ ಆಟಗಾರರಿಗೆ ಬಿಗ್ ಶಾಕ್ ನೀಡಲು ರೆಡಿಯಾಗಿದೆ. ಮಿನಿ ಆಕ್ಷನ್​ಗೂ ಮುನ್ನ ಘಟಾನುಘಟಿಗಳಿಗೆ ಗೇಟ್​ಪಾಸ್​ ನೀಡಲು ಫ್ರಾಂಚೈಸಿ ನಿರ್ಧರಿಸಿದೆ.

author-image
Ganesh Kerekuli
Devadatta Padikkal
Advertisment

ಸೀಸನ್​-18 ಐಪಿಎಲ್​ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈಗ ಮುಂದಿನ ಸೀಸನ್​ಗೆ ಸಿದ್ಧತೆ ಅರಭಿಸಿದೆ. ಈ ನಿಟ್ಟಿನಲ್ಲಿ ಅಖಾಡಕ್ಕಿಳಿದಿರುವ ಟೀಮ್ ಮ್ಯಾನೇಜ್​ಮೆಂಟ್​, ಕೆಲ ಆಟಗಾರರಿಗೆ ಬಿಗ್ ಶಾಕ್ ನೀಡಲು ರೆಡಿಯಾಗಿದೆ. ಮಿನಿ ಆಕ್ಷನ್​ಗೂ ಮುನ್ನ ಘಟಾನುಘಟಿಗಳಿಗೆ ಗೇಟ್​ಪಾಸ್​ ನೀಡಲು ಫ್ರಾಂಚೈಸಿ ನಿರ್ಧರಿಸಿದೆ. 

Advertisment

ಇದನ್ನೂ ಓದಿ: ಕ್ರಿಕೆಟ್ ಲೋಕದಲ್ಲಿ ಮತ್ತೊಂದು ಮುರುಳಿ ವಿಜಯ್ ಸ್ಟೋರಿ.. ಸೆಹ್ವಾಗ್-ಆರತಿ ಲವ್ ಸ್ಟೋರಿ ಹೇಗಿತ್ತು..?

RCB (38)

ಪರ್ಫೆಕ್ಟ್​ ಮ್ಯಾಚ್ ವಿನ್ನಿಂಗ್ ಕಾಂಬಿನೇಷನ್ ಹೊಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಯಲ್ ಆಟವಾಡಿ ಚಾಂಪಿಯನ್​ ಆಗಿದ್ದಾಯ್ತು. ಇದೀಗ ಮುಂದಿನ ಸೀಸನ್​ನಲ್ಲಿ ಚಾಂಪಿಯನ್​ ಪಟ್ಟ ಉಳಿಸಿಕೊಳ್ಳೋಕೆ ಸಿದ್ಧತೆ ಆರಂಭವಾಗಿದೆ. ಆರ್​ಸಿಬಿ ಸೀಸನ್​​-18ರಲ್ಲಿ ಅದ್ಭುತ ಪ್ರದರ್ಶನ ನೀಡಿದೆ ನಿಜ. ಕೆಲ ಆಟಗಾರರ ಪ್ರದರ್ಶನ ಮಾತ್ರ ತೃಪ್ತಿ ತಂದಿಲ್ಲ. ಹೀಗಾಗಿ 2026ರ ಮಿನಿ ಹರಾಜಿಗೂ ಮುನ್ನ ಕೆಲ ಆಟಗಾರರನ್ನು ಕೈಬಿಡಲು ಆರ್​​ಸಿಬಿ ಮುಂದಾಗಿದೆ. ಈ ಲಿಸ್ಟ್​ನಲ್ಲಿ ಮ್ಯಾಚ್ ವಿನ್ನರ್ ಪ್ಲೇಯರ್​ಗಳೇ ಅಡಗಿದ್ದಾರೆ.  

ಲಿವಿಂಗ್ ಸ್ಟೋನ್​​ಗೆ ಗೇಟ್​​ಪಾಸ್ ಫಿಕ್ಸ್​!

ಲಿಯಾಂಮ್ ಲಿವಿಂಗ್ ಸ್ಟೋನ್.. ಆರ್​ಸಿಬಿಯ ಪವರ್​ ಹಿಟ್ಟರ್ ಅಂಡ್ ಗೇಮ್ ಚೇಂಜರ್ ಪ್ಲೇಯರ್. ಈತ ಸೀಸನ್​​-18ರ ಐಪಿಎಲ್​ನಲ್ಲಿ ನೀಡಿದ ಪ್ರದರ್ಶನ ನಿಜಕ್ಕೂ ಅಟ್ಟರ್ ಫ್ಲಾಫ್. 10.75 ಕೋಟಿಗೆ ಆರ್​ಸಿಬಿಗೆ ಬಂದಿದ್ದ ಸ್ಟೋನ್​, 10 ಮ್ಯಾಚ್​ಗಳಿಂದ ಗಳಿಸಿದ ರನ್ 112.  ಪಂದ್ಯಕ್ಕೆ 11.2 ರನ್.. ಬಿಟ್ಟು ಕೊಟ್ಟಿದ್ದು 8.44ರ ಏಕಾನಮಿಯಲ್ಲಿ ರನ್.. ಹೀಗಾಗಿ ಲೋವರ್ ಆರ್ಡರ್​ನಲ್ಲಿ ಟಿಮ್ ಡೇವಿಡ್, ರೊಮಾರಿಯೀ ಶೆಫರ್ಡ್​ರಂಥ ಸಿಕ್ಸ್​ ಹಿಟ್ಟರ್ ಮಷಿನ್ಸ್​ ಇದ್ದಾಗ ಈತನ್ಯಾಕೆ ಎಂಬ ನಿರ್ಧಾಕ್ಕೆ ಆರ್​ಸಿಬಿ ಬಂದಾಗಿದೆ.

Advertisment

ಇದನ್ನೂ ಓದಿ:ಪೃಥ್ವಿ ಶಾಗೆ ಇದೆಲ್ಲ ಬೇಕಿತ್ತಾ..? ಯಾಕೆ ಹೀಗೆ ಮಾಡ್ತಾರೆ..?

RCB_WIN (1)

ಕಳೆದ ಸೀಸನ್​ನಲ್ಲಿ 15 ಪಂದ್ಯಗಳಿಂದ ಕೇವಲ 13 ವಿಕೆಟ್ ಪಡೆದ ಯಶ್ ದಯಾಳ್, 9.52ರ ಎಕಾನಮಿಯಲ್ಲಿ ರನ್ ನೀಡಿದ್ರು. ಆಫ್​ ದಿ ಫೀಲ್ಡ್​ನಲ್ಲಿ ವಿವಾದ ಮತ್ತೊಂದೆಡೆ. ರೇಪ್​ ಕೇಸ್​ನ ಆರೋಪಿಯಾಗಿರೋ ಯಶ್ ದಯಾಳ್​ನ ಉತ್ತರ ಪ್ರದೇಶ ಟಿ20 ಟೂರ್ನಿಯಿಂದ ಬ್ಯಾನ್ ಮಾಡಲಾಗಿತ್ತು. ಈಗಾಗಲೇ ಕಾಲ್ತುಳಿತ ಪ್ರಕರಣದಿಂದ ಭಾರೀ ಅಪಮಾನಕ್ಕೀಡಗಿರುವ ಆರ್​ಸಿಬಿ, ಮತ್ತೊಂದು ಕಪ್ಪು ಚುಕ್ಕೆ ಯಾಕೆ ಎಂಬ ಕಾರಣಕ್ಕೆ  ಯಶ್​ ದಯಾಳ್​ನ ರಿಲೀಸ್​ ಮಾಡೋ ಸಾಧ್ಯತೆ ದಟ್ಟವಾಗಿದೆ.

ಸುಯಶ್ ಶರ್ಮಾ..?

ಸೀಸನ್​-18ರ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡಿದ್ದ ಒನ್​ ಅಂಡ್ ಒನ್ಲಿ ಸ್ಪೆಷಲಿಸ್ಟ್ ಸ್ಪಿನ್ನರ್ ಸುಯಶ್ ಶರ್ಮ. ಈ ಮಿಸ್ಟರಿ ಸ್ಪಿನ್ನರ್ ಆನ್​​ಫಿಲ್ಡ್​ನಲ್ಲಿ ಎಫೆಕ್ಟೀವ್ ಎನಿಸಲೇ ಇಲ್ಲ. 14 ಪಂದ್ಯಗಳಿಂದ ಜಸ್ಟ್​ 8 ವಿಕೆಟ್ ಪಡೆದ ಸುಯಶ್​ ಸಾಧಾರಣ ಪರ್ಫಾಮೆನ್ಸ್​ ನೀಡಿದ್ರು. ನಿರೀಕ್ಷೆಯನ್ನ ರೀಚ್​ ಮಾಡದ ಸುಯಶ್​​ನ ಆರ್​ಸಿಬಿ, ರಿಲೀಸ್ ಮಾಡೋ ಲೆಕ್ಕಚಾರದಲ್ಲಿದೆ.

ಇದನ್ನೂ ಓದಿ: ಪಾಂಡ್ಯ ರೇಂಜ್ ಬೇರೆ.. ಈ ಹೊಸ ಕಾರಿನ ಬೆಲೆ ಎಷ್ಟು ಕೋಟಿ..?

rcb cares

ಮಯಾಂಕ್ ಅಗರ್ವಾಲ್ & ದೇವದತ್ ಪಡಿಕ್ಕಲ್.. ಆರ್​ಸಿಬಿ ಗೆಲುವಿನಲ್ಲಿ ಇವರ ಕಾಣಿಕೆ ಮರೆಯುವಂತಿಲ್ಲ. ಆದ್ರೆ, ದೇವದತ್ ಪಡಿಕ್ಕಲ್ ಇಂಜುರಿ ಕಾರಣಕ್ಕೆ ಆರ್​ಸಿಬಿ ತಂಡಕ್ಕೆ ಎಂಟ್ರಿ ನೀಡಿದ ಮಯಾಂಕ್, 4 ಪಂದ್ಯಗಳಿಂದ 95 ರನ್ ಗಳಿಸಿದ್ದಾರೆ. ದೇವದತ್ ಪಡಿಕ್ಕಲ್ ಸಹ 10 ಪಂದ್ಯಗಳಿಂದ 247 ರನ್​ ಗಳಿಸಿದ್ದಾರೆ. 150ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಇವರಿಬ್ಬರಲ್ಲಿ ಯಾರು ರಿಲೀಸ್ ಆಗ್ತಾರೆ ಎಂಬ ಪ್ರಶ್ನೆ ಸಹಜವಾಗೇ ಉದ್ಬವಿಸಿದೆ. ಸದ್ಯದ ಮಾಹಿತಿ ಪ್ರಕಾರ ಮಯಾಂಕ್​ಗೆ ಗೇಟ್​ಪಾಸ್ ನೀಡೋದು ಬಹುತೇಕ ಖಚಿತವಾಗಿದೆ.

Advertisment

ಜಮ್ಮು ಕಾಶ್ಮೀರದ ರಸಿಕ್‌ ಧರ್​​ ರಿಲೀಸ್.​​.?

ರಸಿಕ್ ಧರ್.. ಜಮ್ಮು ಕಾಶ್ಮೀರದ ಈ ವೇಗಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು.  ಈ ಸ್ಫಿಡ್​ಗೆ ಎದುರಾಳಿ ಢರ್ ಆಗ್ತಾರೆ. ಮ್ಯಾಚ್ ವಿನ್ನರ್ ಆಗಿ ಮೆರೆದಾಡ್ತಾರೆ ಎಂಬ ಭರವಸೆ ಇತ್ತು. ಆದ್ರೆ, ಸಿಕ್ಕ ಅವಕಾಶ ನೆಲಕ್ಕೆ ಚೆಲ್ಲಿದ ರಸಿಕ್ ಧರ್, 11.67ರ ಏಕಾನಮಿಯಲ್ಲಿ ರನ್ ನೀಡಿದರು. ಸೀಸನ್​-18ರಲ್ಲಿ ಆರ್​ಸಿಬಿ ಪರ ಆಡಿದ ದುಬಾರಿ ಬೌಲರ್ ಅಂದ್ರೆ ಅದು ರಸಿಕ್​ಧರ್​.! ಹೀಗಾಗಿ ಈ ವೇಗಿಯನ್ನ ಆರ್​ಸಿಬಿಯಿಂದ ರಿಲೀಸ್ ಮಾಡೋ ಸಾಧ್ಯತೆಯಿದೆ.

ಇದನ್ನೂ ಓದಿ: ಸ್ನೇಹಿತ ಸೆಹ್ವಾಗ್​ ಪತ್ನಿ ಜೊತೆ ಬಿಸಿಸಿಐ ಅಧ್ಯಕ್ಷ ಮಿಥುನ್ ಅಫೇರ್..? ಏನಿದು ಕತೆ..?

RCB_TEAM (1)

2026ರ ಐಪಿಎಲ್​ ಸೀಸನ್​ಗಾಗಿ ಈಗಿನಿಂದಲೇ ಕಾರ್ಯಪ್ರವೃತ್ತವಾಗಿರುವ ಆರ್​ಸಿಬಿ, ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಮತ್ತಷ್ಟು ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಯಾರಿಗೆ ಕೊಕ್ ನೀಡಿ, ಯಾರಿಗೆ ಮಿನಿ ಹರಾಜಿನಲ್ಲಿ ಮಣೆ ಹಾಕುತ್ತೆ ಕಾದು ನೋಡೋಣ.

Advertisment

ಇದನ್ನೂ ಓದಿ: ದ್ರಾವಿಡ್​​​ಗೆ ಕ್ರೆಡಿಟ್ ಕೊಡುತ್ತಲೇ ಗಂಭೀರ್​ಗೆ ಕೌಂಟರ್​ ಕೊಟ್ಟ ರೋಹಿತ್​..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB CARES RCB
Advertisment
Advertisment
Advertisment