/newsfirstlive-kannada/media/media_files/2025/09/14/surya_head_coach-2025-09-14-18-24-16.jpg)
ಟೀಮ್ ಇಂಡಿಯಾ ಹಾಗೂ ಬದ್ಧವೈರಿ ಪಾಕಿಸ್ತಾನದ ನಡುವಿನ ಏಷ್ಯಾ ಕಪ್ನ ಟಿ20 ಹೈವೋಲ್ಟೇಜ್ ಪಂದ್ಯ ಇಂದು 8 ಗಂಟೆಯಿಂದ ಆರಂಭವಾಗಲಿದೆ. ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಈ ಮಹತ್ವದ ಪಂದ್ಯವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಇದ್ದಾರೆ. ಟಿಕೆಟ್ಗಳೆಲ್ಲ ಸೋಲ್ಡ್ ಔಟ್ ಆಗಿವೆ. ಆದರೆ ಭಾರತ- ಪಾಕ್ ಲೈವ್ ಮ್ಯಾಚ್ ಅನ್ನು ಈ ಚಾನೆಲ್ನಲ್ಲಿ ಉಚಿತವಾಗಿ ವೀಕ್ಷಿಸಬಹುದು.
ಏಷ್ಯಾ ಕಪ್ ಟೂರ್ನಿಯ ಗ್ರೂಪ್ ಸ್ಟೇಜ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಈಗಾಗಲೇ ಯುಎಇ ವಿರುದ್ಧ ಸುಲಭ ಜಯ ಸಾಧಿಸಿದೆ. 9 ವಿಕೆಟ್ಗಳಿಂದ ಗೆಲುವು ಪಡೆದು ಈಗ ಪಾಕ್ ವಿರುದ್ಧ 2ನೇ ಪಂದ್ಯ ಆಡಲಿದೆ. ಸದ್ಯ ಗೆಲುವಿನ ಅಲೆಯಲ್ಲಿರುವ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಅದನ್ನೇ ಮುಂದುವರೆಸಿಕೊಂಡು ಹೋಗುವ ನಿರೀಕ್ಷೆಯಲ್ಲಿದೆ. ಇನ್ನು ಒಮನ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಸಲ್ಮಾನ್ ಅಲಿ ಆಘಾ ಪಡೆ ಜಯ ಪಡೆದು ಟೀಮ್ ಇಂಡಿಯಾ ವಿರುದ್ಧ ಅಖಾಡಕ್ಕೆ ಧುಮುಕುತ್ತಿದೆ.
ಇದನ್ನೂ ಓದಿ:ಭಾರತ -ಪಾಕ್ ಏಷ್ಯಾಕಪ್ T20 ಮ್ಯಾಚ್ಗೆ ಕೌಂಟ್ಡೌನ್.. ಯಾವ ಟೀಮ್ ಸ್ಟ್ರಾಂಗ್..?
ಭಾರತ ಹಾಗೂ ಪಾಕಿಸ್ತಾನದ ನಡುವಿನ ಏಷ್ಯಾಕಪ್‌ನ 6ನೇ ಪಂದ್ಯ ಇವತ್ತು ರಾತ್ರಿ 8:00 ಗಂಟೆಗೆ ದುಬೈ ಮೈದಾನದಲ್ಲಿ ಆರಂಭವಾಗಲಿದೆ. ಹಾಗಾದ್ರೆ ಈ ಪಂದ್ಯದ ಈ ಚಾನೆಲ್ಗಳಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ. ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದ್ದು ಈ ಚಾನೆಲ್ನಲ್ಲಿ ಫ್ರೀಯಾಗಿ ನೀವು ಮ್ಯಾಚ್ ವೀಕ್ಷಿಸಬಹುದು.
ಏಷ್ಯಾಕಪ್ ಟೂರ್ನಮೆಂಟ್‌ನ ಅಧಿಕೃತ ಪ್ರಸಾರಕ ಸ್ಪೋರ್ಟ್ಸ್ ಚಾನೆಲ್ ಸೋನಿ ಆಗಿದೆ. ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ. ಆದರೆ ಡಿಡಿ ಸ್ಪೋರ್ಟ್ಸ್‌ನಲ್ಲಿ ಭಾರತ-ಪಾಕ್ ಮ್ಯಾಚ್ ಅನ್ನು ಎಲ್ಲರೂ ಉಚಿತವಾಗಿ ವೀಕ್ಷಿಸಬಹುದು. ಏಷ್ಯಾಕಪ್‌ನ ಟೀಮ್ ಇಂಡಿಯಾ ಪಂದ್ಯಗಳನ್ನು ಡಿಡಿ ಸ್ಪೋರ್ಟ್ಸ್‌ನಲ್ಲಿ ಉಚಿತವಾಗಿ ಪ್ರಸಾರ ಮಾಡಲಾಗುತ್ತಿದೆ. ಡಿಡಿ ಸ್ಪೋರ್ಟ್ಸ್‌ನಲ್ಲಿ ಪ್ರಸಾರ ಆಗುವ ಯಾವುದೇ ಪಂದ್ಯಕ್ಕೆ ವೀಕ್ಷಕರು ದುಡ್ಡು ಕೊಡುವಂತೆ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ